ಎಳನೀರಿನಲ್ಲಡಗಿದೆ ಆರೋಗ್ಯದ ಗುಟ್ಟ…!

ಎಳನೀರಿನಲ್ಲಡಗಿದೆ ಆರೋಗ್ಯದ ಗುಟ್ಟ…!

ನಮ್ಮ ದಿನನಿತ್ಯ ಜೀವನದ ಆರೋಗ್ಯಕ್ಕಾಗಿ ಹತ್ತು ಹಲವಾರು ಮಾರ್ಗಗಳನ್ನು ಹುಡುಕುತ್ತೇವೆ. ಆದರೆ ನಮ್ಮ ಆರೋಗ್ಯದ ಗುಟ್ಟು ನಾವು ಸೇವಿಸುವ ಆಹಾರದಲ್ಲಿದೆ. ನಾವು ಸೇವಿಸುವ ಆಹಾರ ಪಧ್ದತಿ ಅತೀ ಮುಖ್ಯವಾದದ್ದಾಗಿದೆ. ನಾವು ಸೇವಿಸುವ ಹಣ್ಣು, ನೀರು, ತರಕಾರಿಗಳು ಅತೀ ಪ್ರಮುಖ ಪಾತ್ರವಹಿಸುತ್ತವೆ.

ದೇಹಕ್ಕೆ ಬೇಕಾದ ಪೌಷ್ಟಿಕಾಂಶಗಳನ್ನು ಹೊಂದಿರುವ ಏಕೈಕ ಪಾನೀಯ ಎಂದರೆ ಅದು ಎಳನೀರು. ಇತ್ತೀಚಿನ ದಿನಗಳಲ್ಲಿ ಇದರ ಮಹತ್ವ ಅಪಾರವಾದದ್ದು, ಕರಾವಳಿ ತೀರದ ಭಾಗದಲ್ಲಿ ತೆಂಗನ್ನು ಹೆಚ್ಚಾಗಿ ಬೆಳೆಯಾಲುಗುತ್ತದೆ. ಬೇಸಿಗೆ ಸಮಯದಲ್ಲಿ ಎಲ್ಲಾ ಮಂದಿ ಹೆಚ್ಚಾಗಿ ಇದನ್ನು ಕುಡಿಯಲು ಬಯಸುತ್ತಾರೆ. ಆದರೆ ಇದರ ಮಹತ್ವ ಕೇವಲ ಬೇಸಿಗೆ ಕಾಲಕ್ಕೆ ಮಾತ್ರ ಸೀಮಿತವಾಗಿಲ್ಲ ಎಂಬುದನ್ನು ಜನ ತಿಳಿಯಬೇಕಿದೆ.

ಹೌದು, ಇತ್ತೀಚಿನ ದಿನಮಾನಗಳಲ್ಲಿ ಜನರು ಕೆಮಿಕಲ್ ಮಿಶ್ರಿತ ಕೂಲ್ ಡ್ರಿಂಕ್ಸ್‌ ಗಳ ಮೊರೆ ಹೋಗುತ್ತಿದ್ದಾರೆ. ನಾಲಿಗೆ ರುಚಿಗೆ ಬಿದ್ದು ದುಡ್ಡುಕೊಟ್ಟು ಆರೋಗ್ಯವನ್ನು ಹಾಳುಮಾಡಿಕೊಳ್ಳುತ್ತಿದ್ದಾರೆ. ಆದರೆ ಯಾವುದೇ  ಸೈಡ್‌ಎಫೆಕ್ಟ್‌ ಗಳಿಲ್ಲದ ಎಳನೀರಿನ ಬಗ್ಗೆ ಯಾರಿಗೂ ಅರಿವಿಲ್ಲ.

ಯೆಸ್..‌ ಸಂಪೂರ್ಣವಾಗಿ ಪೋಷಕಾಂಷಗಳನ್ನು ಹೊಂದಿರುವ ಎಳನೀರು ದೇಹಕ್ಕೆ ಉತ್ತಮ ಆರೋಗ್ಯ ಮಿತ್ರವಾಗಿದೆ.

ಹತ್ತು ಹಲವಾರು ಉಪಯೋಗ ಹೊಂದಿರುವ ಎಳನೀರು ದೇಹದಲ್ಲಿ ದ್ರವ ಸಮತೋಲನವನ್ನು ಕಾಪಾಡುತ್ತದೆ. ಪೊಟ್ಯಾಷಿಯಮ್‌, ಸೋಡಿಯಮ್‌, ಮೆಗ್ನೆಷಿಯಮ್‌ ನ್ನು ಹೊಂದಿದೆ. ಭಾರತೀಯ ಆಯುರ್ವೇದ ಶಾಸ್ತ್ರದಲ್ಲಿ ಸಹ ಎಳನೀರಿನ ಮಹತ್ವದ ಬಗ್ಗೆ ಉಲ್ಲೇಖವಿದೆ. ತೆಂಗಿನ ನೀರು ಜೀರ್ಣಕ್ರಿಯೆಯಲ್ಲಿ ಮೂತ್ರವಿಸರ್ಜನೆಯಲ್ಲಿ ದೇಹದ ಚಟುವಟಿಕೆಗಳಿಗೆ ಸೂಕ್ತವಾಗಿದೆ. ಇದರಲ್ಲಿ ಅಧಿಕ ಪೊಟ್ಯಾಷಿಯಮ್‌ ಇರುವದರಿಂದ ದೇಹದಲ್ಲಿ ರಕ್ತದೊತ್ತಡವನ್ನು ಕಾಪಾಡುತ್ತದೆ. ದೇಹದಲ್ಲಿ ಉರಿಯೂತದ ಸಮಸ್ಯೆಗಳಿಗೆ ಪಾರಿಹಾರ ನೀಡುವ ಇದು ಚರ್ಮದ ಕಾಂತಿಗೂ ಕಾರಣವಾಗಿದೆ. ಇದರ ಒಂದು ಅತ್ಯಧ್ಬುತ ಶಕ್ತಿ ಎಂದರೆ ದಿನಾಲು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಎಳನೀರು ಕುಡಿದರೆ ಮಧ್ಯಪಾನ ದಂತ ಹವ್ಯಾಸಗಳನ್ನು ಬಿಡಬಹುದಾಗಿದೆ. ಇದನ್ನೂ ಓದಿ: ರೇಣುಕಾಸ್ವಾಮಿ ಹತ್ಯೆ ಕೇಸ್; ಚಿತ್ರದುರ್ಗದಲ್ಲಿ ಪೊಲೀಸರ ಸ್ಥಳ ಮಹಜರ್

ಇನ್ನು ಬೆಳಿಗ್ಗೆ ಎದ್ದ ಕೂಡಲೇ ಎಳನೀರು ಸೇವನೆ ಮಾಡುವುದರಿಂದ ನಮ್ಮ ದೇಹದಲ್ಲಿರುವಂತಹ ಕೆಟ್ಟ ಕೊಲೆಸ್ಟ್ರಾಲ್ ಕೂಡ ಕಡಿಮೆ ಮಾಡುತ್ತದೆ.

ಪ್ರತಿನಿತ್ಯ ಎಳನೀರು ಸೇವನೆ ಮಾಡುತ್ತಾ ಬಂದರೆ ನಮ್ಮ ದೇಹದಲ್ಲಿರುವ ಉಷ್ಣಾಂಶವನ್ನು ಕೂಡ ಕ್ರಮೇಣವಾಗಿ ಕಡಿಮೆ ಮಾಡುತ್ತದೆ.

ಕಿಡ್ನಿ ಸ್ಟೋನ್ ಸಮಸ್ಯೆ ಇರುವವರು ಪ್ರತಿನಿತ್ಯ ಒಂದರಿಂದ ಎರಡು ಎಳನೀರು ಸೇವನೆ ಮಾಡುವುದರಿಂದ ಕ್ರಮೇಣವಾಗಿ ಕಿಡ್ನಿಯಲ್ಲಿರುವ ಸ್ಟೋನ್ ಗಳು ಕರಗುತ್ತವೆ ಎಂದು ವೈದ್ಯರು ತಿಳಿಸುತ್ತಾರೆ.

Related