ಜೋಗ ಫಾಲ್ಸ್ ಪ್ರವಾಸಿಗರಿಗೆ ನೆಗೆಟಿವ್ ರಿಪೋರ್ಟ್ ಕಡ್ಡಾಯ

  • In State
  • August 16, 2021
  • 407 Views
ಜೋಗ ಫಾಲ್ಸ್ ಪ್ರವಾಸಿಗರಿಗೆ ನೆಗೆಟಿವ್ ರಿಪೋರ್ಟ್ ಕಡ್ಡಾಯ

ಶಿವಮೊಗ್ಗ : ಜೋಗ ಫಾಲ್ಸ್ ಗೆ ಪ್ರವಾಸ ತೆರಳುವ ಪ್ರವಾಸಿಗರಿಗೆ ಶಿವಮೊಗ್ಗ ಜಿಲ್ಲಾಡಳಿತ ಸೋಮವಾರ ಖಡಕ್ ಸೂಚನೆ ನೀಡಿದ್ದು, ಫಾಲ್ಸ್ ಗೆ  ಭೇಟಿ ನೀಡುವ ಪ್ರವಾಸಿಗರಿಗೆ ನೆಗೆಟಿವ್ ವರದಿ ಕಡ್ಡಾಯ ಮಾಡಲಾಗಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ ಕೊರೊನಾ ಸೋಂಕು ನಿಯಂತ್ರಿಸುವ ಸಲುವಾಗಿ ಜಿಲ್ಲಾಡಳಿತ ಬಿಗಿ ಕ್ರಮಗಳನ್ನು ಕೊಂಡಿದೆ. ಫಾಲ್ಸ್ ವೀಕ್ಷಣೆಗೆ ಬರುವ ಪ್ರವಾಸಿಗರು 72 ಗಂಟೆಗಳ ಹಿಂದೆ ಪಡೆದಿರುವ ಆರ್ ಟಿ-ಪಿಸಿಆರ್ ನೆಗೆಟಿವ್ ರಿಪೋರ್ಟ್  ಕಡ್ಡಾಯ ಇರಬೇಕು. ಇಲ್ಲವೇ ಎರಡು ಡೋಸ್ ಲಸಿಕೆ ಪಡೆದ ದಾಖಲೆ ಇರಬೇಕು ಎಂದು ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

Related