VR ಯಶಸ್ಸಿಗಾಗಿ ಅಭಿಮಾನಿಗಳ ವಿಶೇಷ ಪೂಜೆ..!

  • In Cinema
  • July 27, 2022
  • 236 Views
VR ಯಶಸ್ಸಿಗಾಗಿ ಅಭಿಮಾನಿಗಳ ವಿಶೇಷ ಪೂಜೆ..!

ಬೆಂಗಳೂರು, ಜು 27 : ವಿಜಯನಗರದ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆಯನ್ನು ಕಿಚ್ಚನ ಅಭಿಮಾನಿಗಳು ಸಲ್ಲಿಸಿದ್ದು, 101 ಕಳಶಗಳನ್ನ ಹೊತ್ತು ಮಹಿಳಾ ಅಭಿಮಾನಿಗಳು ಮೆರವಣಿಗೆ ನಡೆಸಿದ್ದಾರೆ.

ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಸಿನಿಮಾ ನಾಳೆ ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದ್ದು, ಅಭಿಮಾನಿಗಳ ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ. ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಸಂಭ್ರಮಾಚರಣೆ ಆರಂಭವಾಗಿದ್ದು, ನಾಳೆ ಸಿನಿಮಾ ಬಿಡುಗಡೆಯಾಗುತ್ತಿರುವ ಹಿನ್ನೆಲೆ ಅಭಿಮಾನಿಗಳು ಬೃಹತ್ ಮೆರವಣಿಗೆ ಮಾಡಿದ್ದಾರೆ.  ವಿವಿಧ ಚಿತ್ರಮಂದಿರಗಳಲ್ಲಿ ಸಹ ಕಿಚ್ಚನ ಕಟೌಟ್​ ರಾರಾಜಿಸುತ್ತಿದ್ದು, ಪ್ಯಾನ್​ ಇಂಡಿಯಾ ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಾಗುತ್ತಿದೆ.

ಇಂದು ವಿಜಯನಗರದ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆಯನ್ನು ಕಿಚ್ಚನ ಅಭಿಮಾನಿಗಳು ಸಲ್ಲಿಸಿದ್ದು, 101 ಕಳಶಗಳನ್ನ ಹೊತ್ತು ಮಹಿಳಾ ಅಭಿಮಾನಿಗಳು ಮೆರವಣಿಗೆ ಮಾಡಿದ್ದಾರೆ. ಅಲ್ಲದೇ, ಡೊಳ್ಳು ಕುಣಿತ  , ಚಂಡೆ ವಾದ್ಯ , ಪ್ರಚಾರದ ಟ್ಯಾಬ್ಲೋ ಜೊತೆಗೆ ಅಭಿನಯ ಚಕ್ರವರ್ತಿ ಬಾವುಟ ಹಿಡಿದು ಅಭಿಮಾನಿಗಳು ಭರ್ಜರಿ ಮೆರವಣಿಗೆ ಮಾಡುತ್ತಿದ್ದು, ಎಲ್ಲೆಡೆ ಸಂಭ್ರಮ ಮನೆಮಾಡಿದೆ.  ಇನ್ನು ಕಿಚ್ಚನ ಕಟೌಟ್​ಗೆ  ಹಾರ ಹಾಕಿ, ಪಟಾಕಿ ಸಿಡಿಸಿ ಅಭಿಮಾನಿಗಳು ಕಿಚ್ಚನ ಸಿನಿಮಾ ಪ್ರಮೋಷನ್​ ಮಾಡುತ್ತಿದ್ದು, ಮಾಗಡಿ ರಸ್ತೆಯ ವಿರೇಶ ಚಿತ್ರಮಂದಿರದವರೆಗೂ ಮೆರವಣಿಗೆ ಮಾಡಿದ್ದಾರೆ.

ಈ ಸಿನಿಮಾ ಕರ್ನಾಟಕದಲ್ಲಿ 400ಕ್ಕೂ ಹೆಚ್ಚು ಥಿಯೇಟರ್ ಗಳಲ್ಲಿ ರಿಲೀಸ್ ಮಾಡಲಾಗುತ್ತಿದೆ, ಅಲ್ಲದೇ, ವಿಶ್ವದಲ್ಲಿ 3200ಕ್ಕೂ ಹೆಚ್ಚು  ಬಾಲಿವುಡ್ ನಲ್ಲಿ 900ಕ್ಕೂ ಹೆಚ್ಚು ಥಿಯೇಟರ್​ಗಳಲ್ಲಿ ಬಿಡುಗಡೆಯಾಗುತ್ತಿದೆ. ಇನ್ನು ಹಿಂದಿಯಲ್ಲಿ 90%  3Dಯಲ್ಲಿ ರಿಲೀಸ್ ಆಗುತ್ತಿದೆ. ಈಗಾಗಲೇ, ವರ್ಡ್ ವೈಡ್ 800ಕ್ಕೂ ಹೆಚ್ಚು  ಶೋ ಅಡ್ವಾನ್ಸ್ ಬುಕ್ಕಿಂಗ್ ಆಗಿದೆ. 3D ಇರೋ ಕಡೆ ತುಂಬಾ ಪಾಸ್ಟ್ ಆಗಿ ಬುಕಿಂಗ್ ಆಗುತ್ತಿದೆ.  ಇಂದಿನಿಂದ ಮಲ್ಟಿಪ್ಲೆಕ್ಸ್ ಗಳಲ್ಲಿ ಬುಕಿಂಗ್ ಓಪನ್ ಆಗಲಿದೆ ಎಂದು ಮೊನ್ನೆ ಸುದ್ದಿಗೋಷ್ಟಿ ನಡೆಸಿದ್ದ ಸಿನಿಮಾ ನಿರ್ಮಾಪಕ ಜಾಕ್​ ಮಂಜು ಮಾಹಿತಿ ನೀಡಿದ್ದರು.

Related