ಪಾಕ್ ನಲ್ಲಿ ವಿಕ್ರಾಂತ್ ರೋಣ ..!

  • In Cinema
  • July 26, 2022
  • 248 Views
ಪಾಕ್ ನಲ್ಲಿ ವಿಕ್ರಾಂತ್ ರೋಣ ..!

‘ವಿಕ್ರಾಂತ್ ರೋಣ’ ಸಿನಿಮಾ ಅದ್ಯಾವಾಗ ನೋಡುತ್ತೇವೋ ಅಂತ ಸಿನಿಪ್ರಿಯರು ತುದಿಗಾಲಲ್ಲಿ ನಿಂತಿದ್ದಾರೆ. ಇನ್ನೊಂದು ಕಡೆ ನಿರ್ಮಾಣ ಸಂಸ್ಥೆ ಆ ಸಿನಿಮಾವನ್ನು ವಿಶ್ವದ ಮೂಲೆ ಮೂಲೆಯಲ್ಲಿರುವ ಪ್ರೇಕ್ಷಕರಿಗೆ ತಲುಪಿಸಲು ಪ್ರಯತ್ನ ಪಡುತ್ತಿದೆ.

ಕಿಚ್ಚ ಸುದೀಪ್ ಸಿನಿಮಾ ‘ವಿಕ್ರಾಂತ್ ರೋಣ’ ಪ್ಯಾನ್ ಇಂಡಿಯಾ ಸಿನಿಮಾ ಆಗಿರುವುದರಿಂದ ಭಾರತವೂ ಸೇರಿದಂತೆ ವಿದೇಶದಲ್ಲಿಯೂ ಬಿಡುಗಡೆ ಮಾಡುತ್ತಿದ್ದಾರೆ. ಹಲವು ದಿನಗಳ ಹಿಂದೆನೇ ವಿದೇಶದಲ್ಲಿ ಬಿಡುಗಡೆ ಮಾಡಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

“27 ರಿಂದ 28 ದೇಶಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ. ಇನ್ನೂ ಎರಡು ಮೂರು ದೇಶ ಕನ್ಫರ್ಮ್ ಆಗಬೇಕಿದೆ. ನೇಪಾಳ ನಿನ್ನೆ ತಾನೇ ಕನ್ಫರ್ಮ್ ಆಯ್ತು. ಪಾಕಿಸ್ತಾನದಲ್ಲಿ ರಿಲೀಸ್ ಮಾಡುವ ಕೆಲಸ ಕೂಡ ನಡೆಯುತ್ತಿದೆ. ಮೂರು ತಿಂಗಳಿನಿಂದ ಭಾರತೀಯ ಸಿನಿಮಾಗಳನ್ನು ಬಿಡುಗಡೆ ಮಾಡುತ್ತಿದ್ದಾರೆ. ಪಾಕಿಸ್ತಾನದಲ್ಲೂ ರಿಲೀಸ್ ಮಾಡುವುದಕ್ಕೆ ಮಾತುಕತೆ ನಡೆಯುತ್ತಿದೆ.” ಎಂದು ಜಾಕ್ ಮಂಜು ಮಾಹಿತಿ ನೀಡಿದ್ದಾರೆ.

Related