ಚಿನ್ನದ ಪದಕ ಗೆದ್ದ ಸುಮಿತ್

  • In Sports
  • August 30, 2021
  • 438 Views
ಚಿನ್ನದ ಪದಕ ಗೆದ್ದ ಸುಮಿತ್

ಟೋಕಿಯೊ: ಪ್ಯಾರಾಲಂಪಿಕ್ಸ್ ಜಾವೆಲಿನ್ ಥ್ರೋ ಸ್ಪರ್ಧೆಯ ಎಫ್ 64 ವಿಭಾಗದಲ್ಲಿ ಭಾರತದ ಸುಮಿತ್ ಅಂಟಿಲ್ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ.
68.55 ಮೀಟರ್ ಜಾವೆಲಿನ್ ಎಸೆದು ತನ್ನದೇ ವಿಶ್ವ ದಾಖಲೆಯನ್ನು ಅಳಿಸಿ ಹಾಕಿದರು. ಪ್ಯಾರಾಲಿಂಪಿಕ್ ಆಟದಲ್ಲಿ ಭಾರತ ಎರಡನೇ ಚಿನ್ನದ ಪದಕವನ್ನು ಗೆದ್ದುಕೊಂಡಾಯಿತು. ಸಹ ಆಟಗಾರ ಸಂದೀಪ್ ಚೌಧರಿ ನಾಲ್ಕನೇ ಸ್ಥಾನ ಪಡೆದರು. ಅವರು 62.20 ಮೀಟರ್ ಜಾವೆಲಿನ್ ಎಸೆದರು.
ಭಾರತದ ಶೂಟರ್ ಅವನಿ ಲೇಖಾರ 10 ಮೀ ಏರ್ ರೈಪಲ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಸೋಮವಾರ ಬೆಳಗ್ಗೆ ನಡೆದ ಜಾವೆಲಿನ್ ಥ್ರೋ ಸ್ಪರ್ಧೆಯ ಎಫ್ 46 ವಿಭಾಗದಲ್ಲಿ ಭಾರತದ ದೇವೆಂದ್ರ ಝಾಝರಿಯಾ ಬೆಳ್ಳಿ ಗೆದ್ದರೆ, ಸುಂದರ್ ಸಿಂಗ್ ಗುಜ್ಜರ್ ಕಂಚು ಗೆದ್ದುಕೊಂಡಿದ್ದರು.

Related