ಬೆಂಗಳೂರು: ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಡಿಎಸ್ ನ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರು ಬೆಂಗಳೂರಿನಲ್ಲಿರುವ ಪರಪ್ಪನ ಅಗ್ರಹಾರ ಜೈಲಿನಲ್ಲಿ ಸೆರೆವಾಸ ಅನುಭವಿಸುತ್ತಿದ್ದಾರೆ.
ಅಪರಾಧಿಗಳನ್ನು ಜೈಲಿನಲ್ಲಿ ಸುಮ್ಮನೆ ಕೂರಿಸದೆ ಪ್ರತಿಯೊಬ್ಬ ಅಪರಾಧಿಗೂ ಕೂಡ ಕೆಲಸ ಮಾಡಲು ಜೈಲು ಅಧಿಕಾರಿಗಳು ಸೂಚನೆ ನೀಡುತ್ತಾರೆ. ಅಲ್ಲದೆ ಜೈಲಿನಲ್ಲಿ ಕೆಲಸ ಮಾಡಿದವರಿಗೆ ದಿನಕ್ಕೆ ದಿನಗೂಲಿಯಂತೆ ಸಂಬಳವನ್ನು ಕೂಡ ನೀಡಲಾಗುತ್ತದೆ.
ಇನ್ನು ಪ್ರಜ್ವಲ್ ರೇವಣ್ಣ ಅವರು ಜೈಲಿನಲ್ಲಿ ಕೂಲಿ ಕೆಲಸ ಮಾಡಲು ಜೈಲು ಅಧಿಕಾರಿಗಳು ತಿಳಿಸಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೆ ಪ್ರಜ್ವಲ್ ರೇವಣ್ಣ ಅವರಿಗೆ ಒಂದು ದಿನಕ್ಕೆ 540 ಸಂಬಳ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.
ಹೌದು, ಪ್ರಜ್ವಲ್ ರೇವಣ್ಣ ಕೃಷಿ ಕೆಲಸ ಹಾಗೂ ಅಡ್ಮಿನಿಸ್ಟ್ರೇಟಿವ್ ಕೆಲಸ ಮಾಡುವುದಾಗಿ ಜೈಲು ಅಧಿಕಾರಿಗಳಿಗೆ ತಿಳಿಸಿದ್ದಾರೆ. ಈ ಮೂಲಕ ಅವರು ಜೈಲಿನಲ್ಲಿ ದಿನನಿತ್ಯದ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ. ಇದನ್ನೂ ಓದಿ: ಪತ್ರಿಕಾ ವಿತರಕರು-ಏಜೆಂಟರು ಪತ್ರಿಕೋದ್ಯಮದ ಬೆನ್ನುಮೂಳೆ: ಕೆವಿಪ್ರ
ಪ್ರಜ್ವಲ್ ರೇವಣ್ಣಗೆ ಜೈಲಿನಲ್ಲಿ ಮಾಡಿದ ಕೆಲಸಕ್ಕೆ ಪ್ರತಿ ದಿನ 540 ರೂಪಾಯಿ ಕೂಲಿ ನೀಡಲಾಗುತ್ತಿದೆ. ಒಂದು ವರ್ಷದ ನಂತರ, ದಿನನಿಯ ಕೂಲಿ 615 ರೂಪಾಯಿಯಾಗಿ ನಿಗದಿಯಾಗಲಿದೆ. ಜೈಲು ನಿಯಮದಂತೆ, ಶಿಕ್ಷಿತರು ಅಧಿಕಾರಿಗಳಿಂದ ನೀಡಿದ ಕೆಲಸವನ್ನು ಮಾಡಬೇಕು ಅಥವಾ ತಮ್ಮ ಅನುಸರಿಸುವ ವ್ಯಾಸಂಗಕ್ಕೆ ಅನುಗುಣವಾಗಿ ಕೆಲಸ ನಿರ್ವಹಿಸಬೇಕು.
