Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಏನು ಮಾಡುತ್ತಿದೆ?: ಸುರ್ಜೆವಾಲಾ
  • Bangalore
  • Politics
  • State

ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಏನು ಮಾಡುತ್ತಿದೆ?: ಸುರ್ಜೆವಾಲಾ

admin July 2, 2025 1 minute read
Spread the love

ಬೆಂಗಳೂರು: ವಿಶ್ವಸಂಸ್ಥೆಯ ಭದ್ರತಾ ಸಮಿತಿಯನ್ನು ಮುನ್ನಡೆಸುವ ಜವಾಬ್ದಾರಿಯನ್ನು ಭಯೋತ್ಪಾದಕ ರಾಷ್ಟ್ರ ಪಾಕಿಸ್ತಾನಕ್ಕೆ ನೀಡಲಾಗಿದೆ. ವಿಶ್ವಸಂಸ್ಥೆಯ 1373 ನಡಾವಳಿ ಪ್ರಕಾರ ಕಳೆದ ಜೂನ್ ತಿಂಗಳಲ್ಲಿ ಭಯೋತ್ಪಾದನಾ ನಿಗ್ರಹ ಸಮಿತಿಯ ಉಪಾಧ್ಯಕ್ಷ ಸ್ಥಾನದಲ್ಲಿ ಕುಳಿತಿದೆ. ಬೇಲಿಯೇ ಎದ್ದು ಹೊಲ ಮೇಯ್ದಂತೆ ಆಗುತ್ತಿದೆ. ತೋಳಕ್ಕೆ ಕುರಿಗಳ ಹಿಂಡನ್ನು ಕಾಯುವ ಕೆಲಸ ನೀಡಲಾಗಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲಾ ಅವರ ಹೇಳಿದರು.

ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಜೂನ್ ತಿಂಗಳಲ್ಲಿ ʼತಾಲಿಬಾನ್ ಸ್ಯಾಂಕ್ಷನ್ ಸಮಿತಿʼ ಯ ಅಧ್ಯಕ್ಷ ಸ್ಥಾನವನ್ನು ಪಾಕಿಸ್ಥಾನ ಅಲಂಕರಿಸಿದೆ. ದೇಶ ವಿದೇಶಗಳನ್ನು ಸುತ್ತುವ ವಿದೇಶಾಂಗ ಸಚಿವರೇ, ಮೋದಿಯವರೇ ನಿಮ್ಮ ವಿದೇಶಿ ಪ್ರವಾಸದ ಫಲ ಇದೇ ಏನು? ಪಹಲ್ಗಾಮ್ ದಾಳಿ ನಡೆದ ಹೊತ್ತಿನಲ್ಲೇ 20 ಬಿಲಿಯನ್ ಡಾಲರ್ ಹಣವನ್ನು ವಿಶ್ವ ಹಣಕಾಸು ಸಂಸ್ಥೆಯಿಂದ (ಐಎಂಎಫ್) ನೀಡಲಾಗುತ್ತದೆ. ನಮ್ಮ ಬೆಂಬಲಕ್ಕೆ ಸಣ್ಣ ರಾಷ್ಟ್ರಗಳೂ ಬರಲಿಲ್ಲ. ಶ್ರೀಲಂಕಾ, ಬಾಂಗ್ಲಾ, ನೇಪಾಳ, ಮಾಲ್ಡೀವ್ ಯಾರೂ ಸಹ ನಮ್ಮ ಪರವಾಗಿ ನಿಮ್ಮಲಿಲ್ಲ. ಶ್ರೀಲಂಕಾಕ್ಕೆ ನಾವು ಆರ್ಥಿಕ ಸಹಾಯ ಮಾಡಿದರೂ ನಮ್ಮ ಪರವಾಗಿ ಹೇಳಿಕೆ ನೀಡಲಿಲ್ಲ. ಮೋದಿ ಅವರು 8 ಸಾವಿರ ಕೋಟಿಯ ಜೆಟ್ ಅಲ್ಲಿ ಇಡೀ ಪ್ರಪಂಚ ಸುತ್ತುತ್ತಾರೆ.  ಕಳೆದ 10 ವರ್ಷಗಳಲ್ಲಿ 10 ಸಾವಿರ ಕೋಟಿಯನ್ನು ವಿದೇಶಿ ಪ್ರವಾಸಕ್ಕೆ ಖರ್ಚು ಮಾಡಿದ್ದು ಯಾವ ಉದ್ಧಾರಕ್ಕೆ.

ಚೀನಾದಲ್ಲಿ ಜೂನ್ ತಿಂಗಳಲ್ಲಿ ನಡೆದ ಶಾಂಘೈ ಕಾರ್ಪೋರೇಷನ್ ಆರ್ಗನೈಜೇಷನ್ ಸಮಿಟ್ ನಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭಾಗವಹಿಸಿದ್ದರು. ಪೆಹಲ್ಗಾಮ್ ದಾಳಿಯನ್ನು ಉಲ್ಲೇಕಿಸಲು ಸಭೆಯ ನಡಾವಳಿಯಲ್ಲಿ ತಿರಸ್ಕರಿಸಲಾಯಿತು. ಭಾರತ ಈ ಸಮುಯದಲ್ಲಿಯೂ ಮೌನವಾಗಿತ್ತು. ರಾಜನಾಥ್ ಸಿಂಗ್ ಏಕೆ ಮೌನವಾಗಿದ್ದರು. ನಮ್ಮ ಪಕ್ಷ ಪ್ರಧಾನಿ ಮೋದಿ, ರಕ್ಷಣಾ ಸಚಿವರಿಂದ ಸೂಕ್ತ ಉತ್ತರವನ್ನು ಬಯಸುತ್ತದೆ. ಇದನ್ನೂ ಓದಿ: ರೈಲ್ವೆ ಟಿಕೆಟ್ ದರ ಏರಿಕೆಗೆ ಸಿಎಂ ಹೇಳಿದ್ದೇನು?

ಮೋದಿ ನೇತೃತ್ವದ ಭಾರತ ಸರ್ಕಾರಕ್ಕೆ ವಿಶ್ವಮಟ್ಟದಲ್ಲಿ ಇದು ಭಾರಿ ಹಿನ್ನಡೆ ಹಾಗೂ ನಮ್ಮ ವಿದೇಶಾಂಗ ನೀತಿಗಳ ವೈಫಲ್ಯ. ದೇಶದ ಹಿತಕ್ಕೆ ಮಾರಕವಾದ ಸಂಗತಿ ಇದಾಗಿದೆ. ವಿದೇಶಾಂಗ ಸಚಿವರು ತಮ್ಮ ಪ್ರತಿಭಟನೆ ದಾಲಿಸದೆ ಎಲ್ಲಿ ಅಡಗಿದ್ದಾರೆ?  ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಏನು ಮಾಡುತ್ತಿದೆ? ಪಾಕಿಸ್ತಾನ ಪ್ರಣೀತ ಪಹಲ್ಗಾಮ್ ದಾಳಿಯ ಘಟನೆ ಹಸಿಯಾಗಿ ಇರುವಾಗಲೇ ಇಂತಹ ಸ್ಥಾನಮಾನ ಪಾಕಿಸ್ತಾನಕ್ಕೆ ದೊರೆತಿರುವುದು ಅವಮಾನಕರ. ವಿದೇಶಾಂಗ ಸಚಿವರಾದ ಜೈ ಶಂಕರ್ ಅವರು ಏನು ಮಾಡುತ್ತಿದ್ದಾರೆ?

ಈಗ ವಿಶ್ವ ರಕ್ಷಣಾ ವ್ಯವಸ್ಥೆಯ ದಲ್ಲಾಳಿಯಾಗಿ ಕೆಲಸ ಮಾಡುತ್ತಿದೆ. ರಾಕ್ಷಸನೊಬ್ಬನಿಗೆ ಖುರ್ಚಿ ನೀಡಿದಂತಾಗಿದೆ. ಪಾಕಿಸ್ತಾನ ಭಾರತಕ್ಕೆ ತನ್ನ ಭಯೋತ್ಪಾದರನ್ನು ಕಳುಹಿಸುವ ಮೂಲಕ ಅನೇಕ ವಿಧ್ವಂಸಕ ಕೃತ್ಯಗಳಿಗೆ ಕಾರಣವಾಗಿದೆ ಎಂದರು.

 

About the Author

admin

Administrator

Visit Website View All Posts

Spread the love

Post navigation

Previous: ವಾಲ್ಮೀಕಿ ಹಗರಣ; ಇದರಲ್ಲಿದ್ದ ದೊಡ್ಡ ದೊಡ್ಡ ತಲೆಗಳೇ ಉರುಳಲಿವೆ: ಬಿವೈವಿ
Next: ಮುಖ್ಯಮಂತ್ರಿ ಗಾದಿಗೆ ಪೈಪೋಟಿ ಬಿ.ವೈ.ವಿಜಯೇಂದ್ರ

Views:

21

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.