ಕ್ರೇಜಿ ಸ್ಟಾರ್ ಮನೆಯಲ್ಲಿ ಮದುವೆ ಸಂಭ್ರಮ..!

  • In Cinema
  • July 26, 2022
  • 263 Views
ಕ್ರೇಜಿ ಸ್ಟಾರ್ ಮನೆಯಲ್ಲಿ ಮದುವೆ ಸಂಭ್ರಮ..!

ಕನ್ನಡ ಚಿತ್ರರಂಗದ ನಟ ಕ್ರೇಜಿ ಸ್ಟಾರ್ ರವಿಚಂದ್ರನ್ ಮನೆಯಲ್ಲಿ ಮದುವೆ ಸಂಭ್ರಮ ಜೋರಾಗಿದೆ. ರವಿಚಂದ್ರನ್ ಅವರಿಗೆ 3 ಜನ ಮಕ್ಕಳು. ಅದರಲ್ಲಿ ಮಗಳಿಗೆ ಈಗಾಗಲೇ ಮದುವೆ ಕೊಟ್ಟಿದ್ದಾರೆ. ಸದ್ಯ ಹಿರಿಯ ಮಗ ಮನೋರಂಜನ್ ಮದುವೆಗೆ ಸಜ್ಜಾಗಿದ್ದಾರೆ.

ಮಗಳ ಮದುವೆಯನ್ನು ರವಿಚಂದ್ರನ್ ಅದ್ಧೂರಿಯಾಗಿ ಮಾಡಿದ್ದರು. ಬೆಂಗಳೂರಿನ ಪ್ಯಾಲೆಸ್ ಗ್ರೌಂಡ್ನಲ್ಲಿ, ಮಗಳ ಮದುವೆಯನ್ನು ಮಾಡಲಾಗಿತ್ತು. ಕ್ರೇಜಿಸ್ಟಾರ್ ಮನೆಯಲ್ಲಿ ಈಗ ಮದುವೆ ಸಂಭ್ರಮ ಕಳೆ ಗಟ್ಟಿದೆ. ಮನೋರಂಜನ್ಗೆ ಮದುವೆ ನಿಗದಿಯಾಗಿದ್ದು, ಸಕಲ ತಯಾರಿಯನ್ನು ಮಾಡಿಕೊಳ್ಳಲಾಗುತ್ತಿದೆ. ಈ ಬಗ್ಗೆ ಕುಟುಂಬ ಅಧಿಕೃತವಾಗಿ ಇನ್ನು ಮಾಹಿತಿ ಹಂಚಿಕೊಂಡಿಲ್ಲ. ಆದರೆ ಮದುವೆ ಆಮಂತ್ರಣ ಪ್ರತ್ರಿಕೆಯ ಸೋರಿಕೆ ಆಗಿದೆ.

ರವಿಚಂದ್ರನ್ಸಿನಿಮಾ ಮಾತ್ರ ಅಲ್ಲ ಅವರು ತಮ್ಮ ಬದುಕಿನಲ್ಲೂ ಕೂಡ ಡಿಫ್ರೆಂಟ್. ಈ ಹಿಂದೆ ಮಗಳ ಮದುವೆ ಪತ್ರಿಕೆಯನ್ನೂ ಕೂಡ ಅತ್ಯಂತ ವಿಶೇಷವಾಗಿ ಮಾಡಿಸಿದ್ದರು. ಈಗ ಮಗನ ಮದುವೆ ಪತ್ರಿಕೆ ಕೂಡ ಅಷ್ಟೇ ವಿಶೇಷವಾಗಿದೆ. ಸದ್ಯ ಮನೋರಂಜನ್ ಮದುವೆ ಪತ್ರಿಕೆಯ ಫೋಟೊ ಸೋರಿಕೆ ಆಗಿದೆ. ಎಲ್ಲೆಲ್ಲೂ ಈ ಫೋಟೋ ವೈರಲ್ ಆಗುತ್ತಿದೆ. ಇದರಲ್ಲಿ ಹುಡುಗಿಯ ಹೆಸರು ಕೂಡ ಬಹಿರಂಗವಾಗಿದೆ. ಆದರೆ ಈ ವೈರಲ್ ಪತ್ರಿಕೆ ಫೊಟೋ ಬಗ್ಗೆಯೂ ಯಾವುದೇ ರೀತಿಯ ಸ್ಪಷ್ಟನೆ ಕ್ರೇಜಿ ಕುಟುಂಬದಿಂದ ಬಂದಿಲ್ಲ.

Related