ಬಿಬಿಎಂಪಿ ಕಸದ ವಾಹನಗಳಿಗೆ ಡೀಸೆಲ್ ಬದಲು ಸಿ ಎನ್ ಜಿ ಅಳವಡಿಕೆ

ಬಿಬಿಎಂಪಿ ಕಸದ ವಾಹನಗಳಿಗೆ ಡೀಸೆಲ್ ಬದಲು ಸಿ ಎನ್ ಜಿ ಅಳವಡಿಕೆ

ಆನೇಕಲ್: ಸದಾ ಒಂದಲ್ಲ ಒಂದು ಅಪಘಾತಗಳ ಮೂಲಕ ಸುದ್ದಿಯಲ್ಲಿರುವ ಬೆಂಗಳೂರಿನ ಬಿಬಿಎಂಪಿ ಲಾರಿಗಳು ಇನ್ನು ಮುಂದೆ ಮಾಲಿನ್ಯ ತಡೆಯುವ ನಿಟ್ಟಿನಲ್ಲಿ  ಸಿ.ಎನ್.ಜಿ ಮೂಲಕ ಸಂಚಾರ ಮಾಡಲಿವೆ ಎಂದು ಶಾಸಕ ಎಂ ಸತೀಶ್ ರೆಡ್ಡಿ ಹೇಳಿದರು.

ಅವರು ಮೈಲಸಂದ್ರದಲ್ಲಿ ಆಯೋಜನೆ ಮಾಡಿದ್ದ ಬಿಬಿಎಂಪಿ ಕಸದ ಲಾರಿಗೆ ಸಿ.ಎನ್.ಜಿ ಅಳವಡಿಕೆ ಮಾಡಿರುವುದನ್ನು ಉದ್ಘಾಟನೆ ಮಾಡಿ ಮಾತನಾಡಿದರು, ಬೆಂಗಳೂರಿನಲ್ಲಿ ಮಾಲಿನ್ಯ ಹೆಚ್ಚಾಗುತ್ತಿದ್ದು ಈಗಾಗಲೇ ದೆಹಲಿ ಸೇರಿ ವಿವಿಧಡೆ ನಾವು ಪ್ರತಿದಿನವೂ ಮಾಲಿನ್ಯದ ವರದಿಗಳನ್ನು ನೋಡುತ್ತಲೇ ಇದ್ದೇವೆ ಈ ನಿಟ್ಟಿನಲ್ಲಿ ಪರಿಸರ ರಕ್ಷಣೆಗೆ ಮುಂದಾಗಿದ್ದು ಮೊದಲ ಬಾರಿಗೆ ಕರ್ನಾಟಕದಲ್ಲಿ ಬೊಮ್ಮನಹಳ್ಳಿಯಲ್ಲಿ ಬಿಬಿಎಂಪಿ ಲಾರಿಗಳಿಗೆ ಸಿ ಎನ್ ಜಿ ಅಳವಡಿಕೆ ಮಾಡುವ ಮೂಲಕ ಚಾಲನೆ ನೀಡಲಾಗಿದ್ದು ಮುಂದಿನ ದಿನಗಳಲ್ಲಿ ಬೆಂಗಳೂರಿನ ಕಸದ ಲಾರಿಗಳಿಗೆ ಈ ತಂತ್ರಜ್ಞಾನವನ್ನು ಅಳವಡಿಸುವ ಮೂಲಕ ಡೀಸೆಲ್ ಉಳಿಸುವ ಕೆಲಸವನ್ನು ಮಾಡಲಾಗುತ್ತದೆ ಎಂದು ಹೇಳಿದರು.

ಗೈಲ್ ಗ್ಯಾಸ್ ನವರು ಯೋಜನೆಗೆ ಸಹಕಾರವನ್ನು ನೀಡಿದ್ದು ಮುಂದಿನ ದಿನಗಳಲ್ಲಿ ಕಸದಿಂದ ಗ್ಯಾಸ್ ತಯಾರು ಮಾಡುವ ಸಿದ್ಧತೆ ನಡೆಸಲಾಗಿದ್ದು ಇದರಿಂದಲೇ ಈ ಲಾರಿಗಳನ್ನು ಸಂಚಾರ ಮಾಡಲು ಬೇಕಾದ ಕ್ರಮಗಳನ್ನು ಕೈಗೊಳ್ಳಲು ಸಿದ್ಧತೆ ನಡೆಸಲಾಗಿದೆ ಎಂದರು.

ಎಚ್.ಎಸ್.ಆರ್ ಸಿಟಿಜನ್ ಫೋರಮ್ ಸದಸ್ಯೆ ಡಾ.ಶಾಂತಿ ಮಾತನಾಡಿ, ಈ ನೂತನ ತಂತ್ರಜ್ಞಾನದಿಂದ ಬಿಬಿಎಂಪಿ ಕಸದ ಲಾರಿಗಳಿಗೆ ಬೊಮ್ಮನಹಳ್ಳಿಯಲ್ಲಿ ಮೊದಲ ಬಾರಿಗೆ ಚಾಲನೆ ನೀಡಿರುವುದು ತುಂಬಾ ಸಂತೋಷ ತಂದಿದೆ ಈ ಭಾಗದಲ್ಲಿ ಮಾಲಿನ್ಯವನ್ನು ತಡೆಯುವ ನಿಟ್ಟಿನಲ್ಲಿ ಇದು ಹೆಚ್ಚು ಸಹಕಾರಿ ಆಗಲಿದ್ದು,ದೊಡ್ಡ ವಾಹನ ಆಗಿರುವುದರಿಂದ ಡಿಸೇಲ್ ನಿಂದ ಸಿ.ಎನ್.ಜಿ ಗೆ ವರ್ಗಾವಣೆ ಮಾಡಲು ನಾಲ್ಕು ಲಕ್ಷ ಖರ್ಚು ಆಗಲಿದೆ, ಗೈಲ್ ಗ್ಯಾಸ್ ನವರು ನವೆಂಬರ್ ತಿಂಗಳಲ್ಲಿ ನಮೂದು ಮಾಡಿಕೊಂಡವರಿಗೆ 25 ಸಾವಿರ ಕೂಪನ್ ನೀಡುತ್ತಿದ್ದು,ಕಸದ ವಾಹನಗಳಿಗೆ 50 ಸಾವಿರ ನೀಡಲು‌ ಮನವಿ ಮಾಡಲಾಗಿದ್ದು ಅದಕ್ಕೆ ಮೇಲಧಿಕಾರಿಗಳ ಜೊತೆ ಚರ್ಚಿಸಿ ಕ್ರಮ‌ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದರು.

ಎಚ್.ಎಸ್.ಆರ್ ಬಡಾವಣೆಯಲ್ಲಿ ನೂತನ ಭಯೋ ಸಿ.ಎನ್.ಜಿ ಘಟಕ ನಿರ್ಮಾಣ ಮಾಡಲಾಗುತ್ತಿದ್ದು ಮುಂದಿನ ದಿನಗಳಲ್ಲಿ ಇದೇ ಘಟಕದಿಂದ ಬಿಬಿಎಂಪಿ ಕಸದ ವಾಹನಗಳಿಗೆ ಗ್ಯಾಸ್ ತುಂಬಿಸುವ ವ್ಯವಸ್ಥೆ ಆಗಲಿದೆ ಎಂದರು.

ಈ ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರಾದ ಹೊಂಗಸಂದ್ರ ಶ್ರೀನಿವಾಸ್ ರೆಡ್ಡಿ, ರೂಪೇಶ್ ರೆಡ್ಡಿ, ಬಿಬಿಎಂಪಿ ಮಾಜಿ ಉಪಮಹಾಪೌರ ಮೋಹನ್ ರಾಜ್,ಪಾಲಿಕೆ ಮಾಜಿ‌ ಸದಸ್ಯ ಜಲ್ಲಿ ರಮೇಶ್, ಹೊಂಗಸಂದ್ರ ವಾರ್ಡ್ ಬಿಜೆಪಿ ಅಧ್ಯಕ್ಷ ಬಾಬುರೆಡ್ಡಿ ಮತ್ತಿತರರು ಹಾಜರಿದ್ದರು.

 

Related