ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಪ್ರತಿ ವರ್ಷವೂ 10 ದಿನಗಳು ಮಾತ್ರ ನಡೆಯುತ್ತಿತ್ತು. ಆದರೆ ಈ ವರ್ಷ 11 ದಿನಗಳ ವರೆಗೆ ಮೈಸೂರು ದಸರಾ ನಡೆಯಲಿದೆ ಎಂದು ತಿಳಿದು ಬಂದಿದೆ.
ಪ್ರತಿ ವರ್ಷವೂ ಮೈಸೂರು ದಸರಾವನ್ನು 9 ದಿನದಿಂದ ಹಿಡಿದು 10 ದಿನದ ವರೆಗೆ ಆಚರಣೆ ಮಾಡಲಾಗುತ್ತಿತ್ತು. ಆದರೆ ಈ ವರ್ಷ 11 ದಿನಗಳ ಕಾಲ ಆಚರಣೆ ಮಾಡಬೇಕಾಗಿದೆ.
ಹೌದು, ಈ ಬಾರಿ ಮೈಸೂರು ದಸರಾ ನಡೆಯುವ ಸಂದರ್ಭದಲ್ಲಿ ಪಂಚಮಿ ತಿಥಿ 2 ದಿನಗಳ ಬಂದಿರುವುದರಿಂದ 11ನೇ ದಿನಕ್ಕೆ ವಿಜಯದಶಮಿ ಆಚರಣೆ ಮಾಡಲಾಗುತ್ತದೆ. ತಿಥಿಗಳ ಪ್ರಕಾರ ಸೆ.22 ರಿಂದ ಅ. 2ರ ವರೆಗೆ ಅಂದ್ರೆ 11 ದಿನ ದಸರಾ ಉತ್ಸವ ನಡೆಯಲಿದೆ. ಸೆ.24 ರಂದು ಬರುವ ಪಂಚಮಿ ತಿಥಿ 25ಕ್ಕೂ ಮುಂದುವರಿಯುವ ಕಾರಣ ದಸರಾ 11 ದಿನ ಆಗಲಿದೆ. ಇದನ್ನೂ ಓದಿ: ತಾಯಿ, ಮಕ್ಕಳ ಆರೈಕೆ ಕೇಂದ್ರಕ್ಕಾಗಿ ಉನ್ನತ ಸೌಲಭ್ಯಗಳ ಪೂರೈಕೆ
ನೂರು ವರ್ಷಗಳ ಹಿಂದೆ ದಸರಾ 11 ದಿನ ನಡೆದಿರಬಹುದು. ಆದ್ರೆ ನನ್ನ ಅನುಭವದಲ್ಲಿ ಇದೇ ಮೊದಲು 11 ದಿನ ನಡೆಯುತ್ತಿದೆ ಎಂದು ಧಾರ್ಮಿಕ ಚಿಂತಕ ಡಾ. ಶೆಲ್ವಪಿಳೈ ಅಯ್ಯಂಗಾರ್ ತಿಳಿಸಿದ್ದಾರೆ.
