ಬೆಂಗಳೂರು: ರಾಜಕೀಯದಲ್ಲಿ ಹುಷಾರಾಗಿರಬೇಕು. ರಾಜಕೀಯ ಮಾಡಬೇಕಾದ್ರೆ ನಮ್ಮ ಜಾಗೃತಿಯಲ್ಲಿ ನಾವು ಇರಬೇಕು ಅಂದರೆ ಮಾತ್ರ ರಾಜಕೀಯದಲ್ಲಿ ಬೆಳೆಯಲು ಸಾಧ್ಯ. ಇಲ್ಲದಿದ್ದರೆ ಒಬ್ಬರ ಮೇಲೆ ಒಬ್ಬರು ಹಗೆ ಸಾಧಿಸುತ್ತಾರೆ ಎಂದು ಸಚಿವ ಸತೀಶ್ ಜಾರಕಿಹೊಳಿಯವರು ಹೇಳಿದ್ದಾರೆ.
ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೆ ಎನ್ ರಾಜಣ್ಣ ಅವರನ್ನು ವಜಾ ಮಾಡಬೇಕೆಂದು ಹೈಕಮಾಂಡ್ ನಿರ್ಧಾರ ತೆಗೆದುಕೊಂಡಿದೆ ಹಾಗಾಗಿ ಇದರ ಬಗ್ಗೆ ನಾವು ಹೆಚ್ಚಿಗೆ ಏನು ಮಾತನಾಡಬಾರದು. ದೆಹಲಿಗೆ ಹೋಗೋದಾಗಿ ಅವರೇ ಹೇಳಿದ್ದಾರೆ. ಆಮೇಲೆ ಪಿತೂರಿ ಅಂತ ಹೇಳಿದ್ದಾರೆ. ಹೈಕಮಾಂಡ್ ಹತ್ರ ಹೋಗಿ ಅವರು ಮಾತಾಡ್ತಾರೆ. ವಜಾದ ಬಗ್ಗೆ ವ್ಯಾಖ್ಯಾನ ಮಾಡೋಕೆ ಹೋಗಲ್ಲ ಎಂದಿದ್ದಾರೆ. ಇದನ್ನೂ ಓದಿ: ಕೃಷ್ಣ ಬೈರೇಗೌಡ ಅವರದ್ದು ಸಾರ್ವಜನಿಕ ಬೇಡಿಕೆ, ಮುನಿರತ್ನ ಅವರದ್ದು ಖಾಸಗಿ ಬೇಡಿಕೆ: ಡಿಕೆಶಿ
ಇದು ನಮ್ಮ ಪಕ್ಷದ ನಿರ್ಧಾರ ವಿಪಕ್ಷಗಳು ಯಾಕೆ ಮಾತಾಡ್ತಾರೆ. ಸಿಎಂ ಅವರು ಸ್ಪಷ್ಟನೆ ಕೊಡ್ತಾರೆ. ದೆಹಲಿಗೆ ಹೋದ ಮೇಲೆ ಎಲ್ಲವೂ ತಿಳಿಯಾಗಬಹುದು. ರಾಜಕೀಯದಲ್ಲಿ ಹುಷಾರಾಗಿ ಇರಬೇಕು. ಇಲ್ಲದೆ ಹೋದ್ರೆ ಹೀಗೆ ಆಗುತ್ತದೆ. ರಾಜಕೀಯದಲ್ಲಿ ಒಬ್ಬರ ಮೇಲೆ ಒಬ್ಬರಿಗೆ ಹಗೆ ಇರೋದು ಸಾಮಾನ್ಯ ಎಂದು ಹೇಳಿದ್ದಾರೆ.
