ವಿಡಿಯೋ ನೋಡಿ ಮದುವೆ ಬೇಡ ಎಂದ ವರ!

ವಿಡಿಯೋ ನೋಡಿ ಮದುವೆ ಬೇಡ ಎಂದ ವರ!

ಭೋಪಾಲ್ : ಗಂಡ ಹೆಂಡತಿ ಜಗಳ ಉಂಡು ಮಲಗುವವರೆಗೆ ಎಂಬ ಗಾದೆ ಇಂದಿನ ಪೀಳಿಗೆಗೆ ಸರಿಹೊಂದುವುದು ಡೌಟೇ! ಯಾಕಂತೀರಾ, ಇಲ್ಲಿ ನೋಡಿ ಮದುವೆ ಹಸೆಮಣೆ ಏರಿ ನವಜೋಡಿಯಾಗಿ ವಿಹರಿಸಬೇಕಿದ್ದ ಮಧ್ಯಪ್ರದೇಶದ ಜೋಡಿಯೊಂದು ತಮ್ಮಲ್ಲಿರುವ ಸ್ವಪ್ರತಿಷ್ಠೆಗಾಗಿ ಮದುವೆಯನ್ನೇ ಮುರೆಯಲು ಮುಂದಾಗಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ನಡೆದದ್ದು ಲಾಕ್‌ಡೌನ್ ಮದ್ಯೆಯೇ.
ಇತ್ತೀಚೆಗೆ ವಿವಾಹ ನಿಶ್ಚಯವಾಗಿ ಮೇ ತಿಂಗಳ ಕೊನೆಯಲ್ಲಿ ಹೊಸಬಾಳಿಗೆ ಕಾಲಿಡಲು ಕೌತುಕರಾಗಿದ್ದ ಈ ಜೋಡಿಯ ಆಗಾಗ ಫೋನ್‌ನಲ್ಲಿ ಸಂಭಾಷಣೆಗಳು, ತಮಾಷೆ ವಿಡಿಯೋಗಳು ಹರಿದಾಡುತ್ತಿದ್ದವು. ಪತಿ ತನ್ನ ಪತ್ನಿಗೆ ಹೇಗೆಲ್ಲಾ ಸೇವೆ ಮಾಡುತ್ತಾನೆ, ಸಾವಿರ ಕುದುರೆ ಸರದಾರನಾದರೂ ಹೆಂಡತಿಗೆ ದಾಸ ಎಂಬ ನಾಣ್ಣುಡಿಯಂತೆ ನಡೆದುಕೊಳ್ಳುವ ಗಂಡಿನ ಬಗ್ಗೆ ವಿಡಿಯೋವನ್ನು ತಮಾಷೆಗಾಗಿ ವಧು ಕಳುಹಿಸಿದ್ದಾರೆ. ಇಷ್ಟಕ್ಕೆ ಕುಪಿತನಾದ ವರ “ನಾನು ಯಾವತ್ತೂ ಆ ತರಹ ಕೆಲಸ ಮಾಡಲ್ಲ” ಎಂಬ ಧೋರಣೆಯನ್ನು ತಾಳಿ ಸಣ್ಣ ವಿಷಯ ದೊಡ್ಡದಾಗಿ ಬೆಳೆದಿದೆ.
ಇಬ್ಬರ ಮಧ್ಯೆ “ಇಗೋ” ಹೆಮ್ಮರವಾಗಿ ಬೆಳೆದು ವರ ಮತ್ತು ವಧು ಈರ್ವರೂ ಕುಟುಂಬ ವರ್ಗಯಾಲಯವನ್ನು ಸಂಪರ್ಕಿಸಿವೆ. 4 ದಿನಗಳ ಸಮಾಲೋಚನೆ ನಂತರ ವಧು ತನ್ನ ಮನಸ್ಸನ್ನು ಬದಲಾಯಿಸಿ ಮದುವೆಗೆ ಹಸ್ತು ಎಂದಿದ್ದಾಳೆ. ಒಟ್ಟಿನಲ್ಲಿ ಸಣ್ಣ “ಇಗೋ” ಈ ಜೋಡಿಯನ್ನು ಬೇರ್ಪಡಿಸುತ್ತಿದ್ದುದು ಗ್ಯಾರಂಟಿ.
ಈರ್ವರ ಮಧ್ಯೆ ಇಗೋ ಜೊತೆ ಪ್ರೀತಿ ಇದ್ದುದೆ ಇಂದು ಅವರ ಜೋಡಿ ಒಂದಾಗಲು ಕಾರಣ. ಒಟ್ಟಿನಲ್ಲಿ ಪ್ರೀತಿಯೆಂಬುದು ಆ ದೇವರು ಕೊಟ್ಟ ಒಂದು ವರ.

Related