ಸಿರವಾರ: ಲಾಕ್‍ಡೌನ್ ಘೋಷಣೆಯಾದ ನಂತರ ತಾಲೂಕಿನಲ್ಲಿ ಮದ್ಯ ಮಾರಾಟ ಹಾಗೂ ಜೂಜಾಟ ಆಡುವವರ ಸಂಖ್ಯೆ ಅಧಿಕವಾಗಿದ್ದು, ಈ ಸನ್ನಿವೇಶವನ್ನು ತಮ್ಮ ದಂಧೆಗೆ ಬಳಸಿಕೊಳ್ಳುವ ಪ್ರವೃತ್ತಿ ಕಂಡುಬರುತ್ತಿದೆ. ಕೆಲವು ಹಳ್ಳಿಗಳಲ್ಲಿ ಹೊರಗಿನ ಜನರ ಪ್ರವೇಶ ನಿಷೇಧಿಸಿ ಒಳಗಡೆ ಜೂಜಾಟಕ್ಕೆ ಪ್ರೇರಣೆ ನೀಡಲಾಗುತ್ತಿದೆ ಎಂದು ವದಂತಿಗಳು ಹರಿದಾಡುತ್ತಿವೆ.
ಲಾಕ್‍ಡೌನ್ ನಂತರಒಟ್ಟು ನೂರಕ್ಕೂಅಧಿಕ ಬೈಕುಗಳನ್ನು ವಶಪಡಿಸಿಕೊಂಡು 25,000ಕ್ಕೂ ಅಧಿಕ ಹಣವನ್ನು ವಸೂಲಿ ಮಾಡಲಾಗಿದೆ. ಜೂಜಾಟದ ಎರಡು ಪ್ರಕರಣಗಳು ದಾಖಲಾಗಿದ್ದು, ಒಟ್ಟು 12770 ರೂಪಾಯಿ ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಬಂದ್ ಆದೇಶ ಉಲ್ಲಂಘಿಸಿ ಮದ್ಯ ಮಾರಾಟದಲ್ಲಿ ತೊಡಗಿದ್ದ ಆರೋಪದಡಿಯಲ್ಲಿ 3 ಕೇಸುಗಳು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದೆ. ಇನ್ನುಳಿದ ಒಂದು ಪ್ರಕರಣ ಅಬಕಾರಿ ವ್ಯಾಪ್ತಿಯಲ್ಲಿ ದಾಖಲಾಗಿ ಒಟ್ಟು ಎರಡು ಲಕ್ಷಕ್ಕೂ ಅಧಿಕ ಮೊತ್ತದ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ.
ಜೂಜುದಂಧೆ, ಮಧ್ಯೆ ಮಾರಾಟ ಜೋರು
ಲಾಕ್‍ಡೌನ್ ನಿಂದ ಪಟ್ಟಣ ಸೇರಿದಂತೆ ಪಕ್ಕದ ಹಳ್ಳಿಗಳಾದ ನಾರಬಂಡಿ, ಹೀರಾ, ಚಿಂಚರಕಿ, ಮಲ್ಲಟ, ನವಲಕಲ್, ಮಾರಾಟ, ಸೇರಿದಂತೆ ಹಲವೆಡೆ ಬಾರ್ ಗಳ ಬಂದ್ ಬಳಿಕ ದುಪ್ಪಟ್ಟು ರೇಟಿಗೆ ಗುಂಡು ಮಾರಾಟವಾಗುತ್ತಿದೆ. ಜೂಜಿನ ಆಟಗಳಾದ ಅಂದರ್ ಬಾಹರ್, ಜೋಡಿ ಆಟ ಜೋರಾಗಿ ನಡೆಯುತ್ತಿದೆ. ಹಲವರು ಬೆಳಗಿನ ತಿಂಡಿ ಮುಗಿಸಿದ ತಕ್ಷಣ ಜೂಜು ಅಡ್ಡೆ ಸೇರಿಕೊಳ್ಳುತ್ತಿದ್ದಾರೆ. ರಾತ್ರಿಯವರೆಗೂ ಜೂಜಾಡುತ್ತಿರುವ ದೃಶ್ಯ ಕಂಡು ಬರುತ್ತಿದ್ದು, ಕೆಲವೆಡೆ ಪೊಲಿಸರೇ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಅಪಘಾತದಲ್ಲಿ ಇಳಿಮುಖ
ರಾಯಚೂರು- ಲಿಂಗಸ್ಗೂರು ಹೆದ್ದಾರಿಯಲ್ಲಿ ವಾಹನ ಸಂಚಾರ ಬಹುತೇಕ ಸ್ಥಗಿತಗೊಂಡಿರುವ ಕಾರಣ ಅಪಘಾತ ಸಂಖ್ಯೆಯಲ್ಲಿ ಇಳಿಮುಖವಾಗಿದೆ. ಈ ಸಮಾಧಾನಕರ ನಡುವೆಯೂ ಒಂದೆರಡು ಕೌಟುಂಬಿಕ ಕಲಹ ದಾಖಲಾಗಿದೆ.
ಸಾಮಾಜಿಕ ಅಂತರ ಕಾಯ್ದುಕೊಳ್ಳದ ಜನ
ಇನ್ನು ಕೊರೋನಾ ವೈರಸ್ ವಿರುದ್ಧದ 28ನೇ ದಿನ ಮುಂದುವರೆದರೂ ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿಲ್ಲ. ತಾಲೂಕಿನಾದ್ಯಂತ ಲಾಕ್‍ಡೌನ್ ಇದ್ದರೂ ಜನ ತಮ್ಮ ಜೀವನದ ಅವಶ್ಯಕವಾದ ಸಾಮಗ್ರಿಗಳನ್ನು ಕೊಳ್ಳಲು ಮುಂಜಾನೆ 7 ರಿಂದ 11 ರ ವರೆಗೆ ವೈಯಕ್ತಿಕ ಅಂತರವನ್ನು ಕಾಯ್ದು ಕೊಳ್ಳದೆ ಮುಗಿಬೀಳುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಇದು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.
***
ತಾಲೂಕಿನಲ್ಲಿ ಮದ್ಯ ಮಾರಾಟ ಮತ್ತುಜೂಜುಆಡುವುದುಕಂಡುಬಂದಲ್ಲಿಅಂತಹವರ ವಿರುದ್ಧ ನಿರ್ದಾಕ್ಷಿಣ್ಯಕ್ರಮ ಹಾಗೂ ಕಾನೂನು ಕ್ರಮ ಕೈಗೊಳ್ಳಲಾಗುವುದು. ಯಾರಾದರೂ ಜೂಜಾಡುವುದು ಕಂಡು ಬಂದಲ್ಲಿ ಸಾರ್ವಜನಿಕರು ಪೆÇಲೀಸ್ ಇಲಾಖೆಗೆ ಮಾಹಿತಿಯನ್ನು ನೀಡಬಹುದು. ಮಾಹಿತಿ ನೀಡಿದವರ ಹೆಸರನ್ನು ಗೌಪ್ಯವಾಗಿ ಇಡಲಾಗುವುದು.
-ಸುಜಾತಾ ನಾಯಕ್, ಪಿ.ಎಸ್.ಐ. ಸಿರವಾರ.