ಕರ್ನಾಟಕದಲ್ಲಿ ಕೊರೋನಾಗೆ ಒಂದು ಬಲಿ, 7 ಹೊಸ ಪ್ರಕರಣ, 415 ಸೋಂಕಿತರು

ಕರ್ನಾಟಕದಲ್ಲಿ ಕೊರೋನಾಗೆ ಒಂದು ಬಲಿ, 7 ಹೊಸ ಪ್ರಕರಣ, 415 ಸೋಂಕಿತರು

ಬೆಂಗಳೂರು: ರಾಜ್ಯದಲ್ಲಿಂದು ಮಧ್ಯಾಹ್ನದವರೆಗೆ ಏಳು ಹೊಸ ಕೊರೋನಾ ಪ್ರಕರಣಗಳು ವರದಿಯಾಗಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 415ಕ್ಕೆ ಏರಿಕೆಯಾಗಿದ್ದು ಇದುವರೆಗೆ 17ಮಂದಿ ಮೃತಪಟ್ಟಿದ್ದಾರೆ.

ಹೊಸದಾಗಿ ಗುರುತಿಸಲಾಗಿರುವ ಪ್ರಕರಣದಲ್ಲಿ ದಕ್ಷಿಣ ಕನ್ನಡದಲ್ಲಿ 1, ವಿಜಯಪುರದಲ್ಲಿ 3, ಕಲಬುರಗಿಯಲ್ಲಿ ಮೂರು ದೃಢಪಟ್ಟಿದೆ.

ಕಲಬುರಗಿಯ 80 ವರ್ಷದ ವೃದ್ದ ಇಂದು ಬೆಳಿಗ್ಗೆ ಮೃತಪಟ್ಟಿದ್ದು ಇದಲ್ಲದೆ 61 ವರ್ಷ ಹಾಗೂ 29 ವರ್ಷದ ಇಬ್ಬರು ಪುರುಷರಿಗೆ ಕೊರೋನಾ ದೃಢಪಟ್ಟಿದೆ. ವಿಜಯಪುರದಲ್ಲಿ 18 ವರ್ಷದ ಇಬ್ಬರು ಯುವತಿಯರು ಹಾಗೂ 30 ವರ್ಷದ ಮಹಿಳೆಗೆ ಕೊರೋನಾವೈರಸ್ ಸೋಂಕು ತಗುಲಿದೆ.

ದಕ್ಷಿಣ ಕನ್ನಡ ಬಂಟ್ವಾಳದ 67 ವರ್ಷದ ಮಹಿಳೆಗೆ ಮಹಾಮಾರಿ ಕೊರೋನಾ ಇರುವುದು ದೃಢವಾಗಿದೆ. ಇದುವರೆಗೆ 114 ಜನರು ಗುಣಮುಖರಾಗಿದ್ದಾರೆ.

Related