ಕನಿಷ್ಠ ಮೂಲಸೌಲಭ್ಯಗಳನ್ನು ಕಾಣದ ಗ್ರಾಮಸ್ಥರು

ಕನಿಷ್ಠ ಮೂಲಸೌಲಭ್ಯಗಳನ್ನು ಕಾಣದ ಗ್ರಾಮಸ್ಥರು

ಶಹಾಪುರ : ತಾಲ್ಲೂಕಿನಿಂದ ತೂಗಳತೆ ದೂರದಲ್ಲಿರುವ ಮಕ್ತಾಪುರ ಗ್ರಾಮದಲ್ಲಿ ಬಸ್ ವ್ಯವಸ್ಥೆ ಇಲ್ಲಾ. ಸಿ.ಸಿ ರಸ್ತೆ ಸರಿಯಾಗಿಲ್ಲ. ರಸ್ತೆ ಯಾವುದೋ ಚರಂಡಿ ಯಾವುದೋ ಗೊತ್ತಾಗದ ಸ್ಥಿತಿ. ಗ್ರಾಮದಲ್ಲಿ ಅಲ್ಲಲ್ಲಿ ಜಾಲಿ ಕಂಠಿ ಬೆಳೆದಿದ್ದು ಗ್ರಾಮವು ಕನಿಷ್ಠ ಮೂಲ ಸೌಲಭ್ಯ ವಂಚಿತ ಗ್ರಾಮವಾಗಿದೆ ಎಂದು ಗ್ರಾಮದ ಮುಖಂಡ ಅಲ್ಲಪಟೇಲ್ ಮಕ್ತಾಪುರ ಆಕ್ರೋಶ ವ್ಯಕ್ತಪಡಿಸಿದರು.

ಮಕ್ತಾಪುರ ಗ್ರಾಮದಲ್ಲಿ ಸುಮಾರು 500 ಕ್ಕೂ ಹೆಚ್ಚು ಜನಸಂಖ್ಯೆ ಇದೆ. ಹೊತಪೇಠ ಗ್ರಾ.ಪಂಗೆ ಸೇರಿರುವ ಇಷ್ಟು ಸಣ್ಣ ಗ್ರಾಮದಲ್ಲಿ ಅಭಿವೃದ್ಧಿ ಮಾಡುವಲ್ಲಿ ಪಂಚಾಯಿತಿ ಆಡಳಿತ ವಿಫಲವಾಗಿದೆ. ಆದರೆ ಸಂಬAದಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ತಮಗೂ ಗ್ರಾಮಕ್ಕೂ ಸಂಬಂಧ ವಿಲ್ಲದಂತಿದ್ದು ಗ್ರಾಮವು ಸಮಸ್ಯೆಗಳ ಆಗಾರವಾಗಿ ಬಿಟ್ಟಿದೆ. ಹಲವಾರು ಸಮಸ್ಯೆಗಳಿದ್ದರೂ ನಿರ್ಲಕ್ಷö್ಯ ವಹಿಸಿದ್ದಾರೆ.

ಸ್ವಚ್ಚ ಭಾರತ ಕಾರ್ಯಕ್ರಮಕ್ಕೆ ಲಕ್ಷ ಲಕ್ಷ ಅನುದಾನ ಬಿಡುಗಡೆ ಮಾಡಿದರು. ಮಕ್ತಾಪುರ ಗ್ರಾಮದಲ್ಲಿ ಯಾವುದೇ ಸ್ವಚ್ಚತಾ ನಡೆದಿಲ್ಲ ಎನ್ನುತ್ತಾರೆ ಗ್ರಾಮಸ್ಥರು. ಈ ವರೆಗೆ ಗ್ರಾಮಕ್ಕೆ ಬಸ್‌ನ ವ್ಯವಸ್ಥೆ ಇಲ್ಲಾ. ಬಸ್ ವ್ಯವಸ್ಥೆ ಕಲ್ಪಿಸಲು ಮನವಿ ಮಾಡಿದ್ದರು ಸಹ ಸಾರಿಗೆ ಇಲಾಖೆ ಅಧಿಕಾರಿಗಲು ಸ್ಪಂದಿಸುತ್ತಿಲ್ಲಾ. ಇನ್ನೂ ಅದು ಬೇಡಿಕೆಯಾಗಿ ಉಳಿದು ಕೊಂಡಿದೆ. ಇದರಿಂದ ನಗರ ಸೇರಿದಂತೆ ಮತ್ತಿತರ ಗ್ರಾಮಗಳಿಗೆ ತೆರಳಲು ನಿತ್ಯ ಖಾಸಗಿ ವಾಹನಗಳನ್ನೇ ಅವಲಂಭಿಸುವಂತಾಗಿದೆ.

ಅಧಿಕಾರಿಗಳೂ ಗ್ರಾಮಸ್ಥರ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಪ್ರಯತ್ನಿಸಿಲ್ಲ. ರಾತ್ರಿ ಸಮಯದಲ್ಲಿ ಅಥವಾ ಆಸ್ಪತ್ರೆಗೆ ತೆರಳುವ ಸಂದರ್ಭದಲ್ಲಿ ಹೆಚ್ಚಿನ ಹಣ ಕೊಟ್ಟು ಆಟೋ, ಖಾಸಗಿ ವಾಹನದಲ್ಲಿ ತೆರಳುವ ಅನಿವಾರ್ಯದೆ. ಇನ್ನೂ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳು ನಡೆದುಕೊಂಡೇ ಶಾಲೆಗೆ ಬರುವ ಪರಿಸ್ಥಿತಿ ಇದೆ. ರಸ್ತೆ ಯುದ್ದಕ್ಕೂ ಎತ್ತರಕ್ಕೆ ಜಾಲಿ ಕಂಠಿ ಬೆಳೆದಿದ್ದು, ಅಂತಹ ರಸ್ತೆಯಲ್ಲಿ ವಿದ್ಯಾರ್ಥಿಗಳು ಎದರಿಕೊಂಡು ಜೀವ ಕೈಯಲ್ಲಿ ಹಿಡಿದುಕೊಂಡು ಬರುವಂತಾಗಿದೆ. ಇದರಿಂದ ಶಾಲಾ ಕಾಲೇಜುಗಳಿಗೆ ತಲುಪಲು ತಡವಾಗುತ್ತಿದೆ.

Related