ಕಿಯೋನಿಕ್ಸ್ ನೂತನ ಕಟ್ಟಡ ಉದ್ಘಾಟನೆ

ಕಿಯೋನಿಕ್ಸ್  ನೂತನ ಕಟ್ಟಡ ಉದ್ಘಾಟನೆ

ಬೊಮ್ಮನಹಳ್ಳಿ: ಕಿಯೋನಿಕ್ಸ್ ಸಂಸ್ಥೆಯು ಭಾರತೀಯ ತಂತ್ರಜ್ಞಾನ ಸಂಬಂಧಿತ ಕೈಗಾರಿಕೆಗಳಿಗೆ ವಿಶ್ವದರ್ಜೆಯ ಮೂಲಭೂತ ಸೌಲಭ್ಯಗಳನ್ನು ಒದಗಿಸುತ್ತಿರುವುದು ಶ್ಲಾಘನೀಯವೆಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನುಡಿದರು.

ಸುಮಾರು 33 ಕೋಟಿ ವೆಚ್ಚದಲ್ಲಿ, 82 ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ ಎಚ್‍ಎಸ್‍ಆರ್ ಲೇಜೌಟ್‍ನಲ್ಲಿ ನಿರ್ಮಿಸಲಾದ ಕರ್ನಾಟಕದ ಯುವ ಉದ್ಯಮಿಗಳನ್ನು ಬೆಂಬಲಿಸುವ ಸಲುವಾಗಿ ಸ್ಥಾಪಿತವಾದ (ಕಿಯೋನಿಕ್ಸ್) ಕರ್ನಾಟಕ ರಾಜ್ಯ ವಿದ್ಯುತ್ಮಾನ ಅಭಿವೃದ್ಧಿ ನಿಗಮ ನಿಯಮಿತ ಘಟಕದ ನೂತನ ಕಟ್ಟಡವನ್ನು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಉದ್ಘಾಟಿಸಿ, ಈ ವೇಳೆ ಮಾತನಾಡಿದ ಅವರು, ಇನ್ನು ಅಗರದಲ್ಲಿ ಐಟಿ ಪಾರ್ಕ್‍ನ್ನು ರಾಜ್ಯ ಸರ್ಕಾರದ ಸಹಯೋಗದಲ್ಲಿ ಸ್ಥಾಪನೆಗೆ ಕ್ರಮ ಕೈಗೊಂಡಿರುವುದು ಸ್ವಾಗತಾರ್ಹವಾಗಿದೆ. ನ್ಯಾಷನಲ್ ಅಸೋಸಿಯೇಶನ್ ಆಫ್ ಸಾಫ್ಟ್‍ವೇರ್ ಮತ್ತು ಸರ್ವಿಸ್ ಸಂಸ್ಥೆ ಇಂಟರ್ನೆಟ್ ಮತ್ತು ಮೊಬೈಲ್ ಅಸೋಸಿಯೇಷನ್ ಆಫ್ ಇಂಡಿಯಾ ಹಾಗೂ ಮಾಹಿತಿ ತಂತ್ರಜ್ಞಾನ ನಿರ್ದೇಶನಾಲಯ ಈ ಕೇಂದ್ರವನ್ನು ಮಾಹಿತಿ ತಂತ್ರಜ್ಞಾನದ ಹೊಸ ಪ್ರತಿಭೆಗಳಿಗೆ ಮತ್ತು ಯುವ ಉದ್ಯಮಿಗಳನ್ನು ಉತ್ತೇಜಿಸಲು ಬಳಸಲಿದೆ ಎಂದು ನುಡಿದರು.

ಡಿಸಿಎಂ ಅಶ್ವಥ್ ನಾರಾಯಣ್ ಮಾತನಾಡಿ, ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಬಿಎಸ್ ಯಡಿಯೂರಪ್ಪ ಅವರ ಪ್ರೋತ್ಸಾಹ ಮೆಚ್ಚುವಂತದ್ದು. ಕರ್ನಾಟಕ್ ಡಿಜಿಟಲ್ ಎಕನಾಮಿಕ್ ವಿಷನ್ ಇದು ರಾಜ್ಯ ಮತ್ತು ದೇಶಕ್ಕೆ ಮಾದರಿಯಾಗುವಂತಹ ಯೋಜನೆ. ಸುಮಾರು 5 ವರ್ಷಗಳೊಳಗೆ 52 ಬಿಲಿಯನ್ ಡಾಲರ್‍ನಿಂದ 150 ರಿಂದ 200 ಡಾಲರ್‍ಗಳ ವರೆಗೆ ಸಾಧಿಸುವ ಗುರಿ ಹೊಂದಿದ್ದೇವೆ. ಶಾಸಕ ಸತೀಶ್ ರೆಡ್ಡಿ ಅವರ ಕನಸು ಹಾಗೂ ಇಚ್ಛಾಶಕ್ತಿಗೆ ಸರ್ಕಾರ ಸಹಕಾರ ನೀಡಲಿದೆ ಎಂದರು.
ಈ ಸಂದರ್ಭದಲ್ಲಿ ಶಾಸಕ ಸತೀಶ್ ರೆಡ್ಡಿ, ಕಿಯೋನಿಕ್ಸ್ ಆಡಳಿತ ಮಂಡಳಿ ಸದಸ್ಯರು, ಅನೇಕ ಗಣ್ಯರು ಉಪಸ್ಥಿತರಿದ್ದರು.

Related