ಸಂಕನೂರ ಹಳ್ಳದಲ್ಲಿ ಕೊಚ್ಚಿ ಹೋದ ಮಹಿಳೆಯರು, ಘಟನಾ ಸ್ಥಳಕ್ಕೆ ದೌಡಾಯಿಸಿದ ಸಚಿವರು

ಸಂಕನೂರ ಹಳ್ಳದಲ್ಲಿ ಕೊಚ್ಚಿ ಹೋದ ಮಹಿಳೆಯರು, ಘಟನಾ ಸ್ಥಳಕ್ಕೆ ದೌಡಾಯಿಸಿದ ಸಚಿವರು

ಕೊಪ್ಪಳ, 02: ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ಕಳೆದ ರಾತ್ರಿ ಯಲಬುರ್ಗಾ ತಾಲೂಕಿನ ಸಂಕನೂರು ಗ್ರಾಮದ ನಾಲ್ವರು ಮಹಿಳೆಯರು ಹಳ್ಳದಲ್ಲಿ ಕೊಚ್ಚಿ ಹೋಗಿರುವ ಘಟನೆ ನಡೆದಿದೆ.

ವಿಷಯ ತಿಳಿಯುತ್ತಿದ್ದಂತೆ ಘಟನೆ ನಡೆದ ಸ್ಥಳಕ್ಕೆ ಆಗಮಿಸಿದ ಸ್ಥಳೀಯ ಶಾಸಕರು ಹಾಗೂ ಸಚಿರಾದಂತಹ ಹಾಲಪ್ಪ ಆಚಾರ ಭೇಟಿ ನೀಡಿ ಪರಿಶೀಲನೆ ಮಾಡಿದರು. ಕುಟುಂಬ, ಗ್ರಾಮಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಅಳಲು ಮತ್ತು ಆಕ್ರಂದನ ವ್ಯಕ್ತಪಡಿಸಿದರು ಸದರಿ ಶಾಸಕರು ಹಾಗೂ ಸಚಿವರು ಮೃತ ಕುಟುಂಬಕ್ಕೆ ಘನ ಸರ್ಕಾರದಿಂದ ತಕ್ಷಣವೇ 5 ಲಕ್ಷ ನೇರವಾಗಿ ಮೃತರ ಖಾತೆಗೆ ಪರಿಹಾರ ಕೊಡಿಸಿದಾಗ ಭರವಸೆ ನೀಡಿದರು.
ಗ್ರಾಮಸ್ಥರ ಆಕ್ರೋಶಕ್ಕೆ ಮತ್ತು ಒತ್ತಡಕ್ಕೆ ಮಣಿದ ಸಚಿವರು, ಎರಡು ವರ್ಷದಿಂದಲೂ ಮೆಲ್ಸೇತುವೆ ಕಟ್ಟಿಸುವುದಾಗಿ ಕೇವಲ ಆಶ್ವಾಸನೆ ನೀಡುತ್ತಾ ಬಂದಿದ್ದರು, ಈ ದುರ್ಘಟನೆ ನಡೆದ ಬಳಿಕ ಎಚ್ಚೆತ್ತುಕೊಂಡ ಸಚಿವರು ಕೂಡಲೇ ಸರ್ಕಾರದಿಂದ ಮೆಲ್ಸೇತುವೆ ಕಟ್ಟಿಸುವ ಕಾಮಗಾರಿ ಪ್ರಕ್ರಿಯೆ ಮಂಜೂರು ಮಾಡಿಸುವುದಾಗಿ ಈ ಸಂದರ್ಭದಲ್ಲಿ ಹೇಳಿದರು.
ಹಾಗೆ, ಈ ಘಟನೆಯು ನನಗೂ ದುಃಖಕರ ತಂದಿದೆ, ಅವರ ದುಃಖದಲ್ಲಿ ನಾನು ಒಬ್ಬ, ದುಃಖದಲ್ಲಿ ನಾನು ಭಾಗಿಯಾಗುತ್ತೇನೆ ಎಂದು ಹೇಳಿ ಖುದ್ದು ಸಚಿವರೆ ಮೃತರ ಕುಟುಂಬಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿ, ಮೃತರ ಕುಟುಂಬಕ್ಕೆ ವೈಯಕ್ತಿಕ ಪರಿಹಾರ ನೀಡುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಸುಂದರೇಶ್ ಬಾಬು, ಎಸ್ ಪಿ ಅರುಣಾಂಗ್ಶು ಗಿರಿ, ತಾಲೂಕಿನ ಸಿಪಿಐ ವೀರಾರೆಡ್ಡಿ, ಗ್ರಾಮ ಪಂಚಾಯಿತಿ ಸದಸ್ಯರು, ಗ್ರಾಮಸ್ಥರು ಮುಂತಾದವರು ಘಟನೆ ನಡೆದ ಸ್ಥಳದಲ್ಲಿದ್ದರು.

Related