ಮಗನಿಗೆ ಸಚಿನ್ ತೆಂಡೂಲ್ಕರ್ ಹೇರ್ ಕಟ್

ಮಗನಿಗೆ ಸಚಿನ್ ತೆಂಡೂಲ್ಕರ್ ಹೇರ್ ಕಟ್

ಮುಂಬೈ: ಭಾರತದ ಕ್ರಿಕೆಟ್ ಕಿಂಗ್ ಸಚಿನ್ ತೆಂಡೂಲ್ಕರ್ ತಮ್ಮ ಮಗ ಅರ್ಜುನ್ ತೆಂಡೂಲ್ಕರ್ಗೆ ಹೇರ್ ಕಟ್ ಮಾಡಿದ ವಿಡೀಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ವಿಡಿಯೋ ವೈರಲ್ ಆಗಿದೆ.

ಮಗ ಅರ್ಜುನ್ ಬಹಳ ಖುಷಿಯಿಂದ ತಂದೆ ಸಚಿನ್ ತೆಂಡೂಲ್ಕರ್ ಬಳಿ ಹೇರ್ ಕಟ್ ಮಾಡಿಸಿಕೊಂಡಿದ್ದಾರೆ.

ಮಗನಿಗೆ ಹೇರ್ ಕಟ್ ಮಾಡುತ್ತಿರುವ ವಿಡಿಯೋ ಹಾಕಿ, ತಂದೆಯಾಗಿ ನಾವು ಎಲ್ಲಾ ಕೆಲಸಗಳನ್ನು ಮಾಡಬೇಕಾಗುತ್ತದೆ. ಮಕ್ಕಳೊಟ್ಟಿಗೆ ಆಟ ಆಡಬೇಕಾಗುತ್ತದೆ. ಜಿಮ್ಗೆ ಹೋಗಬೇಕಾಗುತ್ತದೆ. ಹೇರ್ ಕಟ್ ಸಹ ಮಾಡಬೇಕಾಗುತ್ತದೆ. ನಿನಗೆ ಯಾವ ರೀತಿಯ ಹೇರ್ ಕಟ್ ಮಾಡಿದರೆ ಸುಂದರವಾಗಿಯೇ ಕಾಣುತ್ತೀಯಾ. ನನ್ನ ಸಹಾಯಕಳಾದ ಮಗಳು ಸಾರಾ ತೆಂಡೂಲ್ಕರ್ಗೆ ಧನ್ಯವಾದಗಳು ಎಂದು ಹೇಳಿದ್ದಾರೆ.

ಈ ಪೋಸ್ಟನ್ನು 9 ಲಕ್ಷಕ್ಕೂ ಹೆಚ್ಚು ಮಂದಿ ಇಷ್ಟಪಟ್ಟಿದ್ದು, 5 ಸಾವಿರಕ್ಕೂ ಹೆಚ್ಚು ಮಂದಿ ಕಮೆಂಟ್ ಮಾಡಿದ್ದಾರೆ.

Related