ಕರ್ನಾಟಕ, ಕೇರಳ, ತಮಿಳಿನಾಡು ರಾಜ್ಯಗಳು ತತ್ತರ..!!

  • In Crime
  • August 6, 2022
  • 256 Views
ಕರ್ನಾಟಕ, ಕೇರಳ, ತಮಿಳಿನಾಡು ರಾಜ್ಯಗಳು ತತ್ತರ..!!

ರಾಜ್ಯದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ವಿವಿಧ ಜಿಲ್ಲೆಗಳಿಗೆ ಎಚ್ಚರಿಕೆ ರವಾನಿಸಿದೆ.
ಬೀದರ್, ಕಲಬುರ್ಗಿ, ಯಾದಗಿರಿ, ವಿಜಯಪುರ, ರಾಯಚೂರು, ಹಾವೇರಿ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್, ಉತ್ತರ ಒಳನಾಡಿನ ಇತರ ಜಿಲ್ಲೆಗಳಲ್ಲಿ ಎಲ್ಲೋ ಅಲರ್ಟ್ಘೋಷಿಸಲಾಗಿದೆ.

ಬೀದರ್, ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಯಲ್ಲಿ ಭಾನುವಾರ ಮತ್ತು ಸೋಮವಾರ ಎಲ್ಲೋ ಅಲರ್ಟ್ ಜಾರಿ ಮಾಡಲಾಗಿದೆ. ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿ ದಾವಣಗೆರೆಗೆ ಎಲ್ಲೋ ಅಲರ್ಟ್ ನೀಡಲಾಗಿದ್ದು, ಉಳಿದ ಜಿಲ್ಲೆಗಳಿಗೆ ಆಗಸ್ಟ್ 10 ರವರೆಗೆ ಯಾವುದೇ ಎಚ್ಚರಿಕೆ ನೀಡಲಾಗಿಲ್ಲ. ಭಾರೀ ಮಳೆಯಿಂದಾಗಿ ರಾಜ್ಯಾದ್ಯಂತ ಕೃಷಿ ಭೂಮಿ, ರಸ್ತೆಗಳು, ಇತರ ಮೂಲಸೌಕರ್ಯಗಳಿಗೆ ಆಗಿರುವ ವ್ಯಾಪಕ ಹಾನಿ ಮತ್ತು ಈ ಸಮಸ್ಯೆಗಳನ್ನು ಪರಿಹರಿಸಲು ಅಗತ್ಯವಿರುವ ಕ್ರಮಗಳ ಕುರಿತು ಚರ್ಚಿಸಲು ಆಗಸ್ಟ್ 10 ರಂದು ರಾಜ್ಯ ಸಚಿವ ಸಂಪುಟ ಸಭೆ ನಡೆಯಲಿದೆ.

370ರಷ್ಟು ಭೂ ಕುಸಿತಗಳಾಗಿವೆ. 3,600 ಕಿಮೀ ರಸ್ತೆಗಳು, 650 ಸೇತುವೆಗಳು ಹಾನಿಗೊಳಗಾಗಿವೆ ಎಂದು ಪಿಡಬ್ಲ್ಯೂಡಿ ಮತ್ತು ಜಿಲ್ಲಾ ಮೂಲಸೌಕರ್ಯ ತಂಡಗಳು ಅಂದಾಜಿಸಿವೆ. ಅಲ್ಲದೆ, 16,000 ಮನೆಗಳು ಹಾನಿಗೊಳಗಾಗಿವೆ, 400 ಕ್ಕೂ ಹೆಚ್ಚು ಜಾನುವಾರುಗಳು ಸಾವನ್ನಪ್ಪಿವೆ ಎಂದು ವರದಿಯಾಗಿದೆ.
ಜಲಸಂಪನ್ಮೂಲ ಸಚಿವ ಗೋವಿಂದ್ ಕಾರಜೋಳ ಮಾತನಾಡಿ, “ಪ್ರವಾಹ ಪೀಡಿತ ಜನರನ್ನು ಶಾಲಾ-ಕಾಲೇಜುಗಳಂತಹ ಸರಕಾರಿ ಸಂಸ್ಥೆಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಜಿಲ್ಲಾ ಮತ್ತು ತಾಲೂಕು ಆಡಳಿತ ಅಧಿಕಾರಿಗಳು ವರದಿ ನೀಡಿದ್ದಾರೆ” ಎಂದು ತಿಳಿಸಿದ್ದಾರೆ.

ಕೇರಳದಲ್ಲಿ ಆಗುತ್ತಿರುವ ಭಾರೀ ಮಳೆಯ ಅವಘಡಲ್ಲಿ ಒಟ್ಟು ಮೂರು ಜನರು ನಾಪತ್ತೆಯಾಗಿದ್ದಾರೆ. ನಾಲ್ವರು ಗಾಯಗೊಂಡಿದ್ದಾರೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎಸ್ಡಿಎಂಎ) ತಿಳಿಸಿದೆ. ರಾಜ್ಯದಲ್ಲಿ 11 ಎನ್ಡಿಆರ್ಎಫ್ ತಂಡಗಳು ಸಕ್ರಿಯವಾಗಿವೆ. ರಾಜ್ಯಾದ್ಯಂತ 342 ನಿರಾಶ್ರಿತ ಶಿಬಿರಗಳಿದ್ದು, ತ್ರಿಶೂರ್ ಮತ್ತು ಪತ್ತನಂತಿಟ್ಟದಲ್ಲಿ ಕ್ರಮವಾಗಿ 88 ಮತ್ತು 69 ನಿರಾಶ್ರಿತ ಶಿಬಿರಗಳನ್ನು ತೆರೆಯಲಾಗಿದೆ. ಈ ಶಿಬಿರಗಳಲ್ಲಿ ಒಟ್ಟು 12,195 ಜನರಿಗೆ ವಸತಿ ಕಲ್ಪಿಸಲಾಗಿದೆ ಎಂದು ಎಸ್ಡಿಎಂಎ ತಿಳಿಸಿದೆ.

Related