ಮೂಲಸೌಕರ್ಯಗಳನ್ನು ಒದಗಿಸಿ ವಿಧ್ಯಾರ್ಥಿ ಪಾಲಕರು ಅಗ್ರಹ

ಮೂಲಸೌಕರ್ಯಗಳನ್ನು ಒದಗಿಸಿ ವಿಧ್ಯಾರ್ಥಿ ಪಾಲಕರು ಅಗ್ರಹ

ದೇವದುರ್ಗ :ತಾಲ್ಲೂಕು ಕೇಂದ್ರದಲ್ಲಿರುವ ಬಾಲಕಿಯರ ಪ್ರೌಢ ಶಾಲೆಯಲ್ಲಿ ವಿಜ್ಞಾನ, ಕಂಪ್ಯೂಟರ್ ಬೋಧನೆ ಶಿಕ್ಷಕರನ್ನು ನೇಮಕ ಮಾಡಬೇಕು, ವಿಧ್ಯಾರ್ಥಿನಿಯರ ಅನುಕೂಲಕ್ಕಾಗಿ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಮಾಡಲು ಕ್ರಮಕೈಗೊಳ್ಳಬೇಕೆಂದು, ಪಾಲಕರಾದ ಯಲ್ಲಪ್ಪ ವಕೀಲರು, ಶಿವಣ್ಣ ಅಕ್ಕರಕಿ ಕ್ಷೇತ್ರದ ಶಿಕ್ಷಣ ಅಧಿಕಾರಿಗಳಿಗೆ ಮನವಿ ಪತ್ರ ಬರೆದು ಒತ್ತಾಯಿಸಿದ್ದಾರೆ.
ಹತ್ತನೆಯ ತರಗತಿ ವಿದ್ಯಾರ್ಥಿನಿಯರಿಗೆ ಇಂಗ್ಲೀಷ್ ಬೋಧನೆ ಮಾಡುವ ಶಿಕ್ಷಕರು ಸಮಯಕ್ಕೆ ಸರಿಯಾಗಿ ಬರದೆ ಉತ್ತಮವಾಗಿ ಪಾಠವನ್ನು ಹೇಳಿ ಕೊಡದ ಪರಿಣಾಮವಾಗಿ ಇಂಗ್ಲೀಷ್ ಮತ್ತು ಗಣಿತ ಕಲಿಕೆಯಲ್ಲಿ ಹಿಂದೆ ಬೀಳಲು ಪ್ರಮುಖ ಕಾರಣವಾಗಿದೆ ಎಂದು ವಿಧ್ಯಾರ್ಥಿಗಳ ಪಾಲಕರು ಮಕ್ಕಳ ಭವಿಷ್ಯದ ಶಿಕ್ಷಣದ ಬಗ್ಗೆ ನೋವು ವ್ಯಕ್ತಪಡಿಸಿದರು.
ಈಗಿನ ಮಕ್ಕಳು ಮುಂದಿನ ಪ್ರಜೆಗಳು ಎಂಬ ಮಾತನ್ನು ಸುಳ್ಳು ಮಾಡದೇ, ಉತ್ತಮ ಶಿಕ್ಷಕರ ನೇಮಕಾತಿ, ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಮೂಲಕ ವಿಧ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಕ್ರಮಕೈಗೊಳ್ಳಬೇಕೆಂದು ತಿಳಿಸಿದರು.

Related