ಬೆಂಗಳೂರು: ವಿಶ್ವವಿಖ್ಯಾತ ಮೈಸೂರು ದಸರಾವನ್ನು ಈ ಬಾರಿ ಬೂಕರ್ ಪ್ರಶಸ್ತಿ ವಿಜೇತ ಭಾನು ಮುಷ್ತಾಕ್ ರವರು ಉದ್ಘಾಟನೆ ಮಾಡಲಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗಾಗಲೇ ತಿಳಿಸಿದ್ದಾರೆ. ಭಾನು ಮುಷ್ತಾಕ್ ರವರು ಈ ಬಾರಿ ದಸರಾ ಉದ್ಘಾಟನೆ ಮಾಡುತ್ತಿರುವುದನ್ನು ಬಿಜೆಪಿ ಪಕ್ಷ ವಿರೋಧ ವ್ಯಕ್ತಪಡಿಸುತ್ತಿದೆ.
ಇನ್ನು ಈ ಕುರಿತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿರುವಂತ ಹೆಚ್ ಸಿ ಮಾದೇವಪ್ಪನವರು ಪ್ರತಿಕ್ರಿಯಿಸಿದ್ದಾರೆ. ನಗರದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬಾನು ಮುಷ್ತಾಕ್ ಉದ್ಘಾಟನೆ ಮಾಡಿದ್ರೆ ಏನ್ ತಪ್ಪು? ಕರಾವಳಿ ಭಾಗ ಸೇರಿ ಅನೇಕ ಕಡೆ ಮಸೀದಿ ಕೆಳಗೆ ದೇವಾಲಯ ಇದೆ. ಕೆಲವು ಕಡೆ ದೇವಾಲಯ ಕೆಳಗೆ ಮಸೀದಿ ಇರುತ್ತದೆ. ಯುಗಾದಿಗೆ ಹೋಳಿಗೆ ಊಟ ಮಾಡಿದ್ರೆ ನಮ್ಮ ಮನೆಗೆ ಬರ್ತಾರೆ. ಇದನ್ನೂ ಓದಿ: ಬಿಹಾರದ ‘ವೋಟ್ ಅಧಿಕಾರ ಯಾತ್ರೆ’ ದೇಶದ ಪಾಲಿನ ಗೇಮ್ ಚೇಂಜರ್: ಡಿಸಿಎಂ
ಬಕ್ರೀದ್ ಮಾಡಿದ್ರೆ ನಾವು ಬಿರಿಯಾನಿ ತಿನ್ನೋಕೆ ಹೋಗುತ್ತೇವೆ, ಅದರಲ್ಲಿ ಏನಿದೆ. ಯಾಕೆ ಅದರಲ್ಲಿ ತಾರತಮ್ಯ ಮಾಡ್ತೀರಾ..? ಸಾಂಸ್ಕೃತಿಕವಾಗಿ ಇರೋದು ನಾಡಹಬ್ಬ. ಸಂವಿಧಾನಾತ್ಮಕ ನಡೆಗೆ ಯಾರದ್ದು ಅಭ್ಯಂತರ ಆಗೋದು, ಅಡಚಣೆ ಮಾಡೋದು ಸಂವಿಧಾನಕ್ಕೆ ಮಾಡಿದ ಅಪಚಾರ. ಬಾನು ಮುಷ್ತಾಕ್ ಬದಲಾವಣೆ ಬಗ್ಗೆ ಮರು ಚಿಂತನೆ ಯಾವುದು ಇಲ್ಲ ಎಂದು ಸಚಿವ ಮಹದೇವಪ್ಪ ಹೇಳಿದರು.
