ಬೆಂಗಳೂರು: ಸರ್ಜಾಪುರ ಹೋಬಳಿಯ 4 ಗ್ರಾಮ ಪಂಚಾಯಿತಿಗಳ 12 ಹಳ್ಳಿಗಳ 2451 ಎಕರೆ ಜಮೀನುಗಳನ್ನು ಕೈಗಾರಿಕಾ ಹೆಸರಿನಲ್ಲಿ ಫಲವತ್ತಾದ ರೈತರ ಜಮೀನುಗಳನ್ನು ಸರ್ಕಾರ ಬಲವಂತವಾಗಿ ಕಸಿದುಕೊಂಡು ರೈತರ ಹೊಟ್ಟೆ ಮೇಲೆ ಹೊಡೆಯುವ ಪ್ರಕ್ರಿಯನ್ನು ಕೂಡಲೇ ಕೈಬಿಡಬೇಕೆಂದು ಈಗಾಗಲೇ ಮುತ್ತಾನಲ್ಲೂರು ಗ್ರಾಮದಲ್ಲಿ ಕಳೆದ 35 ದಿನಗಳಿಂದ ಅಹೋರಾತ್ರಿ ಪ್ರತಿಭಟನೆಯನ್ನು ರೈತರು ನಡೆಸುತ್ತಾ ಬಂದಿರುತ್ತಾರೆ.
ಸದರಿ ರೈತರ ಭೂಮಿಗಳನ್ನು ಯಾವುದೇ ಕಾರಣಕ್ಕೂ ಸ್ವಾಧೀನ ಪಡಿಸಿಕೊಳ್ಳಬಾರದೆಂದು ಇಂದು (ಬುಧವಾರ ಆಗಸ್ಟ್ 13) ರಂದು ಶಾಸಕರಾದ ಸತೀಶ್ ರೆಡ್ಡಿ ರವರಲ್ಲಿ ರೆಡ್ಡಿ ಜನ ಸಂಘದ ರಾಜ್ಯ ನಿರ್ದೇಶಕರಾದ ಎಸ್ ಆರ್ ಟಿ ಅಶೋಕ್ ರೆಡ್ಡಿ ಮತ್ತು ನಾಗರಾಜ್ ರೆಡ್ಡಿ ನೇತೃತ್ವದಲ್ಲಿ ಹೋರಾಟ ಸಮಿತಿಯ ಗೌರವ ಅಧ್ಯಕ್ಷರುಗಳಾದ ಜಯಪ್ರಕಾಶ್ ವಿಶ್ವನಾಥ ರೆಡ್ಡಿ ಅಧ್ಯಕ್ಷರಾದ ಕೆ ಸಿ ದೇವರಾಜ ರೆಡ್ಡಿ ಕಾರ್ಯದರ್ಶಿ ಮಧು ರೈತ ಮುಖಂಡರುಗಳಾದ ಅಂಬರೀಶ್ ರೆಡ್ಡಿ ನಂಜಾ ರೆಡ್ಡಿ ಶ್ರೀಮತಿ ಮಂಜುಳಾ ಶ್ರೀಮತಿ ಪುಷ್ಪ ವಿ ಎಸ್ ರೆಡ್ಡಿ ನಾಗೇಶ್ ರೆಡ್ಡಿ ಗೋಪಸಂದ್ರ ನಾಗೇಶ್ ಮುತ್ತಾನಲ್ಲೂರು ಸುನಿಲ್ ಪ್ರವೀಣ್ ಚಿಕ್ಕ ತಿಮ್ಮಸಂದ್ರ ವೇಣು ಸುನಂದಮ್ಮ ಹಿರಿಯ ನ್ಯಾಯವಾದಿಗಳಾದ ರಾಮಸ್ವಾಮಿ ರೆಡ್ಡಿ ಸಮಿತಿಯ ಸಂಚಾಲಕರಾದ ಡಾ. ಚಿನ್ನಪ್ಪ ವೈ ಚಿಕ್ಕಹಾಗಡೆ ಇನ್ನು ಹಲವಾರು ರೈತ ಮುಖಂಡರು ಭಾಗವಹಿಸಿ ವಿಧಾನ ಸಭೆಯ ಅಧಿವೇಶನದಲ್ಲಿ ಮಾತನಾಡುವಂತೆ ಮನವಿ ಮಾಡಿಕೊಂಡರು. ಇದನ್ನೂ ಓದಿ: ಖಾಸಗಿ ಹೋಟೆಲ್ ನಲ್ಲಿ ಸಿಎಂ ಸಭೆ
ಈಗಾಗಲೇ ಆನೇಕಲ್ ತಾಲೂಕಿನಲ್ಲಿ 5 ಕೈಗಾರಿಕಾ ಪ್ರದೇಶಗಳು 8 ವಸತಿ ಬಡಾವಣೆಗಳು ಇದ್ದು ಸಾವಿರಾರು ಎಕರೆ ಜಮೀನುಗಳನ್ನು ಸರ್ಕಾರ ಈಗಾಗಲೇ ವಶಪಡಿಸಿಕೊಂಡಿದೆ ಮತ್ತು ಕಾರ್ಖಾನೆಗಳಿಂದ ಆನೇಕಲ್ ಭಾಗದಲ್ಲಿ ಇರುವಂತ ಪ್ರತಿಷ್ಠಿತ ಕಾರ್ಖಾನೆಗಳು ತ್ಯಾಜ್ಯ ಮತ್ತು ಕಲ್ಮಶಗಳನ್ನು ಬಿಟ್ಟು ಎಲ್ಲಾ ಕೆರೆಗಳು ಕಲುಶಿತವಾಗಿದೆ. ಪರಿಸರ ಸಂಪೂರ್ಣವಾಗಿ ಕಲಿಸಿತವಾಗಿದೆ ಮತ್ತು ಈ ಭಾಗದಲ್ಲಿ ಈಗಾಗಲೇ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು ರಸ್ತೆಗಳ ನಿರ್ಮಾಣದಲ್ಲಿ ಸರ್ಕಾರವಿಫಲತೆಯಾಗಿದ್ದು ಮತ್ತು ಈ ಹಿಂದೆ ಸರ್ಕಾರ ಪಡೆದುಕೊಂಡಂತ ಭೂಮಿಯನ್ನ ಅಭಿವೃದ್ಧಿಪಡಿಸದೆ ಇರುವುದು ನಮ್ಮ ಕಣ್ಣ ಮುಂದೆ ಇದೆ.
ಆದ್ದರಿಂದ ಈಗಾಗಲೇ ಆನೇಕಲ್ ತಾಲೂಕಿನಲ್ಲಿ ಉಳಿದಿರುವ ಜಮೀನುಗಳಲ್ಲಿ ಎಲ್ಲರೂ ಕೂಡ ಕೃಷಿ ಆಧಾರಿತ ಚಟುವಟಿಕೆಗಳು ತೋಟಗಾರಿಕೆ ಬೆಳೆಗಳು ಮತ್ತು ಹೂವು ಬೆಳೆದು ಜೊತೆಗೆ ಪ್ರತಿ ಗ್ರಾಮಗಳಲ್ಲಿ ಪ್ರತಿ ಕುಟುಂಬದಲ್ಲಿ ಹೈನುಗಾರಿಕೆ ಮುಖಾಂತರ ತಮ್ಮ ಜೀವನದ ಜೀವನ ಅಪಾಯಕ್ಕಾಗಿ ಬದುಕನ್ನ ಕಟ್ಟಿಕೊಂಡಿದ್ದಾರೆ.
ಸದರಿ ಜಮೀನುಗಳ ಭೂ ಸ್ವಾಧೀನ ಪಡೆದುಕೊಂಡಲ್ಲಿ ಸಾವಿರಾರು ಕುಟುಂಬಗಳು ಬೀದಿ ಪಾಲಾಗುತ್ತದೆ ಆದ್ದರಿಂದ ಕೂಡಲೇ ಸರ್ಕಾರ ಆನೇಕಲ್ ತಾಲೂಕಿನಲ್ಲಿ ಭೂಸ್ವಾದಿನ ಪಡೆಯದ ಪಡೆಯುವುದನ್ನು ಕೈಬಿಡಬೇಕೆಂದು ಆನೇಕಲ್ ತಾಲೂಕು ಭೂ ಸ್ವಾದಿನ ವಿರೋಧಿ ಹೋರಾಟ ಸಮಿತಿ ಎಚ್ಚರಿಸುತ್ತಾ ಒಂದು ವೇಳೆ ಈ ಪ್ರಕ್ರಿಯೆ ಕೈ ಬಿಡದೆ ರಾಜ್ಯದ ರಾಜಧಾನಿಯಲ್ಲಿ ರೈತರು ಉಗ್ರ ಪ್ರತಿಭಟನೆಯನ್ನು ಮಾಡಬೇಕಾದ ಅನಿವಾರ್ಯತೆ ಇರುತ್ತದೆ ಎಂದು ಹೋರಾಟ ಸಮಿತಿ ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡುತ್ತಿದ್ದೇವೆ ಎಂದರು.
