ಡಯಾಲಿಸಿಸ್ ರೋಗಿಗಳಿಗೆ ಉತ್ತಮ ಚಿಕಿತ್ಸೆ:ತೇಜಸ್ವಿ ಸೂರ್ಯ

ಡಯಾಲಿಸಿಸ್ ರೋಗಿಗಳಿಗೆ ಉತ್ತಮ ಚಿಕಿತ್ಸೆ:ತೇಜಸ್ವಿ ಸೂರ್ಯ

ಬೆಂಗಳೂರು: ಡಯಾಲಿಸಿಸ್ ರೋಗಿಗಳಿಗೆ ಉತ್ತಮ ಚಿಕಿತ್ಸೆ ನಮ್ಮಲ್ಲಿ ಅವಶ್ಯಕತೆ ಇದೆ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದರು.

ಅವರು ಭಾರತೀಯ ಜನತಾ ಪಾರ್ಟಿ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ವತಿಯಿಂದ ಆ ಯೋಜನೆ ಮಾಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾತನಾಡಿದರು.

ನಾವು ಜಯನಗರ ಕೆಎಸ್‌ಆರ್‌ಟಿಸಿ ಆಸ್ಪತ್ರೆಯಲ್ಲಿ ಉಚಿತ ಡಯಾಲಿಸಿಸ್ ಸೆಂಟರ್ ತೆರೆಯಲು ಎಲ್ಲ ರೀತಿಯ ಸಿದ್ಧತೆ ನಡೆದಿದ್ದು ಇದೇ ತಿಂಗಳಲ್ಲಿ ಉದ್ಘಾಟನೆ ಆಗುವ ಸಾಧ್ಯತೆ ಇದೆ, ಈ ಆಸ್ಪತ್ರೆಯಲ್ಲಿ ಬಿಲ್ಲಿಂಗ್ ಕೌಂಟರ್ ಇರಬಾರದು ಎನ್ನುವುದು ನಮ್ಮ ಮುಖ್ಯ ದ್ಯೆಯೆ, ಇಂತಹ ಉಚಿತ ಆಸ್ಪತ್ರೆ ನಡೆಸಬೇಕಾದರೆ ಉಳ್ಳವರ ಸಹಕಾರವು ಕೂಡ ಮುಖ್ಯ ಎಂದರು.

ಬ್ರಾoಡೆಡ್ ಮಾತ್ರೆಗಳಿಗೆ ಖಾಸಗಿ ಮೆಡಿಕಲ್ ನಲ್ಲಿ ಹೆಚ್ಚಿನ ಹಣ ನೀಡಬೇಕು ಆದರೆ ಪ್ರಧಾನಮಂತ್ರಿ ಅವರ ಜನ ಔಷಧಿ ಕೇಂದ್ರಗಳಲ್ಲಿ ಅತಿ ಕಡಿಮೆ ದರದಲ್ಲಿ ಮಾತ್ರೆ ಹಾಗೂ ಔಷಧಿಗಳು ಸಿಗುತ್ತವೆ ಇದರ ಬಗ್ಗೆ ಹೆಚ್ಚಿನ ಪ್ರಚಾರ ಅವಶ್ಯಕಥೆ ಇದೆ, ಬಡವರು ತಿಂಗಳಿಗೆ ಎರಡು ಮೂರು ಸಾವಿರ ರೂಪಾಯಿ ನೀಡಿ ಮಾತ್ರೆ ಹಾಗೂ ಔಷಧಿಗಳನ್ನು ಕೊಳ್ಳಲು ಸಾಧ್ಯವಿರುವುದಿಲ್ಲ ಇದರ ಬಗ್ಗೆ ಬಿಜೆಪಿ ಕಾರ್ಯಕರ್ತರು ಕೂಡ ಹೆಚ್ಚಿನ ಮುತವರ್ಜಿ ಬೇಕು ಎಂದರು.

೭೫ನೇ ಸ್ವಾತಂತ್ರ‍್ಯ ಆಜಾದಿಕ ಅಮೃತ ಮಹೋತ್ಸವ ಸಂದರ್ಭದಲ್ಲಿ ಬೆಂಗಳೂರು ವಿಭಾಗದಲ್ಲಿ ೭೯ ಜನ ಔಷಧಿ ಕೇಂದ್ರಗಳನ್ನು ನಾವು ತೆರೆದಿರುವುದು ಸಂತೋಷದ ಸಂಗತಿ ಎಂದರು.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ೭೦ರಷ್ಟು ಅಂಕ ಕಳುಹಿಸಿದ ಬಡ ವಿದ್ಯಾರ್ಥಿಗಳಿಗೆ ಐದರಿಂದ ಹತ್ತು ಸಾವಿರ ರೂಪಾಯಿ ದಯವಿಟ್ಟು ಹಣವನ್ನು ವಿದ್ಯಾರ್ಥಿವೇತನದ ರೀತಿಯಲ್ಲಿ ನೀಡಲು ಮುಂದಾಗಿದ್ದು ಇದಕ್ಕೆ ನಮ್ಮ ಕಚೇರಿಯನ್ನು ಸಂಪರ್ಕಿಸಿ ಎಂದು ಹೇಳಿದರು.

ಶಾಸಕ ಎಂ.ಸತೀಶ್ ರೆಡ್ಡಿ ಮಾತನಾಡಿ, ಸ್ಥಳೀಯವಾಗಿ ಎಲ್ಲರಿಗೂ ಆರೋಗ್ಯ ಮುಖ್ಯ ಎನ್ನುವ ಕಾರಣದಿಂದ ಬೃಹತ್ ಆರೋಗ್ಯ ತಪಾಸಣಾ ಶಿಬಿರವನ್ನು ಆ ಯೋಜನೆ ಮಾಡಲಾಗಿದೆ, ಎಲ್ಲರಿಗೂ ಕೂಡ ಒಳ್ಳೆಯ ಆರೋಗ್ಯ ಇದ್ದಾಗ ಮಾತ್ರ ನೆಮ್ಮದಿಯ ಜೀವನ ನಡೆಸಲು ಸಾಧ್ಯ, ಪ್ರತಿದಿನದ ಒತ್ತಡದ ಕೆಲಸದಲ್ಲಿ ಆರೋಗ್ಯದ ಕಡೆ ಹೆಚ್ಚಿನ ಗಮನವನ್ನು ಹರಿಸಬೇಕು. ಈ ನಿಟ್ಟಿನಲ್ಲಿ ಬೊಮ್ಮನಹಳ್ಳಿ ಬಿಜೆಪಿ ವತಿಯಿಂದ ಹಲವಾರು ಆಸ್ಪತ್ರೆಗಳ ಸಹಯೋಗದಲ್ಲಿ ಬೃಹತ್ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸುವ ಮೂಲಕ ಸ್ಥಳೀಯರಿಗೆ ಬೇಕಾದ ಎಲ್ಲಾ ರೀತಿಯ ಸಹಕಾರವನ್ನು ನೀಡಲು ಮುಂದಾಗಿದ್ದೇವೆ ಎಂದರು.

ಆರೋಗ್ಯ ತಪಾಸಣಾ ಶಿಬಿರವನ್ನು ನಡೆಸಲು ಹಲವಾರು ಜನ ಶ್ರಮಪಟ್ಟಿದ್ದಾರೆ ಬಿಪಿಎಂಪಿ ಅಧಿಕಾರಿಗಳು ಕೂಡ ಸಹಕಾರವನ್ನು ನೀಡಿದ್ದು ಮುಂದಿನ ದಿನಗಳಲ್ಲಿ ಕೂಡ ಇದೇ ರೀತಿ ಕಾರ್ಯಕ್ರಮಗಳನ್ನು ನಡೆಸಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರಾದ ಶ್ರೀನಿವಾಸ ರೆಡ್ಡಿ, ಸೈಯದ್ ಸಲಾಂ, ಶ್ರೀನಿವಾಸ್, ಮುನಿರಾಮು, ರಾಮಚಂದ್ರ, ಮಹಿಳಾ ಮೋರ್ಚಾ ಅಧ್ಯಕ್ಷ ಭಾರತೀಯ ರಾಮಚಂದ್ರ ಹಾಜರಿದ್ದರು.

Related