ಹೊಸ ಶಿಕ್ಷಣ ನೀತಿ ವಿರೋಧಿಸಿ ಚಳವಳಿ

ಹೊಸ ಶಿಕ್ಷಣ ನೀತಿ ವಿರೋಧಿಸಿ ಚಳವಳಿ

ವಿಜಯಪುರ : ಕೇಂದ್ರ ಸರ್ಕಾರದ ಹೊಸ ಶಿಕ್ಷಣ ನೀತಿ (ಎನ್ಇಪಿ)ಯನ್ನು ವಿರೋಧಿಸಿ ಹಮ್ಮಿಕೊಂಡಿರುವ ಅಖಿಲ ಭಾರತ ಪ್ರತಿಭಟನಾ ಸಪ್ತಾಹವನ್ನು ಬೆಂಬಲಿಸಿ ಎಐಡಿವೈಒ ಶುಕ್ರವಾರ ಆನ್‌ಲೈನ್ ಚಳವಳಿ ನಡೆಸಿತು.

ಭಾರತದ ನವೋದಯದ ಚಿಂತಕರ ಬೋಧನೆಗಳನ್ನು ಗಾಳಿಗೆ ತೂರಿ, ವೈಜ್ಞಾನಿಕ, ಜನತಾಂತ್ರಿಕ, ಧರ್ಮನಿರಪೇಕ್ಷ ಚಿಂತನೆಗಳನ್ನು ನಾಶಗೊಳಿಸಿ ವಿದ್ಯಾರ್ಥಿಗಳಲ್ಲಿ ಮತೀಯತೆ, ನಿಗೂಢತೆ ಮತ್ತು ಮಧ್ಯಕಾಲೀನ ಮನೋಭಾವವನ್ನು ಬೆಳೆಸುವ ಹೊಸ ಶಿಕ್ಷಣ ನೀತಿಯನ್ನು ಒಪ್ಪುವುದಿಲ್ಲ ಎಂದರು.

ಶಿಕ್ಷಣವನ್ನು ಸಂಪೂರ್ಣವಾಗಿ ಖಾಸಗಿಕರಣ, ವ್ಯಾಪಾರಿಕರಣ, ಕೇಸರಿಕರಣ ಮತ್ತು ಫ್ಯಾಸಿಕರಣಗೊಳಿಸುವ ಉದ್ದೇಶದಿಂದ ಕೇಂದ್ರ ಬಿಜೆಪಿ ನೇತೃತ್ವದ ಸರ್ಕಾರವು ಶಿಕ್ಷಣ ತಜ್ಞರ, ಬುದ್ಧಿಜೀವಿಗಳ, ವಿಜ್ಞಾನಿಗಳ, ಶಿಕ್ಷಕರ, ಪೋಷಕರ ಮತ್ತು ವಿದ್ಯಾರ್ಥಿಗಳ ವಿರೋಧದ ನಡುವೆಯೂ ಕೋವಿಡ್-19 ಅಸಹಾಯಕ ಪರಿಸ್ಥಿತಿಯ ದುರ್ಲಾಬ ಪಡೆದು ವಂಚನೆಯಿಂದ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಘೋಷಿಸಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

Related