ಪತಿ ಕಿರುಕುಳಕ್ಕೆ ಮಸಣ ಸೇರಿದ ಪತ್ನಿ..!

  • In Crime
  • August 6, 2022
  • 283 Views
ಪತಿ ಕಿರುಕುಳಕ್ಕೆ ಮಸಣ ಸೇರಿದ ಪತ್ನಿ..!

ಅಲ್ಬನಿ: ಪತಿ ಜೊತೆ ನ್ಯೂಯಾರ್ಕ್ನಲ್ಲಿದ್ದ ಭಾರತೀಯ ಮೂಲದ ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ಸುದ್ದಿ ಭಾರೀ ಸದ್ದು ಮಾಡುತ್ತಿದೆ. ನ್ಯೂಯಾರ್ಕ್ ನಿವಾಸಿಯಾಗಿರುವ 30 ವರ್ಷದ ಭಾರತೀಯ ಮೂಲದ ಮಹಿಳೆ ಮಂದೀಪ್ ಕೌರ್ ಅವರು ಎಂಟು ವರ್ಷಗಳ ಕಾಲ ಆಕೆಯ ಪತಿ ರಂಜೋಧಬೀರ್ ಸಿಂಗ್ ಸಂಧು ಅವರಿಂದ ಪದೇ ಪದೇ ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾಗುತ್ತಿದ್ದರು.

ಪರಿಣಾಮ ಪತಿಯ ಕಿರಿಕುಳ ತಡೆಯಲಾದೆ ಆಗಸ್ಟ್ 3 ರಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೌರ್ ಅವರಿಗೆ ನಾಲ್ಕು ಮತ್ತು ಆರು ವರ್ಷದ ಇಬ್ಬರು ಹೆಣ್ಣು ಮಕ್ಕಳಿದ್ದು ಅವರನ್ನು ಅಗಲಿದ್ದಾರೆ.

ಪ್ರಸ್ತುತ ಪೊಲೀಸರು ಸಂಧು ಅವರನ್ನು ವಶಕ್ಕೆ ಪಡೆದುಕೊಂಡಿದ್ದು, ವಿಚಾರಣೆ ಮಾಡುತ್ತಿದ್ದಾರೆ. ಪುತ್ರಿಯರು ನ್ಯೂಯಾರ್ಕ್ನ ರಿಚ್ಮಂಡ್ ಹಿಲ್ನಲ್ಲಿದ್ದಾರೆ. ಅವರ ಕುಟುಂಬ ಉತ್ತರ ಪ್ರದೇಶದ ಬಿಜ್ನೋರ್ನಿಂದ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Related