ತುಮಕೂರು: ಕಾಂಗ್ರೆಸ್ನ ಮಾಜಿ ಸಚಿವ ಕೆ ಎನ್ ರಾಜಣ್ಣ ಅವರು ಸತತ ಆರನೇ ಬಾರಿ ಡಿಡಿಸಿ ಬ್ಯಾಂಕಿನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.ಇಂದು (ಗುರುವಾರ ಸೆ. 04) ನಡೆದ ಚುನಾವಣೆಯಲ್ಲಿ ಅಧ್ಯಕ್ಷರ ಸ್ಥಾನಕ್ಕೆ ರಾಜಣ್ಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ರಾಜಣ್ಣರ ಆಪ್ತ ಜಿ.ಜೆ.ರಾಜಣ್ಣ ಆಯ್ಕೆಯಾಗಿದ್ದಾರೆ.
ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರೈತರ ಬದುಕನ್ನು ಹಸನಗೊಳಿಸೋದೆ ನಮ್ಮ ಉದ್ದೇಶ. ದೇಶದ ಜಿಡಿಪಿಗೆ ಹಳ್ಳಿಗಳ ರೈತರ ಕೊಡುಗೆ ಅಪಾರ. ಅವರಿಗೆ ಅನುಕೂಲ ಆಗುವ ರೀತಿಯಲ್ಲಿ ಬ್ಯಾಂಕಿನ ಯೋಜನೆ ಇರಲಿದೆ ಎಂದರು. ಇದನ್ನೂ ಓದಿ: ಜಿಎಸ್ಟಿ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ಮಾಡಿದ ಕೇಂದ್ರ ಸರ್ಕಾರ
ನಬಾರ್ಡ್ನಿಂದ ಅಫೆಕ್ಸ್ ಬ್ಯಾಂಕಿಗೆ 5500 ಕೋಟಿ ರೂ. ಬರಬೇಕಿತ್ತು. ಆದರೆ ಈ ಬಾರಿ ಕೇವಲ 2,340 ಕೋಟಿಯಷ್ಟೇ ಬಂದಿದೆ. ಅದರಿಂದ ಜಿಲ್ಲಾ ಬ್ಯಾಂಕುಗಳಿಗೆ ನಷ್ಟ ಆಗಲಿದೆ. ಸದ್ಯ ರೈತರ ಸಾಲ ಮನ್ನಾ ಮಾಡಲು ನಾನು ಒತ್ತಾಯ ಮಾಡೋದಿಲ್ಲ. ಆದರೆ ಕುಮಾರಸ್ವಾಮಿ ಕಾಲದಲ್ಲಿ ಮನ್ನಾ ಆಗಿದ್ದ ರೈತರ 258 ಕೋಟಿ ರೂ. ಬಿಡುಗಡೆ ಮಾಡುವಂತೆ ಒತ್ತಾಯ ಮಾಡೋದಾಗಿ ತಿಳಿಸಿದರು.
