ಚಿತ್ರದುರ್ಗ: ಚಿತ್ರದುರ್ಗ ಮೂಲದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ ಸೇರಿದಂತೆ ಏಳು ಆರೋಪಿಗಳಿಗೆ ಸುಪ್ರೀಂ ಕೋರ್ಟ್ ಜಾಮೀನು ರದ್ದು ಕೋರಿ ಆದೇಶ ಹೊರಡಿಸಿದೆ.
ಇನ್ನು ಜಾಮೀನು ರದ್ದಾಗಿರುವುದು ತಿಳಿಯುತ್ತಿದ್ದಂತೆ ರೇಣುಕಾ ಸ್ವಾಮಿ ಅವರ ಪತ್ನಿ ಪ್ರತಿಕ್ರಿಯಿಸಿದ್ದಾರೆ. ಚಿತ್ರದುರ್ಗದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಹನ ಅವರು, ಯಾರು ಮಾಡಿದ್ದಾರೆ ಅವರಿಗೆ ಕಾನೂನಿನ ಚೌಕಟ್ಟಿನಲ್ಲಿ ಶಿಕ್ಷೆಯಾಗುತ್ತದೆ ಎಂಬುದು ನಮಗೆ ನಂಬಿಕೆ ಇತ್ತು. ಅದೇ ರೀತಿ ಇದೀಗ ಶಿಕ್ಷೆ ಆಗಿರುವುದು ಕಂಡು ಬರುತ್ತಿದೆ. ಕಾನೂನಿನ ಮುಂದೆ ಎಲ್ಲರೂ ಸಮಾನರು. ತಪ್ಪು ಮಾಡಿದವರಿಗೆ ದೇವರು ಖಂಡಿತವಾಗಿ ಬಿಡುವುದಿಲ್ಲ ಶಿಕ್ಷೆಯನ್ನು ನೀಡುತ್ತಾನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ದರ್ಶನ್ ತಕ್ಷಣವೇ ಅರೆಸ್ಟ್ ಮಾಡಿ: ಸುಪ್ರೀಂ ಆದೇಶ
ಇನ್ನು ರೇಣುಕಾಸ್ವಾಮಿ ಚಿಕ್ಕಪ್ಪ ಷಡಾಕ್ಷರಿ ಮಾತನಾಡಿ, ಸರ್ಕಾರ ಮುಂದೆ ಹೋಗದಿದ್ದರೆ ತಪ್ಪು, ಸರಿ ಅರ್ಥ ಆಗ್ತಿರಲಿಲ್ಲ. ಶೀಘ್ರ, ತ್ವರಿತ ವಿಚಾರಣೆಗೆ ಸುಪ್ರೀಂ ಆದೇಶಿಸಿದೆ. ಟ್ರಯಲ್ಕೋರ್ಟ್ ವಿಚಾರಣೆಗೆ ನಾವು ಒತ್ತಾಯಿಸಿದ್ದೆವು. ಸುಪ್ರೀಂ ಕೂಡ ನಮಗೆ ನ್ಯಾಯ ಒದಗಿಸಿದೆ. ಕಾನೂನನ್ನು ಗೌರವಿಸುತ್ತೇವೆ. ತಪ್ಪು ಮಾಡಿದವರಿಗೆ ತಕ್ಕ ಶಾಸ್ತಿಯಾಗಿದೆ ಎಂದರು.
