ಬೆಂಗಳೂರು: ಇನ್ಮುಂದೆ ನಡೆಯಲಿರುವ ಸ್ಥಳೀಯ ಚುನಾವಣೆಗೆ ಬ್ಯಾಲೆಟ್ ಪೇಪರ್ ಬಳಕೆ ಮಾಡಲಾಗುವುದು ಎಂದು ರಾಜ್ಯ ಕಾಂಗ್ರೆಸ್ ಸರ್ಕಾರ ಹೇಳಿದೆ. ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಸುವುದರಿಂದ ಅಕ್ರಮ ನಡೆಯಲಿದೆ ಎಂದು ಬಿಜೆಪಿ ನಾಯಕರು ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ.
ಇನ್ನು ಬಿಜೆಪಿಯವರ ಆಕ್ಷೇಪದ ವಿಚಾರವಾಗಿ ಇದೀಗ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬ್ಯಾಲೆಟ್ ಪೇಪರ್ ಬಳಕೆ ಮಾಡಿದ್ರೆ ಬಿಜೆಪಿಯವರಿಗೆ ಯಾಕೆ ಆತಂಕ ಶುರುವಾಗಿದೆ ಎಂಬುದು ನಮಗೆ ಗೊತ್ತಾಗುತ್ತಿಲ್ಲ. ಇಲ್ಲಿವರೆಗೆ ನಡೆದಿರುವ ಚುನಾವಣೆಯಲ್ಲಿ ಅಕ್ರಮದ ಕುರಿತಾಗಿ ನಾವು ಧ್ವನಿ ಎತ್ತಲು ಈ ತೀರ್ಮಾನವನ್ನು ತೆಗೆದುಕೊಂಡಿದ್ದೇವೆ ಎಂದು ಹೇಳಿದರು.
ಕರ್ನಾಟಕ ಸರ್ಕಾರದ ತೀರ್ಮಾನ ಬಿಜೆಪಿಗೆ ಯಾಕೆ ಆತಂಕ? ಸ್ಥಳೀಯ ಸಂಸ್ಥೆ ಚುನಾವಣೆ ನಡೆಸಲು ಸರ್ಕಾರಕ್ಕೆ ಅವಕಾಶ ಇದೆ. ಕಾನೂನಲ್ಲೇ ಇದೆ ಅವರ ಅವಧಿಯಲ್ಲೇ ಮಾಡಿದಂತ ಕಾನೂನಿನಲ್ಲೇ ಇದೆ. ಬ್ಯಾಲೆಟ್ ಅಥವಾ ಇವಿಎಂನಲ್ಲಿ ಚುನಾವಣೆ ಮಾಡಬಹುದು ಅಂತ ಇದೆ. ಸ್ಥಳೀಯ ಸಂಸ್ಥೆಗಳ ಚುನಾವಣೆ ವೇಳೆ ಬ್ಯಾಲೆಟ್ ಪೇಪರ್ ಬಳಕೆ ಮಾಡಬೇಕು ಅಂತ ಸರ್ಕಾರ ತೀರ್ಮಾನಿಸಿದೆ. ಗಾಬರಿ ಯಾಕೆ ಆಗುತ್ತಿದೆ ನಿಮಗೆ? ಕಳ್ಳನ ಮನಸ್ಸು ಹುಳ್ಳುಹುಳ್ಳಗೆ ಅಂದಾಗೆ ನೋಡಿಕೊಳ್ಳುತ್ತಿದ್ದೀರಾ? ಅಂತ ಕುಟುಕಿದ್ದಾರೆ. ಇದನ್ನೂ ಓದಿ: ಮುಂಬೈಗೆ ಬಂತು ಬಾಂಬ್ ಎಚ್ಚರಿಕೆ ಸಂದೇಶ!
ನಾವು ಪಾರ್ಲಿಮೆಂಟ್ ಎಲೆಕ್ಷನ್ ಎಲ್ಲ ತನಿಖೆ ಮಾಡಿದ್ದೇವೆ. ಆದ್ರ ಬಗ್ಗೆ ನಾನು ಚರ್ಚೆ ಮಾಡಲ್ಲ. ಸೊಸೈಟಿಗೆ ಚುನಾವಣೆ ಮಾಡಲ್ವ ಅದೇ ರೀತಿ ಮಾಡಬೇಕು ಅಂದುಕೊಂಡಿದ್ದೇವೆ. ಸೆಂಟ್ರಲ್ ಎಲೆಕ್ಷನ್ ಕಮಿಷನ್ ಸ್ಟೇಟ್, ಪಾರ್ಲಿಮೆಂಟ್, ಅಸೆಂಬ್ಲಿದು ಅವರು ಏನು ತೀರ್ಮಾನ ಮಾಡ್ತಾರೋ ಮಾಡಲಿ. ಸರ್ಕಾರದ ತೀರ್ಮಾನ ಸ್ಥಳೀಯ ಸಂಸ್ಥೆಯ ಚುನಾವಣೆಗೆ ಅಂತ ಸ್ಪಷ್ಟಪಡಿಸಿದರು.
