ಸ್ಕಾಟ್ಲೆಂಡ್ ಮಾಜಿ ಕ್ರಿಕೆಟಿಗನಿಗೆ ಸೋಂಕು

ಸ್ಕಾಟ್ಲೆಂಡ್ ಮಾಜಿ ಕ್ರಿಕೆಟಿಗನಿಗೆ ಸೋಂಕು

ಲಂಡನ್ , ಮಾ.21 : ಪಾಕಿಸ್ತಾನ ಮೂಲದ ಸ್ಕಾಟ್ಲೆಂಡ್ ಮಾಜಿ ಕ್ರಿಕೆಟಿಗ ಮಜೀದ್ ಹಕ್ ಅವರಿಗೆ ಮಾರಕ ಕೋವಿಡ್ -19 ವೈರಸ್ ಅಂಟಿರುವುದು ದೃಢಪಟ್ಟಿದೆ. ಈ ವಿಷಯನ್ನು ಸ್ವತಃ ಹಕ್ ತಿಳಿಸಿದ್ದು, “ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು ಅಪಾಯದಿಂದ ಪಾರಾಗಿದ್ದೇನೆ’ ಎಂದು ತಿಳಿಸಿದ್ದಾರೆ.
37 ವರ್ಷದ ಹಕ್ ಆಫ್ ಸ್ಪಿನ್ ಬೌಲರ್ ಆಗಿದ್ದಾರೆ. 2006ರಿಂದ 2015ರ ತನಕ ಸ್ಲಾಟ್ಲೆಂಡ್ ತಂಡದ ಪರ 54 ಏಕದಿನ, 24 ಟಿ20 ಪಂದ್ಯಗಳಲ್ಲಿ ಆಡಿದ್ದಾರೆ. ಗ್ಲಾಸೊದ ರಾಯಲ್ ಅಲೆಕ್ಸಾಂಡ್ರಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ

Related