Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ವೈಭವದ ಶ್ರೀ ಬೀರಲಿಂಗೇಶ್ವರ ಪಲ್ಲಕ್ಕಿ ಮಹೋತ್ಸವ
  • State

ವೈಭವದ ಶ್ರೀ ಬೀರಲಿಂಗೇಶ್ವರ ಪಲ್ಲಕ್ಕಿ ಮಹೋತ್ಸವ

admin January 6, 2025 1 minute read
Spread the love

ಶಹಾಪುರ; ತಾಲೂಕಿನ ದೊಡ್ಡ ಸಗರ ಗ್ರಾಮದಲ್ಲಿ ಕನಕಗುರು ಪೀಠದ ಪೂಜ್ಯ ಶ್ರೀ ಸಿದ್ದರಾಮಾನಂದ ಮಹಾಸ್ವಾಮಿಗಳು ಮತ್ತು ಪೂಜ್ಯ ಸಿದ್ರಾಮಯ್ಯ ಗುರುಗಳ ಗುರುವಿನ ಮಠ ಅವರ ನೇತೃತ್ವದಲ್ಲಿ ರವಿವಾರ ದಂದು ಶ್ರೀ ಬೀರಲಿಂಗೇಶ್ವರ ಜಾತ್ರಾ ಮಹೋತ್ಸವ ಪಲ್ಲಕ್ಕಿ ಮೆರವಣಿಗೆ ವಿಜೃಂಭಣೆಯಿಂದ ನಡೆಯಿತು. ಇಡೀ ಜಾತ್ರೆ ತುಂಬಾ ಭಂಡಾರದ ಓಕುಳಿ ಆಡಿ ಭೀರಲಿಂಗನ ಭಕ್ತರು ಸಂಭ್ರಮಿಸಿದರು.

ಬೆಳಗ್ಗೆ ಬೀರಲಿಂಗೇಶ್ವರ ಮೂರ್ತಿಗೆ ವಿಶೇಷ ಪೂಜೆ, ಅಭಿಷೇಕ ನಡೆಯಿತು. ನಂತರ ಪಲ್ಲಕ್ಕಿ ಗಂಗಾಸ್ನಾನ ಹಾಗೂ ಪ್ರಸಾದ, ಸದ್ಬಕ್ತರು ಸೇವೆಯೊಂದಿಗೆ ಕುಂಭ, ಕಳಸ, ಡೊಳ್ಳುಗಳ ವಾದ್ಯ ಮೇಳ ಮಹಿಳೆಯರು ಕಳಸ ಹಿಡಿದುಕೊಂಡು ಗ್ರಾಮದಲ್ಲಿ ವೈಭವದ ಮೆರವಣಿಗೆ ನಡೆಯಿತು. ಉತ್ಸವಕ್ಕೆ ಭಕ್ತರ ದಂಡೇ ಹರಿದು ಬಂದಿತ್ತು. ಇದನ್ನೂ ಓದಿ: ಕೆ.ಎಸ್.ಆರ್.ಟಿ.ಸಿ ಆರೋಗ್ಯ ಯೋಜನೆಗೆ ಚಾಲನೆ

ಸುಡಬಿಸಿಲಿನಿಂದ ಕಾದ ಕಬ್ಬಿಣವಾಗಿದ್ದ ರಸ್ತೆಯಲ್ಲಿ ಬರಿಗಾಲಲ್ಲಿ ಪಲ್ಲಕ್ಕಿ ಹೊತ್ತ ಭಕ್ತರು ಕಾಲು ಸುಡುತ್ತಿದ್ದರು ಅದನ್ನು ಲೆಕ್ಕಿಸದೇ ಮೆರವಣಿಗೆ ಸಾಗಿತು. ಭಕ್ತರ ಸಮ್ಮುಖದಲ್ಲಿ ಬೀರಪ್ಪ ದೇವರು ಹೊತ್ತ ಭಕ್ತರು ಸೇವೆ ಸಲ್ಲಿಸಿ ಪರಾಕಾಷ್ಟೇ ಮೆರೆದರು. ಗ್ರಾಮದಲ್ಲಿ ನಡೆಯುವ ಜಾತ್ರೆಗೆ ಭಕ್ತರು ಹರಕೆ ರೂಪದಲ್ಲಿ ಅಕ್ಕಿ, ದಾಸೋಹ ಸಾಮಗ್ರಿಗಳನ್ನು ಸಲ್ಲಿಸಿದರು. ಮಹಾ ಪ್ರಸಾದ ಕಾರ್ಯಕ್ರಮ ನಡೆಯಿತು. ಭಕ್ತಿಯಿಂದ ಬರುವ ಭಕ್ತರ ತನ್ನ ಮಹಾ ಮಹಿಮೆಯಿಂದ ಜನರ ಮನದಲ್ಲಿ ಮನೆ ಮಾಡಿರುವ ಶ್ರೀ ಬೀರಲಿಂಗೇಶ್ವರನ ಪೌರಾಣಿಕ ಕಥೆಯಿದೆ. ಪೀಡೆ, ಪಿಶಾಚಿ, ದೆವ್ವ ಹೀಗೆ ಹಲವು ರೀತಿಯ ಸಂಕಷ್ಟ ಎದುರಿಸುವ ಭಕ್ತರಿಗೆ ಇಂದಿಗೂ ಅವರ ಆಶೀರ್ವಾದವೆ ದಿವ್ಯ ಔಷಧವಾಗಿದೆ.

ಸಂಜೆ ಪಲ್ಲಕ್ಕಿ ಗರ್ಭಗುಡಿ ಪ್ರವೇಶಿಸಿ ಕಾಯಿ ಕರ್ಪೂರ ದಿಂದ ಪೂಜೆ ಸಲ್ಲಿಸಲಾಯಿತು. ರಾತ್ರಿ 10 ಗಂಟೆಯಿಂದ ಬೆಳಗಿನ ಜಾವದ ವರೆಗೆ ಡೊಳ್ಳಿನ ಹಾಡಿಕೆ ಕಾರ್ಯಕ್ರಮ ಜರುಗಿತು. ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಪಾಲ್ಗೊಂಡಿದ್ದರು.

ಸದ್ಗುರು ಮಾಳಿಂಗರಾಯರ ಗುರುವಾದ ಬೀರಲಿಂಗೇಶ್ವರನು  ಸಾವಿರಾರು ಲಿಂಗಗಳನ್ನು ಕಟ್ಟಿ ಸೇವೆ ಮಾಡಿ. ಸೇವೆಯ ಫಲವಾಗಿ ಕಾಲ ಕಳೆದಂತೆ ಮಾಳಿಂಗರಾಯರ ಭಕ್ತಿಗೆ ಮನಸೋತು ಶಿವ ಪಾರ್ವತಿ ಇಬ್ಬರು ಕೈಲಾಸದಿಂದ ಭೂಮಿಗಿಳಿದಿದ್ದಾರೆ ಅಂದಿನಿAದ ಇಂದಿಗೂ ಮಾಳಿಂಗರಾಯ, ಬೀರಲಿಂಗೇಶ್ವರ ಉತ್ಸವಗಳು ನಡೆಯುತ್ತಲೆ ಇವೆ. ಉತ್ಸವಕ್ಕೆ ಭಕ್ತರು ಬಂದು ಪೂಜೆ ಸಲ್ಲಿಸಿ ಇಷ್ಠಾರ್ಥಗಳ ಫಲ ಪಡೆದುಕೊಳ್ಳುತ್ತಾರೆ. ಪಲ್ಲಕ್ಕಿಯ ದಿವದ ಸಂಪ್ರಾದಾದಂತೆ ಇರಕಾರ ಬಟ್ಟೆಗಳನ್ನು ಹಾಕಿ ದೇವರ ಸೇವೆಯಲ್ಲಿ ಪಾಲ್ಗೊಳ್ಳುವುದು ಪದ್ಧತಿ ಇದೆ ಎಂದು ಹದನೂರ ಪೂಜಾರಿಗಳಾದ ನಾಗಪ್ಪ ಪೂಜಾರಿ ಜಟ್ಟಿಂಗರಾಯ ಅವರು ಹೇಳಿದರು.

About the Author

admin

Administrator

Visit Website View All Posts

Spread the love

Post navigation

Previous: ಕೆ.ಎಸ್.ಆರ್.ಟಿ.ಸಿ ಆರೋಗ್ಯ ಯೋಜನೆಗೆ ಚಾಲನೆ
Next: ‘ಗೃಹಲಕ್ಷ್ಮಿ’ಮಾದರಿಯಲ್ಲಿ “ಪ್ಯಾರಿ ದೀದಿ ಯೋಜನೆ ಜಾರಿ

Views:

18

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.