ಸಂವಿಧಾನ ಪ್ರತಿಯೊಬ್ಬರಿಗೂ ದಾರಿದೀಪ-ಅಮೀನರೆಡ್ಡಿ ಯಾಳಗಿ

ಸಂವಿಧಾನ ಪ್ರತಿಯೊಬ್ಬರಿಗೂ ದಾರಿದೀಪ-ಅಮೀನರೆಡ್ಡಿ ಯಾಳಗಿ

ಶಹಾಪುರ : ಭಾರತ ಸಂವಿಧಾನ ರಚನೆಯ ಸ್ವರೂಪವೇ ಎಲ್ಲರನ್ನೂ ಒಳ್ಳಗೊಳ್ಳುವ ಮೌಲ್ಯವನ್ನು ಆಧರಿಸಿದೆ. ಇದು ಜಗತ್ತಿನ ಶೇಷ್ಠ ಸಂವಿಧಾನಗಳಲ್ಲಿ ಒಂದಾಗಿದೆ ಎಂದು ಬಿಜೆಪಿ ಯುವ ಮುಖಂಡ ಅಮೀನರೆಡ್ಡಿ ಯಾಳಗಿ ಹೇಳಿದರು.

ಬಿಜೆಪಿ ನಗರ ಮತ್ತು ಗ್ರಾಮೀಣ ಎಸ್‌ಸಿ ಮೋರ್ಚಾ ವತಿಯಿಂದ ಸಂವಿಧಾನ ಸಮರ್ಪನಾ ದಿನ ಅಂಗವಾಗಿ ಬಸವೇಶ್ವರ ವೃತ್ತದಿಂದ ಪಾದಯಾತ್ರೆ ಮೂಲಕ ಬುದ್ಧ ನಗರದಲ್ಲಿರುವ ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವಿಸಿ ಮಾತನಾಡಿದ ಅವರು ದೇಶದ ಪ್ರಜಾಪ್ರಭುತ್ವ ನಿಂತಿರುವುದು ಸಂವಿಧಾನಿಕ ಚೌಕಟ್ಟಿನಲ್ಲಿ ಎಂಬುವುದನ್ನು ಗ್ರಹಿಸಬೇಕು. ವಿಶ್ವದಲ್ಲೇ ಅತ್ಯಂತ ಶ್ರೇಷ್ಠವಾದ ಭಾರತದ ಸಂವಿಧಾನವು ಸರ್ವರಿಗೂ ಸಮಬಾಳು-ಸಮಪಾಲು ನೀಡಿದೆ.

ಸಂವಿಧಾನವನ್ನು ಗೌರವಿಸುವುದು ಪ್ರತಿಯೊಬ್ಬ ನಾಗರೀಕನ ಕರ್ತವ್ಯವಾಗಿದೆ. ಸಂವಿಧಾನ ಪ್ರತಿಯೊಬ್ಬರಿಗೂ ದಾರಿ ದೀಪ. ದೇಶದಲ್ಲಿ ಕಾನೂನು, ನ್ಯಾಯ, ನೀತಿ, ಸಮಾನತೆ, ಸಹಬಾಳ್ವೆ ತತ್ವಗಳು ನಿಂತಿರುವುದು ಸಂವಿಧಾನದ ತಳಹದಿಯ ಮೇಲೆ. ಪ್ರತಿಯೊಬ್ಬರು ಸಂವಿಧಾನವನ್ನೂ ಗೌರವಿಸುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸಬೇಕು ಎಂದರು.

ಈ ಸಂದರ್ಭದಲ್ಲಿ ಡಾ. ಚಂದ್ರಶೇಖರ ಸುಭೇದಾರ, ರಾಜುಗೌಡ ಉಕ್ಕಿನಾಳ, ಮಲ್ಲಿಕಾರ್ಜುನ್ ಚಿಲ್ಲಾಳ, ಬಸವರಾಜ ವಿಭೂತಿಹಳ್ಳಿ, ಜಿಲ್ಲಾ ಎಸ್.ಟಿ ಮೋರ್ಚಾದ ಅಧ್ಯಕ್ಷ ರಾಘವೇಂದ್ರ ಯಕ್ಷಿಂತಿ, ಯಲ್ಲಯ್ಯ ನಾಯಕ್ ವನದುರ್ಗಾ, ಮಲ್ಲಿಕಾರ್ಜುನ್ ಕಂದಕೂರ, ಶೇಖರ ದೊರಿ, ರಾಜು ಪಂಚಭಾವಿ, ದೇವಿಂದ್ರ ಕೊನೇರ, ಎಸ್.ಸಿ ಮೋರ್ಚಾ ಗ್ರಾಮೀಣ ಅಧ್ಯಕ್ಷ ರಾಜು ಉಕ್ಕಿನಾಳ, ಮರೆಪ್ಪ ಪ್ಯಾಟಿ, ಚಂದ್ರು ಯಾಳಗಿ, ಭೀಮರಾಯ ಜಂಗಳಿ ಇನ್ನಿತರರಿದ್ದರು.

Related