10 ಕೆಜಿ ಚಿನ್ನ ಧರಿಸುತ್ತಿದ್ದ “ಗೋಲ್ಡ್ ಮ್ಯಾನ್” ವಿಧಿವಶ

10 ಕೆಜಿ ಚಿನ್ನ ಧರಿಸುತ್ತಿದ್ದ “ಗೋಲ್ಡ್ ಮ್ಯಾನ್” ವಿಧಿವಶ

ಮುಂಬೈ: “ಗೋಲ್ಡ್ ಮ್ಯಾನ್” ಎಂದೇ ಖ್ಯಾತಿಯಾಗಿದ್ದ ಮಹಾರಾಷ್ಟ್ರದ ಉದ್ಯಮಿ ಸಾಮ್ರಾಟ್ ಮೊಜೆ(39ವರ್ಷ) ಹೃದಯ ಸ್ತಂಭನದಿಂದ ಸಾವನ್ನಪ್ಪಿರುವುದಾಗಿ ವರದಿಯಾಗಿದೆ.

ಮೊಜೆ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದು, ಪತ್ನಿ, ಇಬ್ಬರು ಮಕ್ಕಳು ಹಾಗೂ ತಾಯಿಯನ್ನು ಅಗಲಿದ್ದಾರೆ.

ಪುಣೆಯ ಸಂಗಮ್ ವಾಡಿ ಪ್ರದೇಶದ ನಿವಾಸಿಯಾಗಿದ್ದ ಸಾಮ್ರಾಟ್ ಹತ್ತು ಕೆಜಿ ಚಿನ್ನವನ್ನು ಧರಿಸಿಕೊಳ್ಳುವ ಮೂಲಕ ಗೋಲ್ಡ್ ಮ್ಯಾನ್ ಎಂದೇ ಜನಪ್ರಿಯರಾಗಿದ್ದರು.

ಲಾಕ್ ಡೌನ್ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಪುಣೆಯ ಯರವಾಡದ ಬಳಿ ಕುಟುಂಬದ ಕೆಲವೇ ಸದಸ್ಯರ ಸಮ್ಮುಖದಲ್ಲಿ ಸಾಮ್ರಾಟ್ ಮೊಜೆ ಅವರ ಅಂತ್ಯಕ್ರಿಯೆ ನೆರವೇರಿಸಲಾಯಿತು ಎಂದು ಕುಟುಂಬದ ಮೂಲಗಳು ತಿಳಿಸಿವೆ.

Related