ಹೊಸಕೋಟೆ: ಹೊಸಕೋಟೆ ತಾಲ್ಲೂಕಿನ ಸೂಲಿಬೆಲೆ ಹೋಬಳಿಯ ಹಾಗೂ ಕಸಬಾ ಹೋಬಳಿಯ ಉಪ್ಪಾರಹಳ್ಳಿಬೆಟ್ಟಹಳ್ಳಿ ಗ್ರಾಮದಲ್ಲಿ ರೈತರು ಬೆಳೆದಿರುವ ಲಕ್ಷಾಂತರ ಬೆಲೆಬಾಳುವ ಹೂಗಳು, ದಪ್ಪಮೆಣಸಿನಕಾಯಿ ತೋಟಕ್ಕೆ ಅಧಿಕಾರಿಗಳೊಂದಿಗೆ ಶಾಸಕರಾದ ಶರತ್ ಬಚ್ಚೇಗೌಡ ಭೇಟಿ ನೀಡಿದರು.
ಲಾಕ್ ಡೌನ್ ಹಿನ್ನೆಲೆಯಲ್ಲಿ ರೈತರು ಬೆಳೆದ ಬೆಳೆಗಳಿಗೆ ಮಾರುಕಟ್ಟೆ ವ್ಯವಸ್ಥೆಯಿಲ್ಲದೆ ಕಂಗಾಲಾಗಿರುವುದರಿಂದ ರೈತರಿಗೆ ಆತ್ಮಸ್ಥೈರ್ಯ ತುಂಬಿ, ರೈತರ ವರದಿ ಸರ್ಕಾರಕ್ಕೆ ನೀಡುವ ಭರವಸೆ ನೀಡಲಾಯಿತು..
ಈ ಸಂದರ್ಭ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರಾದ ಪ್ರಶಾಂತ್ , ಮಾಜಿ ಜಿಲ್ಲಾ ಪಂ, ಅಧ್ಯಕ್ಷರಾದ ಸಿ,ಮುನಿಯಪ್ಪನವರು, ಬೆಳೆ ಬೆಳೆದ ರೈತ ಸೀನಪ್ಪ ಮುಂತಾದವರಿದ್ದರು.