ಕರ್ನಾಟಕ ರತ್ನ ಡಾ.ಪುನೀತ್ ರಾಜ್ ಕುಮಾರ್ ದೈಹಿಕವಾಗಿ ನಮ್ಮ ಜೊತೆಗೆ ಇಲ್ಲ. ಆದ್ರೆ ಮಾನಸಿಕವಾಗಿ ಪುನೀತ್ ಸದಾ ನಮ್ಮೊಂದಿಗೆ ಇದ್ದಾರೆ. ನಗುಮುಖದ ಅಪ್ಪು ನಮ್ಮನ್ನು ಅಗಲಿ ತಿಂಗಳುಗಳೆ ಕಳೆದಿದೆ. ಆದ್ರೆ ಅಪ್ಪು ಮಾತ್ರ ಅಭಿಮಾನಿಗಳ ಮನೆ ಮನದಲ್ಲಿ ಚಿರಸ್ಥಾಯಿಯಾಗಿ ನೆಲೆ ನಿಂತಿದ್ದಾರೆ.ರಾಜ್ಯದಲ್ಲಿ ನೆಡೆಯುವ ಜಾತ್ರೆ, ಮೆರವಣಿಗೆಯಲ್ಲಿ ಭಾವಚಿತ್ರದೊಂದಿಗೆ ಅಭಿಮಾನಿಗಳು ಇದ್ದೇ ಇರುತ್ತಾರೆ. ಆದ್ರೆ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಅಭಿಮಾನಿಯೊಬ್ಬರು ಅಪ್ಪುಗೆ ನಮನ ಸಲ್ಲಿಸಿ ಮಾಂಗಲ್ಯ ಧಾರಣೆ ಮಾಡುವ ಮೂಲಕ ಅಪ್ಪು ಅಮರ ಎನ್ನುವುದನ್ನು ಸಾರಿ ಹೇಳಿದ್ದಾರೆ.
ಮಧು ಮಗ ಅಪ್ಪಟ ಅಪ್ಪು ಅಭಿಮಾನಿ ಅದಕ್ಕಾಗಿ ಆ ಆಭಿಮಾನಿ ಮದುವೆ ಮನೆಯಲ್ಲಿ ಅಪ್ಪು ಭಾವಚಿತ್ರವನ್ನು ಎಲ್ಲೆಡೆ ಹಾಕಿಸಿದ್ದಾರೆ . ಜೊತೆಗೆ ತಾಳಿ ಕಟ್ಟವ ಮುನ್ನವೂ ಅವರ ನೆನಪಿನಲ್ಲೇ ನೂತನ ಜೀವನಕ್ಕೆ ಪಾದರ್ಯಪಣೆ ಮಾಡಿದರು.
ನವವಧುಗಳು ಕಲ್ಯಾಣ ಮಂಟಪದಲ್ಲಿ ಇಟ್ಟಿದ್ದ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಪೂಜೆ ಸಲ್ಲಿಸಿದ್ದಾರೆ. ಬಳಿಕ ಪೋಟೋಗೆ ನಮಸ್ಕರಿಸಿದ ನಂತರ ಮಾಂಗಲ್ಯ ಧಾರಣೆಯನ್ನು ಮಧುಮಗ ಮಾಡಿದ್ದಾರೆ. ಹೌದು ನಿನ್ನೆ ನಗರದ ಅಂಬೇಡ್ಕರ್ ಭವನದಲ್ಲಿ ಸೋಮವಾರ್ ನಿಲಯ್ ಹಾಗೂ ಸುಪ್ರೀಯಾ ಎಂಬುವವರ ಮದುವೆ ಸಂದರ್ಭದಲ್ಲಿ ಅಪ್ಪುವನ್ನ ನೆನೆದು ಕಣ್ಣೀರಿಟ್ಟಿದ್ದಾರೆ.