ಶಹಾಪುರ: ದಿನದಿಂದ ದಿನಕ್ಕೆ ಬೆಳೆಯುತ್ತಿರುವ ತಾಲೂಕಿಗೆ ಬೆಂಕಿ ಅವಘಡಗಳನ್ನು ನಂದಿಸಲು ವ್ಯವಸ್ಥಿತವಾದ ಜಲವಾಹನವಿಲ್ಲ. ಬೇಸಿಗೆ ಆರಂಭಕ್ಕೂ ಮುನ್ನ ಇಲ್ಲಿನ ಅಗ್ನಿ ಶಾಮಕ ಠಾಣೆಯು ಜಲವಾಹನದ ಕೊರತೆ ಎದುರಿಸುತ್ತಿದ್ದು,500 ಲೀಟರ್ನ ಸಣ್ಣ ವಾಹನದಲ್ಲೇ ಕರ್ತವ್ಯ ನಿರ್ವಹಿಸಬೇಕಾದ ಅನಿವಾರ್ಯತೆ ಸಿಬ್ಬಂದಿಗೆ ಎದುರಾಗಿದೆ.
ಬೇಸಿಗೆ ಆರಂಭಕ್ಕೂ ಮುನ್ನವೇ ದಿನದಿಂದ ದಿನಕ್ಕೆ ಬಿಸಿಲಿನ ತಾಪ ಏರುತ್ತಿದೆ, ಅಗ್ನಿ ಅವಘಡಗಳಿಗೆ ಬೆಂಕಿ ನಂದಿಸುವ ಕಾರ್ಯ ಮಾಡಬೇಕಿರುವ ಅಗ್ನಿಶಾಮಕ ಠಾಣೆಯಲ್ಲಿ ಬರೀ 500 ಲೀಟರ್ ಸಾಮರ್ಥ್ಯವಿರುವ ಸಣ್ಣ ವಾಹನವಿರುವುದು ಶೋಚನಿಯ ಸಂಗತಿಯಾಗಿದೆ.
ಬೇಸಿಗೆ ವೇಳೆ ಸಂಭವಿಸುವ ಅಗ್ನಿ ಅವಘಡಗಳು ಹೆಚ್ಚು ಸಂಭವಿಸುತ್ತವೆ ಮತ್ತು ತಾಲೂಕಿನಲ್ಲಿ ಹೆಚ್ಚು ಹತ್ತಿ ಖರೀದಿ ಮಿಲ್ಗಳಿದ್ದು ಈಗಾಗಲೇ ಅಗ್ನಿ ಅವಘಡದಿಂದ ನಷ್ಟ ಅನುಭವಿಸಿದ ಸಾಕಷ್ಟು ಉದಾಹರಣೆಗಳು ಸಹ ಇವೆ. ಅಗ್ನಿಶಾಮಕ ಠಾಣೆಗೆ ದೊಡ್ಡ ವಾಹನಗಳು ಅವಶ್ಯ ಜರೂರಿಯಾಗಿದೆ. ಕೂಡಲೇ ಸರ್ಕಾರ ತಾಲೂಕಿಗೆ ಬೆಂಕಿ ನಂದಿಸುವ ಜಲವಾಹನಗಳನ್ನು ಕಲ್ಪಿಸಿ ಕೊಡಬೇಕಿದೆ. ಇದನ್ನೂ ಓದಿ: ಮಿನಿ ತಾರಾಲಯಕ್ಕೆ 12.88, ವಸತಿ ಶಾಲೆಗಳಿಗೆ 44 ಕೋಟಿ ವೆಚ್ಚಕ್ಕೆ ಅಸ್ತು: ಎಂ ಬಿ ಪಾಟೀಲ
ಏಕಕಾಲಕ್ಕೆ ಒಂದಕ್ಕಿಂತ ಹೆಚ್ಚು ಕಡೆ ಅಗ್ನಿ ಅವಘಡಗಳು ಸಂಭವಿಸಿದರೆ ಅದನ್ನು ನಿಭಾಯಿಸಲು ಇಲ್ಲಿನ ಅಗ್ನಿಶಾಮಕ ದಳದ ಸಿಬ್ಬಂದಿ ಹರಸಾಹಸ ಪಡುವಂತಾಗಿದೆ.
ಅಧಿಕ ಜನಸಂಖ್ಯೆ ಹೊಂದಿರುವ ನಗರದಲ್ಲಿ 4500 ಲೀಟರ್ ಸಾಮರ್ಥ್ಯದ 2 ಜಲವಾಹನಗಳ ಅಗತ್ಯವಿದ್ದು, ಅಗ್ನಿ ನಂದಕ ವಾಹನದ ಕೊರತೆ ನಿಗಿಸುವಲ್ಲಿ ಜನಪ್ರತಿನಿದಿಗಳು ಹಾಗೂ ಆಡಳಿತಾಧಿಕಾರಿಗಳು ಮುಂದಾಗಬೇಕಾಗಿದೆ. ಇಲ್ಲವಾದಲ್ಲಿ ಆಕಸ್ಮಿಕ ಅಗ್ನಿ ಅನಾಹುತಕ್ಕೊಳಗಾದ ಸಾರ್ವಜನಿಕರ ನಷ್ಟ ತುಂಬಬೇಕಾಗುವುದು ನಿಮ್ಮ ಜವಾಬ್ದಾರಿ ಇಲ್ಲವಾದರೇ ಅವರ ಶಾಪವಂತೂ ನಿಮ್ಮನ್ನು ತಟ್ಟದೇ ಬಿಡುವುದಿಲ್ಲ.
ನಗರ ಸೇರಿದಂತೆ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಲ್ಲಿ ಬೇಸಿಗೆ ನಿರ್ವಹಣೆಗೆ ಅವಶ್ಯವಿರುವ ಕುಡಿಯುವ ನೀರಿನ ಸಮಸ್ಯೆ ಎಷ್ಟು ಮುಖ್ಯವೊ ಅಷ್ಟೇ ಮುಖ್ಯವಾದ ಅಗ್ನಿ ನಂದಕ ವಾಹನಗಳ ಅಷ್ಟೇ ಮುಖ್ಯ. ಈ ಬಗ್ಗೆ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರು ಗಂಭೀರವಾಗಿ ಪರಿಗಣಿಸಿ, ಮುತುವರ್ಜಿವಹಿಸಿ ಶೀಘ್ರವೇ ಅಗ್ನಿಶಾಮಕದಳ ಇಲಾಖೆಗೆ ಜಲವಾಹನ ಒದಗಿಸಿಕೊಡಬೇಕೆಂದು ಪ್ರದೀಪ ಅಣಬಿ ಮನವಿ ಮಾಡಿದ್ದಾರೆ.
ಸರ್ಕಾರ ಹೊಸ ಜಲವಾಹನ ಖರೀದಿ ಮಾಡಿ ಕೊಟ್ಟಿಲ್ಲ. ತಾಲೂಕಿನಲ್ಲಿ ಒಂದೇ ಜಲವಾಹನವಿದೆ. ಸುಮಾರು 50೦-60 ಕಿ.ಮೀ. ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಬೇಕಾದ ಅಗ್ನಿಶಾಮಕ ಠಾಣೆ, ಈಗ ಕೇವಲ 500 ಲೀ. ನ ಸಣ್ಣ ವಾಹನದಲ್ಲಿ ಕರ್ತವ್ಯ ನಿರ್ವಹಿಸುತ್ತಿದೆ ದೊಡ್ಡ ಪ್ರಮಾಣದ ಅಗ್ನಿ ಅವಘಡ ಉಂಟಾದರೆ ಬೆಂಕಿ ನಂದಿಸಲು ವಾಹನ ವ್ಯವಸ್ಥೆ ಇಲ್ಲ ಎಂದು ಅಗ್ನಿಶಾಮಕ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದರು.
