ಶಹಾಪುರ: ಸಚಿನ್ ಪಾಂಚಾಳ್ ಸಾವಿನ ಪ್ರಕರಣದಲ್ಲಿ ಪ್ರಿಯಾಂಕ್ ಖರ್ಗೆಗೂ ಸಂಬಂಧವೇ ಇಲ್ಲಾ. ಡೆತ್ ನೋಟಲ್ಲಿ ಅವರ ಹೆಸರಿನ ಉಲ್ಲೇಖವಿಲ್ಲ. ಅವರ ವಿರುದ್ಧ ಯಾವುದೇ ಸಾಕ್ಷಾಧಾರ ಲಭ್ಯವಾಗಿಲ್ಲ. ಸುಖಸುಮ್ಮನೆ ಬಿಜೆಪಿ ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳಲು ಹೀಗೆ ಮಾಡುತ್ತಿದ್ದಾರೆ ಎಂದು ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಹೇಳಿದರು.
ನಗರಸಭೆ ಆವರಣದಲ್ಲಿ (ಮಂಗಳವಾರ ಜ. 07) ನಡೆದ ಆಶ್ರಯ ಸಮಿತಿ ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೂಡಾ ಹೆಸರಲ್ಲಿ ಸುಳ್ಳು ಆರೋಪ ಮಾಡಿದರು. ಈಗ ಅದು ಎಲ್ಲಿ ಹೋಯ್ತು. ದೇವೆಗೌಡ, ಯಡಿಯೂರಪ್ಪ ಒಬ್ಬರಿಗೊಬ್ಬರು ಆರೋಪಗಳನ್ನು ಮಾಡಿದರು ಈಗ ಇಬ್ಬರು ಸೇರಿ ಮೈತ್ರಿ ಮಾಡಿಕೊಂಡು ಚುನಾವಣೆ ಮಾಡಿದರು. 60% ಸರ್ಕಾರ ಎಂದು ಬಿಜೆಪಿ ಆರೋಪ ಮಾಡುತ್ತಿದೆ ಇನ್ನೊಂದೆಡೆ ಅಭಿವೃದ್ದಿಗೆ ಹಣ ಇಲ್ಲ ಎನ್ನುತ್ತಾರೆ. ಅಭಿವೃದ್ದಿಗೆ ದುಡ್ಡಿಲ್ಲ ಎಂದರೆ ಕೆಲಸಗಳು, ಭ್ರಷ್ಟಚಾರ ನಡೆಯಲು ಹೇಗೆ ಸಾಧ್ಯ. ಮೃತ ಸಚಿನ್ ಪಾಂಚಾಳ್ನ ಸಾವಿನಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದ್ದು ವಿಜಯೇಂದ್ರ, ಚಂದು ಪಾಟೀಲ್ ಯಾಕೆ ಮಾಡಿರಬಾರದು ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರದ ಅನುದಾನ ಕಡಿತ ಸಂಭವ
ನಗರದ ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಹೆರಿಗೆ ವೈದ್ಯರಿಲ್ಲದೇ ಗರ್ಭೀಣಿಯರು ಆಸ್ಪತ್ರೆಗೆ ಬರಲು ಹಿಂದೇಟು ಹಾಕುತ್ತಿದ್ದಾರೆ ಎಂದು ಪತ್ರಕರ್ತರ ಪ್ರಶ್ನೇಗೆ ಉತ್ತರಿಸಿದ ಸಚಿವರು, ಆಸ್ಪತ್ರೆಗೆ ಬರುವ ವೈದ್ಯರನ್ನೇ ಹೊಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಹಗುರವಾಗಿ ಮಾತನಾಡಿ ಜಾರಿಕೊಂಡರು.
