ಬೆಂಗಳೂರು ಕಾಶ್ಮೀರದ ಉಗ್ರ ದಾಳಿಯಲ್ಲಿ ಕರ್ನಾಟಕದ ಮೂರು ಜನ ಮೃತರಾಗಿರುವ ಪಾರ್ಥೀವ ಶರೀರವನ್ನು ರಾಜಧಾನಿಗೆ ರವಾನಿಸಲಾಗಿದ್ದು ಮೃತರ ಕುಟುಂಬಕ್ಕೆ ಬಿಜೆಪಿಯ ಸಂಸ್ಕೃತ ತೇಜಸ್ವಿ ಸೂರ್ಯ ಅವರು ಸಾಂತ್ವನ ಹೇಳಿದ್ದಾರೆ.
ಮಂಜುನಾಥ ಅವರ ಪಾರ್ಥೀವ ಶರೀರವನ್ನು ಶಿವಮೊಗ್ಗ, ಭರತ್ ಭೂಷಣ್ ಅವರ ಪಾರ್ಥೀವ ಶರೀರ ಬೆಂಗಳೂರಿನ ಮತ್ತಿಕೆರೆ ಹಾಗೂ ಮಧುಸೂದನ್ ಅವರ ಪಾರ್ಥೀವ ಶರೀರವನ್ನು ಚೆನ್ನೈ ಮೂಲಕ ನೆಲ್ಲೋರಿಗೆ ಕಳುಹಿಸಿ ಕೊಡಲಾಗುತ್ತಿದೆ. ಇದನ್ನೂ ಓದಿ: ಕಾಶ್ಮೀರ ದಾಳಿ; ಪಾಕ್ ಸಂಬಂಧಕ್ಕೆ ಎಳ್ಳು ನೀರು ಬಿಟ್ಟ ಭಾರತ!?
ಬೆಂಗಳೂರು ಏರ್ಪೋರ್ಟ್ನಲ್ಲಿ ಕೇಂದ್ರ ಸಚಿವರಾದ ಶ್ರೀ ವಿ ಸೋಮಣ್ಣ ಅವರು ಮೃತರ ಕಳೆಬರಹಕ್ಕೆ ಭಾವಪೂರ್ಣ ನಮನಗಳನ್ನು ಸಲ್ಲಿಸಿದ್ದು, ಈ ದುರಂತದ ಸಮಯದಲ್ಲಿ ಇಡೀ ದೇಶ ಕುಟುಂಬದೊಂದಿಗೆ ನಿಲ್ಲಲಿದೆ ಎಂದು ತಿಳಿಸಿದ್ದಾರೆ. ಇದೇ ವೇಳೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು, ಸಂತ್ರಸ್ತ ಕುಟುಂಬಗಳಿಗೆ ಸಾಂತ್ವನ ಹೇಳಿದ್ದಾರೆ.
