ಬೆಂಗಳೂರು : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ 2020-21 ನೇ ಸಾಲಿನ ಬಜೆಟ್ ಅಧಿವೇಶನವನ್ನು ಇದೇ ಮೊಟ್ಟಮೊದಲ ಬಾರಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಎಲ್.ಶ್ರೀನಿವಾಸ್ ಅವರು ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಮಂಡಿಸಿದರು.
ಇದೊಂದು ಐತಿಹಾಸಿಕ ಬಜೆಟ್ ಆಗಿದ್ದು, ಈ ವೇಳೆ ಮಹಾಪೌರರಾದ ಗೌತಮ್ ಕುಮಾರ್, ಆಯುಕ್ತರಾದ ಅನಿಲ್ ಕುಮಾರ್, ಉಪಮಹಾಪೌರರಾದ ರಾಮ್ ಮೋಹನ್ ರಾಜ್ ಅವರ ಉಪಸ್ಥಿತಿಯಲ್ಲಿ ಬಜೆಟ್ ಮಂಡನೆ ಮಾಡಲಾಯಿತು.
ಈ ಬಜೆಟ್ 10,894 ಕೋಟಿ ಮೊತ್ತದಾಗಿದ್ದು, ಮುಖ್ಯವಾಗಿ ಶಿಕ್ಷಣ, ಆರೋಗ್ಯ, ಘನತಾಜ್ಯ ಕಸವಿಲೇವಾರಿ ಸೇರಿದಂತೆ ಹಲವಾರು ಜನಪರ ಯೋಜನೆಗಳಿಗೆ ಆದ್ಯತೆ ನೀಡಲಾಗಿದೆ. ಆಯಾ ವಲಯ ಮಹಾನಗರ ಪಾಲಿಕೆ ಸದಸ್ಯರುಗಳು 8 ವಲಯ ಕಚೇರಿಗಳಲ್ಲಿ ಇರುವಂತಹ ಸಭಾಂಗಣದಿಂದಲೇ ವಿಡಿಯೊ ಕಾನ್ಫರೆನ್ಸ್ ಮೂಲಕ ಬಜೆಟ್ ಸಮಾವೇಶದಲ್ಲಿ ಭಾಗವಹಿಸಿ ಬಜೆಟ್ ಅನ್ನು ಅನುಮೋದಿಸಿದರು.
ಈ ಸಮಾವೇಶದಲ್ಲಿ ಬೊಮ್ಮನ ಹಳ್ಳಿ ಸ್ಥಳೀಯ ಶಾಸಕ ಎಂ. ಸತೀಶ್ ರೆಡ್ಡಿ, ಬಿಬಿಎಂಪಿ ಆಯುಕ್ತ ರಾಮಕೃಷ್ಣ, ಪಾಲಿಕೆ ಸದಸ್ಯೆ ಶೋಭಾ ಮುನಿರಾಂ, ಸಿಂಗಸಂದ್ರ ವಾರ್ಡ್ ಪಾಲಿಕೆ ಸದಸ್ಯೆ ಶಾಂತಬಾಬು, ಹೊಂಗಸಂದ್ರ ವಾರ್ಡ್ ಪಾಲಿಕೆ ಸದಸ್ಯೆ ಭಾರತಿ ರಾಮಚಂದ್ರ ಸೇರಿದಂತೆ ಒಟ್ಟು 16 ವಾರ್ಡ್ ಪಾಲಿಕೆ ಸದಸ್ಯರುಗಳು ಹಾಗೂ ಪಾಲಿಕೆ ಅಧಿಕಾರಿಗಳು ಭಾಗವಹಿಸಿದ್ದರು.
***
ಬಿಬಿಎಂಪಿ ಬಜೆಟ್ ಹೈಲೈಟ್ಸ್
ಬಜೆಟ್ ಗಾತ್ರ ಒಟ್ಟು 10899.23 ಕೋಟಿ
ಆಡಳಿತ
• ಪಾಲಿಕೆಯಲ್ಲಿ ಖಾಲಿ ಇರುವ ವಿವಿಧ ವೃಂದದ ಒಟ್ಟು 938 ಹುದ್ದೆಗಳ ನೇಮಕ
• ಪಾಲಿಕೆಯ ಖಾಯಂ ಮತ್ತು ನಿವೃತ್ತ ಅಧಿಕಾರಿ/ನೌಕರರ ಕುಟಂಬದವರಿಗೆ ಆರೋಗ್ಯ ರಕ್ಷಣೆಗಾಗಿ ಆರೋಗ್ಯ ವಿಮೆ
• ಲೆಕ್ಕಪತ್ರಗಳ ನಿರ್ವಹಣೆಗೆ “ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆಯವ್ಯಯ ಮತ್ತು ಲೆಕ್ಕಪತ್ರ ನಿಯಮಾವಳಿಗಳು-2020″ ರಚನೆ
ಸಂಪನ್ಮೂಲ ಸುಧಾರಣೆ ಕ್ರಮಗಳು
• “ಬಿ” ವಹಿಯ ಆಸ್ತಿಗಳನ್ನು “ಎ” ಖಾತಾಗಳಾಗಿ ಪರಿವರ್ತನೆಗೆ ಸರ್ಕಾರದ ಅನುಮೋದನೆ ನಿರೀಕ್ಷೆ
• ಹೊಸ ವಲಯಗಳಲ್ಲಿನ ಆಸ್ತಿಗಳ ಖಾತಾ ನಕಲು ಮತ್ತು ಖಾತಾ ದೃಡೀಕರಣ ಪತ್ರಗಳನ್ನು ಗಣಕೀಕರಣ
• ಖಾತಾ ನಕಲು ಮತ್ತು ಖಾತಾ ದೃಢೀಕರಣ ಶುಲ್ಕ ದ್ವಿಗುಣ
• 3 ವರ್ಷಕ್ಕೂ ಹೆಚ್ಚು ಆಸ್ತಿ ತೆರಿಗೆ ಬಾಕಿ ವಿವರವನ್ನು ಉಪ ನೋಂದಣಾಧಿಕಾರಿಗಳ ಕಛೇರಿಯ ಋಣಭಾರ ಪತ್ರದಲ್ಲಿ ನಮೂದನೆಗೆ ಕ್ರಮ
• ಬಾಕಿ ಇರುವ ಸುಧಾರಣಾ ಶುಲ್ಕ ಅಂದಾಜು ರೂ.300 ಕೋಟಿ ವಸೂಲಾತಿಗೆ ಕ್ರಮ.
• ಉದ್ದಿಮೆ ಪರವಾನಗಿ ವ್ಯವಸ್ಥೆಯನ್ನು ಸರಳೀಕರಣಗೊಳಿಸಲಾಗುವುದು,
• ನಗರದಲ್ಲಿರುವ ಹೋಟೆಲ್ಗಳನ್ನು ಎ, ಬಿ, ಸಿ, ಡಿ ಮಾದರಿಯಲ್ಲಿ ವರ್ಗೀಕರಣ ಗೊಳಿಸಲಾಗುವುದು,
•
• ಕೇಂದ್ರ ಸರ್ಕಾರದ ಅನುದಾನ ರೂ 558 ಕೋಟಿ
• ರಾಜ್ಯ ಸರ್ಕಾರದ ಅನುದಾನ ರೂ.3789.99
ಕಾರ್ಯಕ್ರಮಗಳು
* ಶೇ.24.10% ಅನುದಾನದ ಕಾರ್ಯಕ್ರಮಗಳಿಗೆ ರೂ.361.34 ಕೋಟಿ
* ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಕಾರ್ಯಕ್ರಮಗಳಿಗೆ ರೂ.108.42 ಕೋಟಿ
* ವಿಶೇಷ ಚೇತನ ಕಲ್ಯಾಣ ಕಾರ್ಯಕ್ರಮಗಳಿಗೆ ರೂ.74,90 ಮೀಸಲು
* ಮಹಿಳಾ ಕಲ್ಯಾಣ ಕಾರ್ಯಕ್ರಮಗಳಿಗೆ ರೂ.9.9 ಕೋಟಿ
* 10.000 ಲೀಟರ್ವರೆಗೆ “ಉಚಿತ ಕಾವೇರಿ ನೀರು ಕಾರ್ಯಕ್ರಮಕ್ಕೆ ರೂ.43.00 ಕೋಟಿ ಮೀಸಲು
* ಸಾಮಾನ್ಯ ವರ್ಗದವರು ವೈಯಕ್ತಿಕ ಮನೆಗೆ ರೂ.15 ಕೋಟಿ
* ಬೀದಿ ಬದಿ ವ್ಯಾಪಾರಿಗಳ ಕಲ್ಯಾಣಕ್ಕೆ ರೂ.1.50 ಕೋಟಿ
* ಹಿರಿಯ ನಾಗರೀಕರ ಕಲ್ಯಾಣ ಕಾರ್ಯಕ್ರಮಗಳಿಗೆ ರೂ.5 ಕೋಟಿ ಅನುದಾನ ಒದಗಿಸಲಾಗಿದೆ
* ಅನಂತಕುಮಾರ್ ಹೆಸರಿನಲ್ಲಿ ಬಡ ವಿದ್ಯಾರ್ಥಿಗಳಿಗೆ ಪ್ರತಿವಾರ್ಡ್ ಗೆ 15 ಲ್ಯಾಪ್ ಟಾಪ್ ವಿತರಣೆ. 15 ,ಕೋಟಿ ಮೀಸಲು
* ನಿರಾಶ್ರಿತರಿಗೆ ರಾತ್ರಿ ತಂಗುದಾಣ ರೂ 5 ಕೋಟಿ
* ಮಂಗಳಮುಖಿಯರ ಕಾರ್ಯಕ್ರಮಕ್ಕೆ ರೂ.1.00 ಕೋಟಿ
* ಪ್ರತಿ ವಾರ್ಡ್ಗೆ 50 ಟೈಲರಿಂಗ್ ಯಂತ್ರ ವಿತರಣೆಗೆ ರೂ.4 ಕೋಟಿ
* “ಹೊಸ ಬೆಳಕು ಕಾರ್ಯಕ್ರಮ 75 ವರ್ಷಕ್ಕೂ ಮೀರಿದ ಕನ್ನಡಪರ ಹೋರಾಟಗಾರರು ಮತ್ತು ಅಶಕ್ತ ಕನ್ನಡ ಕಲಾವಿದರು ಅರ್ಹ 100 ಜನರಿಗೆ ತಲಾ ರೂ.1 ಲಕ್ಷಗಳ ಆರ್ಥಿಕ ಸಹಾಯ
• “ಅಂಗಳ” ಕಾರ್ಯಕ್ರಮ ಸ್ವಾಮಿ ಕ್ರೀಡೆಗಳ ಪ್ರೋತ್ಸಾಹಕ್ಕೆ ರೂ.1.98 ಕೋಟಿ
* ಪ್ರತಿಭಾವಂತ ಕ್ರೀಡಾ ಪಟುಗಳಿಗೆ ಆರ್ಥಿಕ ಸಹಾಯ ರೂ.50 ಲಕ್ಷ ಅನುದಾನ
* ಮುದ್ರಣ ಮತ್ತು ದೃಶ್ಯ ಮಾಧ್ಯಮಗಳ ಪತ್ರಕರ್ತರಿಗೆ ಅಪಘಾತ ವಿಮೆಯನ್ನು ಚಾರಿಗೆ ರೂ.15 ಲಕ್ಷ ಅನುದಾನ
* ಕನ್ನಡ ಪತ್ರಿಕೋಧ್ಯಮ ಉಳಿಸಿ ಬೆಳೆಸುವ ಸದುದ್ದೇಶದಿಂದ, ಪ್ರತಿ ವಾರ್ಡ್ನ ಆಯ್ದ ಸ್ಥಳಗಳಲ್ಲಿ ಒಂದು ಪತ್ರಿಕೆ ಮಾರಾಟ ಮಳಿಗೆಯನ್ನು ಹೊಂದಲು ಅವಕಾಶ ರೂ.1 ಕೋಟಿ ಅನುದಾನ
* ದಿನಪತ್ರಿಕೆಗಳನ್ನು ಮತ್ತು ಹಾಲನ್ನು ವಿತರಿಸುವ ಹುಡುಗರಿಗೆ ಗುಂಪು ಆರೋಗ್ಯ ವಿಮೆ ಜಾರಿಗೆ ರೂ.70 ಲಕ್ಷ ಅನುದಾನ
ಶಿಕ್ಷಣ ವಿಭಾಗ
* ಪಾಲಿಕೆಯ ಶಾಲಾ ಕಾಲೇಜುಗಳಲ್ಲಿ “ಸ್ಟಾರ್ಟ್ ಶಿಕ್ಷಣ” ಪ್ರಾರಂಭ ರೂ.೧೦ ಕೋಟಿ ಮೀಸಲು
* “ಜ್ಞಾನದೀಪ” ಕಾರ್ಯಕ್ರಮಕ್ಕೆ ರೂ.75.00 ಲಕ್ಷ
* “ನಾಡಪ್ರಭು ಕೆಂಪೇಗೌಡರವರ ಹೆಸರಿನಲ್ಲಿ ಹೊಸ ವಲಯಗಳಲ್ಲಿ ಹೊಸದಾಗಿ ಶಾಲೆ ನಿರ್ಮಾಣ ರೂ.10.00 ಕೋಟಿ ಮೀಸಲು
* ವಿದ್ಯಾರ್ಥಿಗಳಿಗೆ ಬಿ.ಎಂ.ಟಿ.ಸಿ.ಯ ಉಚಿತ ಬಸ್ ಪಾಸ್ ಕಾರ್ಯಕ್ರಮ ರೂ.75.00 ಲಕ್ಷ ಮೀಸಲು
* ಸಿ.ಸಿ.ಕ್ಯಾಮೆರವನ್ನು ಅಳವಡಿಸಲು ಗುಣ.5 ಕೋಟಿ ಮೀಸಲು.
* ಶಾಲಾ ಕಾಲೇಜುಗಳಲ್ಲಿ ಶುದ್ಧ ಕುಡಿಯುವ ನೀರು ಘಟಕ ಸ್ಥಾಪನೆ ರೂ.2.00 ಕೋಟಿ ಮೀಸಲು
* ಪಾಲಿಕೆಯ ಶಾಲಾ ಕಾಲೇಜುಗಳ ಕಟ್ಟಡಗಳಲ್ಲಿ ಮಳೆ ನೀರು ಕೊಯ್ದು ಪದ್ಧತಿಯ ಅನುಷ್ಟಾನ ರೂ.2.00 ಕೋಟಿ
* ಶಾಲಾ ಕಾಲೇಜು ಶಿಕ್ಷಕರುಗಳಿಗೆ ಸಮವಸ್ತ್ರ ರೂ.30 ಲಕ್ಷ ಮೀಸಲು
* ಆಂತರ್-ಶಾಲಾ ಕಾಲೇಜುಗಳ ಸಾಂಸ್ಕೃತಿಕ ಸ್ಪರ್ಧೆಗಳಿಗೆ ರೂ.50 ಲಕ್ಷ
ಆರೋಗ್ಯ
ಕೊರೋನ ವೈರಸ್ ವ್ಯಾಪಕವಾಗಿ ಹರಡುತ್ತಿರುವುದನ್ನು ನಿಯಂತ್ರಿಸಲು ರೂ.49.50 ಕೋಟಿ
ಗೋಶಾಲೆಗಳಿಗೆ ಮೇವು ಒದಗಿಸಲು ರೂ.50 ಲಕ್ಷ ಮೀಸಲು
* ಜನನ ಮತ್ತು ಮರಣ ಪ್ರಮಾಣ ಪತ್ರ ಉಚಿತವಾಗಿ ನೀಡಲಾಗುವುದು.
* “ಪಂಡಿತ್ ದೀನದಯಾಳು ಉಪಾಧ್ಯಾಯ” ರವರ ಹೆಸರಿನಲ್ಲಿ ಮಕ್ಕಳ ಮಲ್ಟಿ ಸ್ಪೆಷಲಿಟಿ ಆಸ್ಪತ್ರೆಯನ್ನು ನಿರ್ಮಾಣ ರೂ.20.00 ಕೋಟಿ.
* ಉಚಿತವಾಗಿ ಡಯಾಲಿಸಿಸ್ ಸೇವೆ, ಡಯಾಲಿಸಿಸ್ ಕೇಂದ್ರಗಳ ಸ್ಥಾಪನೆ ಮತ್ತು ನಿರ್ವಹಣೆಗಾಗಿ ರೂ.16 ಕೋಟಿ
* ಲಿಂಕ್ ವರ್ಕರ್ಸ್ ಗಳಿಗೆ ಪ್ರತಿ ತಿಂಗಳಿಗೆ 1 ಸಾವಿರ ಹೆಚ್ಚಳ
* ಹೊಸ ವಲಯಗಳಲ್ಲಿ ನಾಯಿ ಕೆನಲ್ಗಳನ್ನು ಸ್ಥಾಪನೆ ರೂ.5.00 ಕೋಟಿ
ಅಭಿವೃದ್ಧಿ ಮತ್ತು ನಿರ್ವಹಣೆ
* ಘನತ್ಯಾಜ್ಯ ಘಟಕಗಳ ಸುತ್ತ ಮುತ್ತಲ ಅಭಿವೃದ್ಧಿಗೆ ರೂ.75 ಕೋಟಿ
* ಪಾಲಿಕೆ ಆಸ್ತಿಗಳ ಸಂರಕ್ಷಣೆಗೆ ತಂತಿ ಬೇಲಿ ಅಳವಡಿಕೆ ರೂ.20.90 ಕೋಟಿ
* ನೀರನ್ನು ಒದಗಿಸಿ ನಿರ್ವಹಿಸಲು ಪ್ರತಿ ವಲಯಕ್ಕೆ ಒಂದರಂತೆ ಎಂಟು ವಾಟರ್ ಟ್ಯಾಂಕರ್ಗಳ ಖರೀದಿ ರೂ.1.50 ಕೋಟಿ ಅನುದಾನ
* ಉದ್ಯಾನವನಗಳಲ್ಲಿ ಅಲಂಕಾರಿಕ ಗಿಡಗಳನ್ನು ಬೆಳಸಿ ಸಾರ್ವಜನಿಕರಿಗೆ ಮಾರಾಟ
*ಉದ್ಯಾನವನಗಳು, ಮೀಡಿಯನ್ಸ್ಗಳು, ಫೈ ಓವರ್, ವೃತ್ತಗಳು, ಇವುಗಳ ನಿರ್ವಹಣೆಗೆ ಒಟ್ಟು ರೂ.54 ಕೋಟಿ
*ಹೊಸ ವಲಯಗಳಲ್ಲಿ ಉದ್ಯಾನವನಗಳನ್ನು ಅಭಿವೃದ್ಧಿಗೆ ರೂ.10 ಕೋಟಿ
* ಕೊಳವೆ ಬಾವಿ ಕೊರೆಸಲು 10.00 ಕೋಟಿ ಮೀಸಲಿರಿಸಿದೆ.
* ಉದ್ಯಾನವನಗಳಲ್ಲಿ ಮಳೆ ನೀರು ಕೊಯ್ದು ಪದ್ಧತಿ ಅನುಷ್ಟಾನ ರೂ.200 ಕೋಟಿ
* ಪಾಲಿಕೆಯ ಸ್ಮಶಾನಗಳನ್ನು ಸೌಂದರ್ಯಕರಣ ರೂ.3 ಕೋಟಿ ಅನುದಾನ ಒದಗಿಸಿದೆ.
* ಕೆರೆಗಳ ಹತ್ತಿರವಿರುವ ಬಫರ್ ವಲಯಗಳಲ್ಲಿ ಆರಣ್ಯೀಕರಣಗೊಳಿಸಲಾಗುವುದು.
* ನಗರ ಪ್ರವೇಶಿಸುವ ಒಟ್ಟು 8 ಮಾರ್ಗಗಳಲ್ಲಿ ನಾಡಪ್ರಭು ಕೆಂಪೇಗೌಡರ ಹೆಸರಿನಲ್ಲಿ ಸ್ವಾಗತ ಕಮಾನು” ನಿರ್ಮಾಣ ರೂ.10 ಕೋಟಿ ಅನುದಾನ ಮೀಸಲಿರಿಸಿದೆ.
* ಪಾಲಿಕೆಯ ಕಛೇರಿ, ಆಸ್ಪತ್ರೆ ಹಾಗೂ ಶಾಲಾ ಕಾಲೇಜುಗಳ ಮುಂದೆ ಡಿಜಿಟಲ್ ಡಿಸ್ಪ್ಲೇ ನಾಮಫಲಕ ಅಳವಡಿಕೆ
* ರೂ.5 ಕೋಟಿ ವಾಹನ ಚಾಲಕರುಗಳ ವಾಸಕ್ಕಾಗಿ “ಪಾಲಿಕೆಯ ವಸತಿಗೃಹ ನಿರ್ಮಾಣ ರೂ.5.00 ಕೋಟಿ
* ಪಾಲಿಕೆಯ ಕೇಂದ್ರ ಕಛೇರಿ ಆವರಣದಲ್ಲಿ ಹೋಟೆಲ್ ಕಟ್ಟಡ ನಿರ್ಮಾಣ ರೂ.2 ಕೋಟಿ
*ಪಾಲಿಕೆ ವ್ಯಾಪ್ತಿಯಲ್ಲಿನ ದೋಭಿಘಾಟ್ಗಳಲ್ಲಿ ವಾಷಿಂಗ್ ಮಿಷಿನ್ ಒದಗಿಸಲು ರೂ.3.00 ಕೋಟಿ.
• ಹೊಸ ವಲಯ ಮತ್ತು 110 ಹಳ್ಳಿಗಳ ಪ್ರದೇಶಗಳಲ್ಲಿ ಹೊಸದಾಗಿ ವಿದ್ಯುತ್ ಫಿಟ್ಟಿಂಗ್ಗಳನ್ನು ಅಳವಡಿಸಲು ರೂ.10 ಕೋಟಿ
* ಪಾಲಿಕೆಯ ಹೊಸ ವಲಯ ಮತ್ತು 110 ಹಳ್ಳಿಗಳ ಪ್ರದೇಶಗಳಲ್ಲಿ ಆಯ್ದ ಪ್ರದೇಶಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ ರೂ.10.00 ಕೋಟಿ
* ಅಪಾಯಕಾರಿ ಸ್ಥಳಗಳಲ್ಲಿ ಮಳೆ ನೀರುಗಾಲುವೆ ಗಳಿಗೆ ತಂತಿ ಬೇಲಿಯನ್ನು ಅಳವಡಿಕೆ ರೂ.10 ಕೋಟಿ ಅನುದಾನ
ಯೋಜನೆ ಮತ್ತು ರಸ್ತೆ ಮೂಲಭೂತ ಸೌಕರ್ಯ ವಿಭಾಗ
* ಪಾಲಿಕೆ ವ್ಯಾಪ್ತಿಯಲ್ಲಿನ ಆರ್ಟೀರಿಯಲ್ ಮತ್ತು ಸಬ್ ಆರ್ಟೀರಿಯಲ್ ರಸ್ತೆಗಳ ನಿರ್ವಹಣೆ ರೂ.105.00 ಕೋಟಿ
* ರಸ್ತೆ ಮೇಲು ಸೇತುವೆ ಮತ್ತು ಕೆಳ ಸೇತುವೆಗಳ ದುರಸ್ತಿ ಮತ್ತು ವಾರ್ಷಿಕ ನಿರ್ವಹಣೆಗೆ ರೂ.40 ಕೋಟಿ
* ಅನುದಾನ ವೃತ್ತಗಳು ಮತ್ತು ಜಂಕ್ಷನ್ಗಳ ಉನ್ನತೀಕರಿಸಿ ಸೌಂದರೀಕರಣ ರೂ.15 ಕೋಟಿ
ಸಾರ್ವಜನಿಕ ಸಹಭಾಗಿತ್ವದ ಯೋಜನೆಗಳು
* “ಸರ್.ಎಂ.ವಿಶ್ವೇಶ್ವರಯ್ಯ ರವರ ಹೆಸರಿನಲ್ಲಿ ಪಾಲಿಕೆಯ ಆಯ್ದ ಕಡೆಗಳಲ್ಲಿ ಬೇಸ್ ಮೆಂಟ್, ಮಲ್ಟಿ ಲೆವೆಲ್ ಕಾರ್ ಪಾರ್ಕಿಂಗ್ ನಿರ್ಮಾಣ