ಮಂಗಳೂರು: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಇದರಲ್ಲಿ ಬಹಳ ದೊಡ್ಡ ಪಿತೂರಿ ನಡೆದಿದೆ ಹಾಗಾಗಿ ಈ ಪ್ರಕರಣವನ್ನು ಎನ್ಐಎ ಅಥವಾ ಸಿಬಿಐಗೆ ವಹಿಸಬೇಕೆಂದು ಬಿಜೆಪಿಯ ರಾಜ್ಯಧ್ಯಕ್ಷ ಬಿ ವೈ ವಿಜಯೇಂದ್ರ ಅವರು ಆಗ್ರಹಿಸಿದ್ದಾರೆ.
ಧರ್ಮಸ್ಥಳ ಕ್ಷೇತ್ರದ ಕುರಿತಾಗಿ ನಡೆಯುತ್ತಿರುವ ಪಿತೂರಿಗಳು ಹಾಗೂ ಅಪಪ್ರಚಾರವನ್ನು ಖಂಡಿಸಿ, ವಿರುದ್ಧ ಪಕ್ಷದ ನಾಯಕರದ ಆರ್ ಅಶೋಕ್ ಸೇರಿದಂತೆ ಬಿಜೆಪಿಯ ಹಲವು ಶಾಸಕರು ಮತ್ತು ನಾಯಕರು ಸೇರಿ ‘ಧರ್ಮಸ್ಥಳ ಚಲೋ’ ರ್ಯಾಲಿ ನಡೆಸಲಿದ್ದಾರೆ. ಧರ್ಮಸ್ಥಳ ಚಲೋ ರ್ಯಾಲಿಗೂ ಮುನ್ನ ಧರ್ಮಸ್ಥಳ ಕ್ಷೇತ್ರದಲ್ಲಿ ಶ್ರೀ ಮಂಜುನಾಥ ದೇವರ ದರ್ಶನ ಪಡೆದರು. ಇದನ್ನೂ ಓದಿ: ರಡ್ಡಿ ಸಹಕಾರ ಬ್ಯಾಂಕ್ ಶಾಖೆಯ ನೂತನ ಕಟ್ಟಡ ಉದ್ಘಾಟನೆ
ಅಲ್ಲದೆ ಧರ್ಮಸ್ಥಳ ದೇವಾಲಯದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿದರು. ಜಾತಿ, ಧರ್ಮ ಲೆಕ್ಕಿಸದೆ ಎಲ್ಲರೂ ಸಿಬಿಐ ಅಥವಾ ಎನ್ಐಎಯಿಂದ ಸಮಗ್ರ ತನಿಖೆಗೆ ಒತ್ತಾಯಿಸುತ್ತಿದ್ದಾರೆ. ಧರ್ಮಸ್ಥಳ ಪ್ರಸಂಗದಲ್ಲಿ ಇದು ಅತ್ಯಗತ್ಯ. ಇದು ಧರ್ಮಸ್ಥಳದ ಮಂಜುನಾಥನ ಎಲ್ಲಾ ಭಕ್ತರ ಬೇಡಿಕೆಯಾಗಿದೆ ಎಂದು ವಿಜಯೇಂದ್ರ ಹೇಳಿದರು.
