ಡಾ. ಪುನೀತ್ ರಾಜ್ ಕುಮಾರ್ ರವರಿಗೆ ಬಸವಶ್ರೀ ಪ್ರಶಸ್ತಿ ಪ್ರಧಾನ : ಸ್ವೀಕರಿಸಿದ ಅಶ್ವಿನಿ ಪುನೀತ್ ರಾಜ್ ಕುಮಾರ್

ಐದು ಲಕ್ಷ ರೂಪಾಯಿ ನಗದು, ಪ್ರಶಸ್ತಿ ಫಲಕ ನೀಡಿ ಗೌರವನ್ನು ಪ್ರಶಸ್ತಿಯ ರೂಪದಲ್ಲಿ ಪ್ರದಾನಿಸಲಾಗಿದೆ. 

ಚಿತ್ರದುರ್ಗ: ಡಾ.ಪುನೀತ್ ರಾಜ್ ಕುಮಾರ್ ಅವರಿಗೆ ಪ್ರತಿಷ್ಟಿತ ಬಸವಶ್ರೀ ಪ್ರಶಸ್ತಿ ಪ್ರಧಾನ ಮಾಡಲಾಗಿದೆ. ಪುನೀತ್  ರಾಜ್ ಕುಮಾರ್ ಅವರ ಪತ್ನಿ ಅಶ್ವಿನಿ  ಪುನೀತ್ ರಾಜ್ ಕುಮಾರ್ ಅವರು ಡಾ.ಶಿವಮೂರ್ತಿ ಮುರುಘಾ ಶರಣದಿಂದ ಮರಣೋತ್ತರ ಬಸವಶ್ರೀ ಪ್ರಶಸ್ತಿ ಸ್ವೀಕರಿಸಿದ್ದಾರೆ. ಮುರುಘಾ ಶ್ರೀಗಳ ಕೋರಿಕೆಯಂತೆ ಪ್ರಶಸ್ತಿ ಸ್ವೀಕರಿಸಿದ ನಂತರ ಅಶ್ವಿನಿ ಪುನೀತ್ ರಾಜ್ ಕುಮಾರ್ ಮಾತನಾಡಿ, ಧನ್ಯವಾಗಳನ್ನು ಅರ್ಪಿಸಿದ್ದಾರೆ. ಈ ವೇಳೆ ಅವರು ಭಾವುಕರಾಗಿದ್ದಾರೆ. ಮುರುಘಾಮಠ ಕೊಡಮಾಡುವ ಪ್ರತಿಷ್ಠಿತ ಬಸವಶ್ರೀ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಚಿತ್ರದುರ್ಗದ ಮುರುಘಾಮಠದ ಅನುಭವ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ.

ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರ ಜೊತೆ ಆಗಮಿಸಿರುವ ರಾಘವೇಂದ್ರ ರಾಜ್ ಕುಮಾರ್ ಅವರ ಪತ್ನಿ ಮಂಗಳ, ಮಾವ ಚಿನ್ನೇಗೌಡ ಮುರುಘಾಮಠಕ್ಕೆ ಆಗಮಿಸಿದ್ದರು. ಜೊತೆಗೆ ಪುನೀತ್ ರಾಜ್ ಕುಮಾರ್ ಅವರ ಅಪಾರ ಸಂಖ್ಯೆಯ ಅಭಿಮಾನಿಗಳು ಸಹ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಪಿಟಿ ಉಷಾ(2009), ಮಲಾಲಾ ಯೂಸುಫ್ ಜಾಯ್(2014), ಪಿ ಸಾಯಿನಾಥ್ (2016), ಡಾ ಕೆ ಕಸ್ತೂರಿರಂಗನ್ (2020) ಅವರು ಇತ್ತೀಚಿನ ದಿನಗಳಲ್ಲಿ ಮುರುಘಾ ಮಠ ಘೋಷಿಸುವ ಬಸವಶ್ರೀ ಪ್ರಶಸ್ತಗೆ ಭಾಜರಾಗಿದ್ದಾರೆ.

ಶಿವಶರಣ ಮಾದಾರ ಚನ್ನಯ್ಯ ಮಠದ ಬಸವಮೂರ್ತಿ ಮಾದಾರ ಚನ್ನಯ್ಯಶ್ರೀ, ಕೃಷಿ ಸಚಿವ ಬಿ. ಸಿ. ಪಾಟೀಲ್, ಶಾಸಕ ಜಿ.ತಪ್ಪಾರೆಡ್ಡಿ, ಎಂಎಲ್ ಸಿ ಕೆ ಎಸ್ ನವೀನ್ ಸೇರಿ ಗಣ್ಯರು ಸಮಾರಂಭದಲ್ಲಿ ಉಪಸ್ಥಿಯರಿದ್ದರು.

 

Related