ಬೆಂಗಳೂರು: ರಾಜ್ಯದಲ್ಲಿ ಎಷ್ಟೋ ಕುಟುಂಬಗಳು ಪಡಿತರ ಚೀಟಿಯಿಂದ ಬರುವ ದವಸಧಾನ್ಯಗಳಿಂದ ತಮ್ಮ ಕುಟುಂಬದ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ. ಇನ್ನು ಕರ್ನಾಟಕ ಸರ್ಕಾರವು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಅನ್ನಭಾಗ್ಯ ಯೋಜನೆಯಿಂದ ಈಗಾಗಲೇ ಎಷ್ಟೋ ಕುಟುಂಬಗಳು ತಮ್ಮ ಹೊಟ್ಟೆ ತುಂಬ ಆಹಾರವನ್ನು ಸೇರಿಸಿಕೊಳ್ಳುತ್ತಿದ್ದಾರೆ.
ಕರ್ನಾಟಕ ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘದ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮವನ್ನು ನಗರದ ಸಾಮ್ರಾಟ್ ಹೊಟೇಲ್ ಲ್ಲಿ ಆಯೋಜಿಸಿದ್ದು ಕಾರ್ಯಕ್ರಮವನ್ನು ಉದ್ಘಾಟಿಸಿ ಕ್ಯಾಲೆಂಡರ್ ಬಿಡುಗಡೆ ಮಾಡಿದ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಕೆಹೆಚ್. ಮುನಿಯಪ್ಪ ರವರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಸರ್ಕಾರದ ಪ್ರಮುಖ ಪಂಚ ಗ್ಯಾರಂಟಿ ಯೋಜನೆಗಳು ಸಾರ್ವಜನಿಕರ ಅಭಿವೃದ್ಧಿಗಾಗಿ ಜಾರಿಗೆ ತಂದಿದ್ದು ಅನ್ನಭಾಗ್ಯ ಯೋಜನೆಯಡಿ ನ್ಯಾಯ ಬೆಲೆ ಅಂಗಡಿ ಮಾಲಿಕರು ಗ್ರಾಹಕರಿಗೆ ಕ್ರಮಬದ್ದವಾಗಿ ಪಡಿತರ ವಿತರಿಸುವ ಜವಾಬ್ದಾರಿಯನ್ನು ವಹಿಸಬೇಕು ಎಂದರು.
ತೂಕದಲ್ಲಿ ಯಾವುದೇ ಮೋಸವಿಲ್ಲದೆ ಪಡಿತರವನ್ನು ಸಮರ್ಪಕವಾಗಿ ಹಂಚಿಕೆ ಮಾಡಬೇಕು ಹಾಗೂ ಗ್ರಾಹಕರಿಗೆ ಸರಿಯಾದ ಸಮಯಕ್ಕೆ ತಾವು ಪಡಿತರವನ್ನು ವಿತರಿಸಬೇಕು ಎಂದರು. ರಾಗಿಯನ್ನು ಶುಧ್ದೀಕರಿಸಿ ನಾವು ಗ್ರಾಹಕರಿಗೆ ವಿತರಿಸಲು ಕ್ರಮವಹಿಸಿದ್ದು ಜೋಳವನ್ನು ಹಂಚಲು ವಿತರಿಸಲು ಅದನ್ನು ದೀರ್ಘ ಕಾಲ ನಾವು ದಾಸ್ತಾನು ಮಾಡಲು ಸಾದ್ಯವಿಲ್ಲಾ ಆದರು ಅದನ್ನು ರೈತರಿಂದ ಖರೀದಿಸಿ ವಿತರಿಸಲು ಕ್ರಮ ವಹಿಸಲಾಗುತ್ತದೆ ಎಂದರು. ನಾನು ನಿಮ್ಮ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತೇನೆ ಎಂದರು. ಇದನ್ನೂ ಓದಿ: ಕಾಂಗ್ರೆಸ್ ಡಿನ್ನರ್ ಮೀಟಿಂಗ್ ಗೆ ವ್ಯಂಗ್ಯವಾಡಿದ ಆರ್ ಅಶೋಕ್..!
ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಕ್ಕೆ ಸುತ್ತೋಲೆ ನೀಡಿದ್ದು ನ್ಯಾಯಬೆಲೆ ಮಾಲಿಕರು ಸ್ಮಾರ್ಟ್ ಪಿಡಿಎಸ್ ಮೂಲಕ ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ತಂತ್ರಜ್ಞಾನದ ಮೂಲಕ ಆಧುನೀಕರಣ ಮತ್ತು ಸುಧಾರಣೆಗಾಗಿ ಯೋಜನೆಯಾಗಿದ್ದು ಇದು ಭಾರತದಲ್ಲಿ ತಂತ್ರಜ್ಞಾನ ಆಧಾರಿತ ಉಪಕ್ರಮವಾಗಿದ್ದು, ಸಾರ್ವಜನಿಕ ವಿತರಣಾ ವ್ಯವಸ್ಥೆಯ (PDS) ಯಡಿಯಲ್ಲಿ ತಾವು ನೊಂದಣಿ ಮಾಡಿಕೊಳ್ಳಬೇಕು ಇದೇ ಜುಲೈ ತಿಂಗಳು ಅಂತಿಮ ದಿನಾಂಕವಾಗಿದ್ದು ಕೇಂದ್ರ ಸರ್ಕಾರದಿಂದ ಬರುವ 21 ರೂಗಳ ಹೆಚ್ಚುವರಿ ಹಣ ಖಡಿತವಾಗುವುದನ್ನು ತಪ್ಪಿಸಬೇಕು ಎಂದರು
ಈ ಸಂದರ್ಭದಲ್ಲಿ ಸಚಿವರ ಆಪ್ತ ಕಾರ್ಯದರ್ಶಿ ಡಾ.ಹೆಚ್. ನಟರಾಜ್, ಸಂಘದ ಅಧ್ಯಕ್ಷರಾದ ಕೆ.ಕೆ.ಕೃಷ್ಣಪ್ಪ ಹಾಗೂ ಸಂಘದ ಪಧಾದಿಕಾರಿಗಳು ,ನ್ಯಾಯ ಬೆಲೆ ಅಂಗಡಿಗಳ ಮಾಲಿಕರು ಉಪಸ್ಥಿತರಿದ್ದರು.
