ಮೃತರ ಕುಟುಂಬಕ್ಕೆ 2.ಲಕ್ಷ ಪರಿಹಾರ:  ಸಿಎಂ

ಮೃತರ ಕುಟುಂಬಕ್ಕೆ 2.ಲಕ್ಷ ಪರಿಹಾರ:  ಸಿಎಂ

ಮಂಡ್ಯ:  ಹಾಸನ ಜಿಲ್ಲೆಯ ಅರಸೀಕೆರೆಯಲ್ಲಿ ಬಸ್ ಅಪಘಾತವಾಗಿದ್ದು, ದುರಂತವಾಗಿದ್ದು ,  ಸುಮಾರು 9 ಜನ ಮೃತಪಟ್ಟಿದ್ದಾರೆ. ಮೃತರ  ಕುಟುಂಬಕ್ಕೆ ತಲಾ 2 ಲಕ್ಷ  ರೂ.ಗಳ ಪರಿಹಾರ   ನೀಡಲಾಗುವುದೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು.

ಅವರು ಇಂದು  ಕೆ.ಆರ್.ಪೇಟೆಯ ಅಂಬಿಗ್ರಾಮ ಹೆಲಿಪ್ಯಾಡ್ ಗೆ  ಬಂದಿಳಿದು ಕಾರ್ಯಕ್ರಮಕ್ಕೆ ತೆರಳುವ ಮುನ್ನ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು.

ಟ್ಯಾಂಕರ್ ಮತ್ತು ಬಸ್ಸುಗಳ ನಡುವೆ ಅಪಘಾತವಾಗಿದೆ. ಅಪಘಾತದ ಸ್ಥಳಕ್ಕೆ ಕೂಡಲೇ  ಧಾವಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಿ ಮರಣಿಸಿದವರ ಮರಣೋತ್ತರ ಪರೀಕ್ಷೆ ಮಾಡಬೇಕು ಎಂದು ಸೂಚಿಸಲಾಗಿದೆ ಎಂದರು.

ಮಳೆ ದೀರ್ಘಕಾಲಿಕ ಹಾಗೂ ತುರ್ತು  ಕಾಮಗಾರಿಗಳಿಗೆ ಅನುದಾನ

ರಾಜ್ಯದಲ್ಲಿ ಮತ್ತೆಯಾಗುತ್ತಿದ್ದು, ದೀರ್ಘಕಾಲಿಕ ಶಾಶ್ವತ ಕಾಮಗಾರಿಗಳು ಮತ್ತು ತುರ್ತು ಕಾಮಗಾರಿಗಳನ್ನು ಕೂಡಲೇ ಕೈಗೊಳ್ಳಲು ಅಗತ್ಯ ಅನುದಾನ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಮಳೆಗೆ ಸಂಬಂಧಿಸಿದಂತೆ ಈಗಾಗಲೇ ಸರ್ಕಾರ ಕ್ರಮ ಕೈಗೊಂಡಿದೆ. ನಿರಂತರವಾಗಿ ಕೆಲಸವಾಗುವಂತೆ ಜಿಲ್ಲಾಧಿಕಾರಿ ಗಳೊಂದಿಗೆ ನಡೆದ ವೀಡಿಯೋ ಸಂವಾದದಲ್ಲಿ ಸೂಚನೆಗಳನ್ನು ನೀಡಲಾಗಿದೆ.  ಮಂಡ್ಯ ಜಿಲ್ಲೆಯಲ್ಲಿ ಹತ್ತು ಹಲವಾರು ಕೆರೆಗಳು ತುಂಬಿ ತೊಂದರೆಯಾಗಿದೆ. ತಕ್ಷಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಿದೆ.  ತಿಳಿಸಲಾಗಿದೆ. ಮೂಲಭೂತ ಸೌಕರ್ಯಕ್ಕೆ  600 ಕೋಟಿ ರೂ.ಗಳನ್ನು ಒದಗಿಸಲಾಗಿದೆ. ದೀರ್ಘಕಾಲಿಕ ಪರಿಹಾರಕ್ಕೆ ಅಗತ್ಯವಿರುವ ಅನುದಾನವನ್ನೂ ಬಿಡುಗಡೆ ಮಾಡಲಾಗುವುದು ಎಂದರು.

ನಾಳೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ಸಭೆ ನಡೆಯಲಿದ್ದು, ಅಲ್ಲಿ ಈ ವಿಚಾರವನ್ನು ವ್ಯಾಪಕವಾಗಿ ಚರ್ಚಿಸಿ ಪರಿಹಾರ ಸೂಚಿಸಲಾಗುವುದು ಎಂದು ತಿಳಿಸಿದರು.

Related