ಮುಡಿ ತೆಗೆಸಿದಕ್ಕೆ ಐರಾ ಗರಂ

ಮುಡಿ ತೆಗೆಸಿದಕ್ಕೆ ಐರಾ ಗರಂ

ಬೆಂಗಳೂರು, ಮಾ.12 : ರಾಕಿಂಗ್ ಸ್ಟಾರ್ ಯಶ್, ರಾಧಿಕ ದಂಪತಿ ಹರಕೆಯಂತೆ ನಂಜನಗೂಡು ನಂಜುಂಡೇಶ್ವರನ ಸನ್ನಿಧಿಯಲ್ಲಿ ತಮ್ಮ ಮಗಳ ಐರಾ ಮುಡಿ ತೆಗಸಿ, ಹರಕೆ ತೀರಿಸಿದ್ದಾರೆ. ಯಶ್ ದಂಪತಿ ದೇವಾಲಯ ಗರ್ಭ ಗುಡಿಯ ಮುಂಭಾಗದಲ್ಲಿ ಕುಳಿತು ದೇವರಿಗೆ ಪ್ರಾರ್ಥನೆ ಸಲ್ಲಿಸಿದರು.ರಾಕಿಂಗ್ ದಂಪತಿ ಮುದ್ದು ಮಗಳು ಐರಾಳ ಮುಡಿ ತೆಗೆಸಿದ್ದಾರೆ. ಇದೀಗ ಮುಡಿ ತೆಗೆಸಿದ್ದಕ್ಕೆ ಐರಾ ತನ್ನ ತಂದೆಯ ವಿರುದ್ಧ ಗರಂ ಆಗಿದ್ದಾಳೆ. ಯಶ್, ಐರಾ ಜೊತೆಗಿರುವ ಫೋಟೋವೊಂದನ್ನು ಇನ್ಸ್ಟಾದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಐರಾ ತನ್ನ ತಂದೆಯನ್ನು ಕೋಪದಿಂದ ನೋಡುತ್ತಿದ್ದಾಳೆ.

Related