ಬೆಂಗಳೂರು: ರಾಜ್ಯದ ರಾಜಧಾನಿ ಬೆಂಗಳೂರು ನಗರದಲ್ಲಿ ಇತ್ತೀಚಿಗೆ ಟ್ರಾಫಿಕ್ ಸಮಸ್ಯೆ ಹೆಚ್ಚಾಗುತ್ತಿರುವುದರಿಂದ ಈ ಟ್ರಾಫಿಕ್ ಸಮಸ್ಯೆಯನ್ನು ನಿವಾರಿಸಲು ಈಗಾಗಲೇ ನಗರದಲ್ಲಿ ಮೆಟ್ರೋ ಸಂಚಾರ ಪ್ರಾರಂಭವಾಗಿದೆ. ಅಲ್ಲದೆ ನಿನ್ನೆ (ಭಾನುವಾರ ಆಗಸ್ಟ್ 10) ರಂದು ದೇಶದ ಪ್ರಧಾನಿ ನರೇಂದ್ರ ಮೋದಿಯವರು ನೂತನವಾಗಿ ಹಳದಿ ಮೆಟ್ರೋ ಮಾರ್ಗವನ್ನು ಉದ್ಘಾಟನೆ ಮಾಡಿದ್ದಾರೆ.
ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕರಾಗಿರುವಂತಹ ಎಂ ಸತೀಶ್ ರೆಡ್ಡಿ ಅವರು ಇಂದು ಸೋಮವಾರ ಸೆಂಟ್ರಲ್ ಸಿಲ್ಕ್ ಬೋರ್ಡ್ ನಿಂದ ವಿಧಾನಸೌಧದ ವರೆಗೆ ಮೆಟ್ರೋದಲ್ಲಿ ಪ್ರಯಾಣ ಬೆಳೆಸಿದ್ದಾರೆ.
ಮೊದಲ ಬಾರಿಗೆ ಅವರು ಮೆಟ್ರೋದಲ್ಲಿ ಪ್ರಯಾಣ ಮಾಡಿ ಮಾತನಾಡಿದ ಅವರು, ಮೆಟ್ರೋದಲ್ಲಿ ಪ್ರಯಾಣ ಮಾಡುವುದರಿಂದ ಆರಾಮವಾಗಿ ನಾವು ತಲುಪಬೇಕಾದ ಸ್ಥಳಕ್ಕೆ ವೇಗವಾಗಿ ತಲುಪಬಹುದು. ನಗರದಲ್ಲಿ ಮೆಟ್ರೋ ಇರುವುದರಿಂದ ಪೊಲ್ಲ್ಯೂಷನ್ ಕಡಿಮೆಯಾಗುವುದರ ಜೊತೆಗೆ ಟ್ರಾಫಿಕ್ ನಿವಾರಣೆಯನ್ನು ಮಾಡಬಹುದು ಎಂದರು.
ಇಂದಿನಿಂದ ಮಳೆಗಾಲದ ಅಧಿವೇಶನ ಪ್ರಾರಂಭವಾಗುತ್ತಿದೆ. ಇಂದು ನಡೆಯುತ್ತಿರುವ ವಿಧಾನಸಭೆ ಮಳೆಗಾಲದ ಅಧಿವೇಶನಕ್ಕೆ ನಾನು ಮೆಟ್ರೋದಲ್ಲಿ ಪ್ರಯಾಣ ಬೆಳೆಸಿದೆ. ಬೊಮ್ಮನಹಳ್ಳಿ ಇಂದ ವಿಧಾನಸೌಧದ ವರೆಗೆ ಮೆಟ್ರೋ ದಲ್ಲೇ ಪ್ರಯಾಣ ಮಾಡಿದ್ದೇನೆ. ಇದು ನನಗೆ ಬಹಳ ಸಂತೋಷವಾಗಿದೆ ಅಲ್ಲದೆ ಪ್ರಯಾಣಿಕರು ಕೂಡ ಸಂತೋಷ ವ್ಯಕ್ತಪಡಿಸುತ್ತಿದ್ದಾರೆ ಎಂದರು.
ಸಾರ್ವಜನಿಕರು ಮೆಟ್ರೋದಲ್ಲಿ ಓಡಾಡುತ್ತಿರುವುದರಿಂದ ನಮ್ಮ ಭಾಗದ ಜನರಲ್ಲಿ ಇನ್ನಷ್ಟು ಖುಷಿ ಹೆಚ್ಚಾಗಿದೆ. ಅಲ್ಲದೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೂ ಕೂಡ ಸಾರ್ವಜನಿಕರು ಧನ್ಯವಾದ ತಿಳಿಸುತ್ತಿದ್ದಾರೆ ಎಂದರು. 
ಕೇವಲ ಎಲ್ಲೋ ಮಾರ್ಗವಲ್ಲದೆ ಬೆಂಗಳೂರು ನಗರದ ತುಂಬೆಲ್ಲ ಮೆಟ್ರೋ ಸಂಚಾರ ಸದ್ಯದಲ್ಲೇ ಪ್ರಾರಂಭವಾಗಲಿದೆ. ಬನ್ನಿ ಎಲ್ಲರೂ ಮೆಟ್ರೋದಲ್ಲಿ ಪ್ರಯಾಣ ಮಾಡೋಣ, ಪೊಲ್ಯೂಷನ್ ಕಂಟ್ರೋಲ್ ಮಾಡುವುದರ ಜೊತೆಗೆ ಟ್ರಾಫಿಕ್ ಮುಕ್ತ ನಗರವನ್ನು ಮಾಡೋಣ ಎಂದು ಸಾರ್ವಜನಿಕರಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಸಯ್ಯದ್ ಸಲಾಂ, ಎಸ್ ಕಾರ್ಪೊರೇಟರ್ ಜೆಲ್ಲಿ ರಮೇಶ್, ಮೋಹನ್ ರಾಜು, ಶ್ರೀನಿವಾಸ್, ಶ್ರೀನಿವಾಸ ರೆಡ್ಡಿ, ಬಾಬು ರೆಡ್ಡಿ ಸೇರಿದಂತೆ ಇನ್ನೂ ಹಲವಾರು ಬಿಜೆಪಿ ಕಾರ್ಯಕರ್ತರು ಜೊತೆಗಿದ್ದರು.
