ಬೆಂಗಳೂರು: ರಾಜ್ಯದ ರಾಜಧಾನಿ ಬೆಂಗಳೂರು ನಗರದಲ್ಲಿ ಇತ್ತೀಚೆಗೆ ಡ್ರಗ್ಸ್ ಹಾಗೂ ಗಾಂಜಾ ಮಾರುವವರ ಹಾವಳಿ ಹೆಚ್ಚಾಗಿರುವುದರಿಂದ ನಗರದಲ್ಲಿರುವ ಯುವಕ ಯುವತಿಯರು ಡ್ರಗ್ಸ್ ಹಾಗೂ ಗಾಂಜಾಗೆ ಬಲಿಯಾಗುತ್ತಿದ್ದಾರೆ.
ಇನ್ನು ಬೆಂಗಳೂರು ನಗರ ಪೋಲೀಸರು ಇದೀಗ ಭರ್ಜರಿ ಭೇಟಿಯಾಗಿತ್ತು ಗಾಂಜಾ ಸಪ್ಲೈಯರ್ಗಳನ್ನು ವಶಕ್ಕೆ ಪಡೆದಿದ್ದಾರೆ.
ಹೌದು, ಬೆಂಗಳೂರು ನಗರದಲ್ಲಿ ಕಳೆದ 1 ತಿಂಗಳಲ್ಲಿ 42 ಗಾಂಜಾ ಡ್ರಗ್ಸ್ ಪ್ರಕರಣಗಳು ದಾಖಲಾಗಿದ್ದು, 64 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ್ ಹೇಳಿದ್ದಾರೆ. ಇದನ್ನೂ ಓದಿ: ʼಕೈʼ ಸರ್ಕಾರ 60% ಲಂಚ ಹೊಡೆದು ಲೂಟಿ ಮಾಡುತ್ತಿದೆ: ಆರ್ ಅಶೋಕ್
ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಂಧಿತ ಆರೋಪಿಗಳಿಂದ 140 ಕೆಜಿ ಗಾಂಜಾ, 1 ಕೆಜಿ ಗಾಂಜಾ ಆಯಿಲ್, 609 ಗ್ರಾಂ ಆಫೀಮು, 770 ಗ್ರಾಂ ಹೆರಾಯಿನ್, 2ಕೆಜಿ 436 ಗ್ರಾಂ ಚರಸ್, 509 ಗ್ರಾಂ ಕೊಕೇನ್, 5 ಕೆಜಿ 397 ಗ್ರಾಂ ಎಂಡಿಎಂಎ, 2569 LSD ಸ್ಟ್ರಿಪ್, 6 ಕೆಜಿ 725 ಗ್ರಾಂ ಅಂಫಟಮೈನ್, 11,908 ಎಕ್ಸ್ ಟೆಸಿ ಮಾತ್ರೆ ಜಪ್ತಿ ಮಾಡಲಾಗಿದೆ ಎಂದು ತಿಳಿಸಿದರು.