ಸೀರೆ ಉಟ್ಟು ಕ್ರಿಕೆಟ್ ಆಡಿದ ಮಿಥಾಲಿ

ನವದೆಹಲಿ, ಮಾ.6 : ಭಾರತ ಮಹಿಳಾ ಕ್ರಿಕೆಟ್ ತಂಡದ ಸೂಪರ ಸ್ಟಾರ್ ಮಿಥಾಲಿ ರಾಜ್ ಸೀರೆಯುಟ್ಟು ಕ್ರಿಕೆಟ್ ಆಡಿದ್ದಾರೆ. ಅರೇ, ಸೀರೆಯುಟ್ಟು ಕ್ರಿಕೆಟ್ ಆಡುವುದಕ್ಕೆ ಆಗುತ್ತದಾ.? ಎಂದು ಹುಬ್ಬೇರಿಸಬೇಡಿ. ಬಹುರಾಷ್ಟ್ರೀಯ ಕಂಪೆನಿಯ ಬ್ರಾಂಡ್ ನ ಟಿವಿ ಜಾಹೀರಾತಿನಲ್ಲಿ ಮಿಥಾಲಿ ರಾಜ್ ಈ ರೀತಿಯಾಗಿ ಕಾಣಿಸಿಕೊಂಡಿದ್ದಾರೆ.
ಕ್ರಿಕೆಟ್ ಎಂದರೆ ಹುಡುಗರಿಗೆ ಮಾತ್ರ ಸೀಮಿತವೆಂಬಂತಿದ್ದ ಮಾತನ್ನು ಮಿಥಾಲಿ ರಾಜ್ ಸುಳ್ಳು ಮಾಡಿದ್ದರು. ಕ್ರಿಕೆಟ್ ವೃತ್ತಿ ಬದುಕಿನಲ್ಲಿ 20 ವರ್ಷ ಪೂರೈಸಿದ ಮೊಟ್ಟ ಮೊದಲ ಮಹಿಳಾ ಕ್ರಿಕೆಟರ್ ಎಂಬ ವಿಶೇಷವಾದ ದಾಖಲೆಯನ್ನು ಮಿಥಾಲಿ ಬರೆದಿದ್ದರು.
ಈಗ ಜಾಹೀರಾತುವೊಂದರಲ್ಲಿ ಸಾಂಪ್ರದಾಯಿಕ ಭಾರತೀಯ ಉಡುಗೆಯಲ್ಲಿ ಕ್ರಿಕೆಟ್ ಆಡಿ ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿದಿದ್ದಾರೆ. ಹಾಗೇ ಐಸಿಸಿ ಮಹಿಳಾ ವಿಶ್ವಕಪ್ ಟಿ-20 ವರ್ಲ್ಡ್ ಕಪ್ ಫೈನಲ್ ಗೆ ಪ್ರವೇಶಿಸಿದ ಭಾರತೀಯ ಮಹಿಳಾ ತಂಡಕ್ಕೆ ಅಭಿನಂದನೆಯನ್ನು ಸಲ್ಲಿಸಿದ್ದಾರೆ.
ಭಾರತದ ತಂಡ ಫೈನಲ್ ತಲುಪಿದ್ದು ನನಗೆ ತುಂಬಾ ಸಂತೋಷ ನೀಡಿದೆ. ಹಾಗೇ ಕ್ರಿಕೆಟ್ ಆಟಗಾರ್ತಿಯಾಗಿ ಇಂಗ್ಲೆಂಡ್ ತಂಡದ ಹುಡುಗಿಯರ ಕುರಿತು ನನಗೆ ಕಳಕಳಿ ಇದೆ. ಅವರು ತಲುಪಿದ ಸ್ಥಿತಿಯಲ್ಲಿ ನನ್ನನ್ನಾಗಲಿ ಅಥವಾ ನನ್ನ ತಂಡವನ್ನಾಗಲಿ ನಾನು ನೋಡಲು ಬಯಸುವುದಿಲ್ಲ. ಆದರೆ ನಿಯಮಗಳ ಮುಂದೆ ಯಾರು ದೊಡ್ಡವರಲ್ಲ. ಅಭಿನಂದನೆಗಳು ಹುಡುಗಿಯರೇ, ನಿಮ್ಮ ಸಾಧನೆ ದೊಡ್ಡದು ಎಂದು ಅಭಿನಂದನೆ ಸಲ್ಲಿಸಿದ್ದಾರೆ.

Related