ಕೃಷಿ ಮಹಿಳೆಯರಿಗೆ ತರಬೇತಿ

  • In State
  • August 26, 2021
  • 505 Views
ಕೃಷಿ ಮಹಿಳೆಯರಿಗೆ ತರಬೇತಿ

ಹಾನಗಲ್ : ಕೃಷಿ ಕುಟುಂಬದ ಮಹಿಳೆಯರಿಗೆ ಗುರುವಾರ ತರಬೇತಿ ಕಾರ್ಯಾಲಯವನ್ನು ಪಟ್ಟಣದ ಲೋಯೊಲಾ ವಿಕಾಸ ಕೇಂದ್ರದಲ್ಲಿ ಹಮ್ಮಿಕೊಂಡಿದ್ದರು. ಕಾರ್ಯಕ್ರಮದಲ್ಲಿ ರಾಣೆಬೆನ್ನೂರಿನ ಕೃಷಿ ಇಲಾಖೆಯ ಎನ್.ಕೆ.ಅಪ್ಪಣ್ಣ ಭಾಗಿಯಾಗಿದರು.

ಮಾತನಾಡಿದ ಅವರು ದೇಶದಲ್ಲಿ ಶೇ. 80 ರಷ್ಟು ಜನತೆ ಕೃಷಿಯನ್ನೇ ಅವಲಂಬಿಸಿದ್ದು, ಸಾವಯವ ಕೃಷಿ ಮೂಲಕ ಇಳುವರಿಯನ್ನು ಹೆಚ್ಚಿಸಿದ್ದಾರೆ. ಭೂಮಿಯನ್ನು ಫಲವತ್ತಾಗಿ ಇಟ್ಟುಕೊಳ್ಳಲು ಸಾಧ್ಯ. ಬೆಳೆಗಳ ಇಳುವರಿಯ ಗುಣಮಟ್ಟವನ್ನು ಹೆಚ್ಚಿಸಲು ಜೈವಿಕ ತಂತ್ರಜ್ಞಾನ ಬಳಕೆ ಅವಶ್ಯವಾಗಿದೆ. ಈ ಮೂಲಕ ಉತ್ತಮ ಮೂಲದ ಚಿಗುರು ಅಭಿವೃದ್ಧಿ, ಮಣ್ಣಿನ ಆರೋಗ್ಯ, ಸಸ್ಯಗಳು ರೋಗಗಳ ವಿರುದ್ಧ ಹೋರಾಡುವ ಸಾಮರ್ಥ್ಯ ಹೊಂದಿ ಉತ್ತಮ ಬೆಳೆ ಪೋಷಣೆಯಾಗುತ್ತದೆ ಎಂದು ಹೇಳಿದರು.

ಲೋಯೊಲ ವಿಕಾಸ ಕೇಂದ್ರದ ನಿರ್ದೇಶಕ ಫಾ. ಸಂತೋಷ ಮಾತನಾಡಿ, ಕೃಷಿ ಕುಟುಂಬದ ಮಹಿಳೆಯರು ಈ ತರಬೇತಿಯಲ್ಲಿ ಭಾಗಿಯಾಗಿದ್ದು, ನೀವು ಬೆಳೆದ ಬೆಳೆಗಳಿಗೆ ಇಲ್ಲಿ ಯಾವ ರೀತಿಯ ತಳಿಯ ಗೊಬ್ಬರ ಬೀಜಗಳನ್ನು ಹಾಕಬೇಕು, ಮಾರ್ಕೆಟಿಂಗ್ ಕುರಿತು ಸಂಪೂರ್ಣವಾಗಿ ತಿಳಿದುಕೊಂಡು ಇದನ್ನು ನಿಮ್ಮ ಕೆಲಸದಲ್ಲಿ ಅಳವಡಿಸಿ ಆರ್ಥಿಕವಾಗಿ ಅಭಿವೃದ್ಧಿ ಕಂಡುಕೊಳ್ಳಿ ಎಂದು ತಿಳಿಸಿದರು.

ಈ ವೇಳೆ ಲೋಯೊಲ ತಾಲೂಕಾ ಒಕ್ಕೂಟದ ಅದ್ಯಕ್ಷೆ ಪದ್ಮಾ, ದಾನಮ್ಮ, ಕವಿತಾ, ಪ್ರತಿಭಾ, ಮಹಿಳಾ ಸ್ವ ಸಹಾಯ ಸಂಘಗಳ ಸಂಯೋಕರಾದ ಜಯಮ್ಮ, ಚಂದ್ರಪ್ಪ ಉಪಸ್ಥಿತರಿದ್ದರು.

Related