ವರ್ಕೌಟ್ ವಿಡಿಯೋ ಹಂಚಿದ ರೈನಾ

ವರ್ಕೌಟ್ ವಿಡಿಯೋ ಹಂಚಿದ ರೈನಾ

ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಜಿಮ್ ನಲ್ಲಿ ವರ್ಕೌಟ್ ಮಾಡಿರುವ ತಮ್ಮ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಸದೃಢವಾಗಿರಲು ತಾಲೀಮು ಸ್ಥಿರತೆಯು ಮುಖ್ಯವಾಗಿದೆ ಎಂದು ಸುರೇಶ್ ರೈನಾ ಬರೆದುಕೊಂಡಿದ್ದು, ಈ ವಿಡಿಯೋಗೇ ಸಾಕಷ್ಟು ಲೈಕ್ಸ್ ಗಳು ಹಾಗೂ ಕಮೆಂಟ್ಸ್ ಗಳ ಸುರಿಮಳೆಯೇ ಹರಿದು ಬಂದಿದೆ.

ಸುರೇಶ್ ರೈನಾ ವೈಯಕ್ತಿಕ ಕಾರಣದಿಂದ ಕಳೆದ ಐಪಿಎಲ್ ನಿಂದ ದೂರ ಉಳಿದಿದ್ದರು. ಈ ಬಾರಿಯ ಐಪಿಎಲ್ ಗೆ ಚೆನ್ನೈ ಸೂಪರ್‌ಕಿಂಗ್ಸ್ ಪ್ರಾಂಚೈಸಿ ಸುರೇಶ್ ರೈನಾ ಅವರನ್ನು ಉಳಿಸಿಕೊಂಡಿದ್ದು ಚೆನ್ನೈ ಸೂಪರ್‌ಕಿಂಗ್ಸ್ ಪರ ಈ ಬಾರಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ.

Related