ಬೆಂಗಳೂರು: ಗ್ರೇಟರ್ ಬೆಂಗಳೂರು ವ್ಯಾಪ್ತಿಯ ಪರಿಶಿಷ್ಟ ಜಾತಿಯ ಸಮಗ್ರ ಸಮೀಕ್ಷೆ 2025 ರ ಮುಖಂಡರ ಸಭೆಯನ್ನು ಆಯೋಜಿಸಿದ್ದು ಮಾನ್ಯ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಕೆಹೆಚ್. ಮುನಿಯಪ್ಪ ರವರು ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಡಾ.ಬಾಬು ಜಗಜೀವನ್ ರಾಂ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಚಾಲನೆ ನೀಡಿದರು.
ನಗರದ ತಾಮರ ಹೋಟೆಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಇದು ಪಕ್ಷಾತೀತವಾಗಿ ನಡೆಯುತ್ತಿರುವ ಕಾರ್ಯಕ್ರಮವಾಗಿದ್ದು ಸಮುದಾಯದ ಹಿತದೃಷ್ಟಿಯಿಂದ ಎಲ್ಲಾರು ಈ ಸಮೀಕ್ಷೆ ಕಾರ್ಯ ಯಶಸ್ವಿ ಗೊಳಿಸಲು ಕೋರಿದರು.
ನ್ಯಾಯಮೂರ್ತಿ ನಾಗಮೋಹನ್ ದಾಸ್ ರವರ ನೇತೃತ್ವದಲ್ಲಿ ಏಕ ಸದಸ್ಯ ಆಯೋಗದ ನಿರ್ದೇಶನದಂತೆ ಮೇ 6 ರಿಂದ ರಾಜ್ಯದಾದ್ಯಂತ ಸರ್ಕಾರವು ಸಮೀಕ್ಷೆಯ ಕಾರ್ಯ ನಡೆಸುತ್ತಿದ್ದು ಇದೇ ತಿಂಗಳ 30 ಕ್ಕೆ ಕೊನೆಗೊಳ್ಳಲಿದ್ದು ಎಲ್ಲಾ ಪರಿಶಿಷ್ಟ ಜಾತಿಯ 101 ಜಾತಿಯ ಸಮುದಾಯದವರು ತಮ್ಮ ತಮ್ಮ ಮೂಲ ಜಾತಿಯನ್ನು ನೊಂದಾಯಿಸಲು ಮನವಿ ಮಾಡಿದರು. ಇದನ್ನೂ ಓದಿ: ಪರಿಶಿಷ್ಟ ಜಾತಿಯ ಸಮಗ್ರ ಸಮೀಕ್ಷೆಯ ಕುರಿತು ಪರಿಶೀಲನೆ ನಡೆಸಿದ ಸಚಿವರು
ನಾನು ಇಂದು ಯಲಹಂಕ ತಾಲ್ಲೂಕಿನ ಚಿಕ್ಕ ಬೆಟ್ಟಹಳ್ಳಿ,ಸುರದೇನಪುರ, ಯಲಹಂಕ ಓಲ್ಡ್ ಟೌನ್, ಹಾಗೂ ಚಿಕ್ಕ ಬೊಮ್ಮಸಂದ್ರ ಬಡಾವಣೆಗಳಿಗೆ ಬೇಟಿ ನೀಡಿ ಸಮೀಕ್ಷೆಯ ಕಾರ್ಯ ವಿಧಾನಗಳನ್ನು ಪರಿಶೀಲನೆ ನಡೆಸಿ ಬಂದಿದ್ದು ಸಮೀಕ್ಷೆಯು ಉತ್ತಾಮವಾಗಿ ನಡೆದಿದೆ ಸ್ವಲ್ಪ ಸರ್ವರ್ ಸಮಸ್ಯೆಯ ಕಾರಣದಿಂದ ವಿಲಂಭವಾಗಿದೆ ಅಲ್ಲಿನ ಗಣತಿದಾರರಿಗೆ ಅಧಿಕಾರಿಗಳಿಗೆ ಸಮಸ್ಯೆಯನ್ನು ಬಗೆಹರಿಸಲು ಸೂಚನೆ ನೀಡಿದ್ದು ಇದು ಉತ್ತಮವಾಗಿ ನಡೆಯಲು ಸೂಚನೆ ನೀಡಿದ್ದೇನೆ ಎಂದರು.
