ಬಾಗಲಕೋಟೆ: ಬಾದಾಮಿ ಪಟ್ಟಣವನ್ನು ಅಭಿವೃದ್ಧಿ ಮಾಡುವ ಕುರಿತು ಒಂದು ದೊಡ್ಡ ಯೋಜನೆಯನ್ನು ಮಾಡಿ ಎಂದು ಬಾದಾಮಿ ಪಟ್ಟಣದ ನಾಯಕರಿಗೆ ಗೃಹ ಸಚಿವ ಜಿ ಪರಮೇಶ್ವರ್ ಅವರು ಹೇಳಿದ್ದಾರೆ.
ಬಾಗಲಕೋಟೆ ಜಿಲ್ಲಾ ಪೊಲೀಸ್ ವತಿಯಿಂದ ನವನಗರದಲ್ಲಿ ನೂತನವಾಗಿ ನಿರ್ಮಿಸಲಾದ ಪೊಲೀಸ್ ಕೌಶಲ್ಯ ಅಭಿವೃದ್ಧಿ ಕೇಂದ್ರ ಹಾಗೂ ಪೊಲೀಸ್ ಸಮುದಾಯ ಭವನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಾವಿರ ಕೋಟಿ ಪ್ರಾಜೆಕ್ಟ್ ರೆಡಿ ಮಾಡಿ ಅದನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿ, ನಮ್ಮ ಹತ್ತಿರ ದುಡ್ಡಿಲ್ಲ, ಸಿದ್ದರಾಮಣ್ಣ ಹತ್ತಿರನೂ ದುಡ್ಡಿಲ್ಲ, ಹಾಗಾಗಿ ನೀವು ಮಾಡಿರುವ ಯೋಜನೆಯನ್ನು ಕೇಂದ್ರ ಸರ್ಕಾರಕ್ಕೆ ಕಳಿಸಿ ಮನವಿ ಮಾಡಿ ಎಂದಿದ್ದಾರೆ.
ಸಿದ್ದರಾಮಣ್ಣ ಹತ್ರ ದುಡ್ಡಿಲ್ಲ ನಾವೆಲ್ಲ ಈಗಾಗಲೇ ಎಣ್ಣೆ, ಬೇಳೆ, ಅಕ್ಕಿ ಸೇರಿದಂತೆ ಇನ್ನೂ ಹಲವಾರು ರೀತಿಗಳಲ್ಲಿ ನಾವು ನಿಮಗೆ ದುಡ್ಡು ನೀಡಿದ್ದೇವೆ ಹಾಗಾಗಿ ನಮ್ಮ ಹತ್ರ ದುಡ್ಡಿಲ್ಲ ಎಂದು ಹೇಳಿದ್ದಾರೆ.
ನಾವು ಈಗಾಗಲೇ ಎಣ್ಣೆಗೂ ಕೂಡ ದುಡ್ಡು ಕೊಟ್ಟಿದ್ದೇವೆ ಎಂದು ಅಬಕಾರಿ ಸಚಿವರಾಗಿರುವಂತ ತಿಮ್ಮಾಪುರ ಅವರ ಕಡೆ ಕೈ ಮಾಡಿ ಪರಮೇಶ್ವರವರು ಹಾಸ್ಯ ಮಾಡಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಇಂದು ಹಲವೆಡೆ ಲೋಕಾಯುಕ್ತ ದಾಳಿ
ಆದರೆ ಈ ಮಾತು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ಒಂದು ಕಡೆ ಬಿ ಆರ್ ಪಾಟೀಲ್ ಹಾಗೂ ಶಾಸಕ ರಾಜು ಕಾಗೆ ಅವರು ಅಸಮಾಧಾನ ಹೊರ ಹಾಕುತ್ತಿರುವ ಬೆನ್ನಲ್ಲೇ ಗೃಹ ಸಚಿವರು ಸಿದ್ದರಾಮಣ್ಣ ಹತ್ತಿರ ಹಣವಿಲ್ಲ ಎಂದು ಹೇಳಿರುವ ಮಾತು ಇದೀಗ ಎಲ್ಲೆಡೆ ಚರ್ಚೆಗೆ ಕಾರಣವಾಗಿದೆ.
